Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ನಾಳೆ ಸಾರಿಗೆ ನೌಕರರ ಪರವಾದ ಸರ್ವ ಸಂಘಟನೆಗಳ ಸಭೆ : ಎಐಟಿಯುಸಿ, ಸಿಐಟಿಯು ಸೇರಿ ಎಲ್ಲ ಸಂಘಟನೆಗಳ ಪ್ರಮುಖರು ಭಾಗಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ ಏಪ್ರಿಲ್‌ನಲ್ಲಿ ನಡೆದಂತಹ ಸಾರಿಗೆ ಮುಷ್ಕರದ ಅವಧಿಯಲ್ಲಿ ಬಹಳಷ್ಟು ಸಾರಿಗೆ ನೌಕರರ ವಿರುದ್ಧ ವಜಾ, ವರ್ಗಾವಣೆ, ಅಮಾನತು ಹಾಗೂ ಪೊಲೀಸ್ ಪ್ರಕರಣಗಳು ದಾಖಲಿಸಲಾಗಿದ್ದು ಈವರೆಗೂ ಅವುಗಳನ್ನು ವಾಪಸ್‌ ಪಡೆಯದೆ ಇರುವುದರಿಂದ ನೌಕರರು ಸಮಸ್ಯೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸರ್ವ ಸಂಘಟನೆಗಳ ಮುಖಂಡರನ್ನು ಒಗ್ಗೂಡಿಸಲು ಕೂಟದ ಪದಾಧಿಕಾರಿಗಳು ನಾಳೆ (ಡಿ.3) ಸಭೆ ಕರೆದಿದ್ದಾರೆ.

ಪೂರ್ಣಿಮಾ ಟಾಕೀಸ್ ಹಿಂಭಾಗದ ಎಸ್ಸಿ ಎಸ್ಟಿ ಸಮುದಾಯ ಭವನದಲ್ಲಿ ಶುಕ್ರವಾರ ಮಧ್ಯಾಹ್ನ 1ಗಂಟೆಗೆ ಸಭೆ ಆಯೋಜಿಸಿದ್ದು, ಸಾರಿಗೆ ಎಲ್ಲ ನೌಕರರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಪ್ರಮುಖವಾಗಿ ಮುಷ್ಕರದ ವೇಳೆ ಸಮಸ್ಯೆಗಳಿಗೆ ಒಳಗಾಗಿರುವ ನೌಕರರ ಬದುಕನ್ನು ಸರಿಪಡಿಸುವ ಕುರಿತ ಚರ್ಚೆ ನಡೆಯಲಿದೆ.

ವಜಾ, ವರ್ಗಾವಣೆ, ಅಮಾನತು ಆದ ನೌಕರರ ಬಗ್ಗೆ ಹಾಗೂ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವೇತನ ನೀಡುವ, ಘಟಕಗಳಲ್ಲಿ ಕಿರುಕುಳದ ಬಗ್ಗೆ ಎಲ್ಲಾ ಸಂಘಟನೆಗಳು ಒಟ್ಟಾಗಿ ಮುಂದಿನ ಹೋರಾಟಕ್ಕೆ ಕೈ ಜೋಡಿಸುವುದು ಇಂದಿನ ಸ್ಥಿತಿಯಲ್ಲಿ ಪ್ರಮುಖವಾಗಿದೆ.

ಈ ನಿಟ್ಟಿನಲ್ಲಿ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್‌, ಸಿಐಟಿಯು ಉಪಾಧ್ಯಕ್ಷ ಪ್ರಕಾಶ್ ಅವರನ್ನು ಬುಧವಾರ ಕೂಟದ ಅಧ್ಯಕ್ಷ ಚಂದ್ರು ಮತ್ತು ಪದಾಧಿಕಾರಿಗಳು ಸಭೆಗೆ ಆಹ್ವಾನಿಸುವ ಸಂಬಂಧ ಭೇಟಿಮಾಡಿದ್ದರು.

ಅಲ್ಲದೆ ಕೆಬಿಎನ್‌, ಯುನಿಟೆಡ್ ಎಂಪ್ಲಾಯ್‌ ಯೂನಿಯನ್, ಮುಸ್ಲಿಂ ಸಂಘಟನೆ, ಕನ್ನಡ ಸಮನ್ವಯ ಸಂಘ, ಬಿಎಂಟಿಸಿ ಒಕ್ಕಲಿಗ ಸಂಘ, ಕೆಎಸ್‌ಆರ್‌ಟಿಸಿ ಯುನಿಟೆಡ್ ಎಂಪ್ಲಾಯ್‌ ಯೂನಿಯನ್, ಮಹಾಮಂಡಲ, ಬಿಎಂಎಸ್ ಸೇರಿದಂತೆ ಸಾರಿಗೆಯ 27 ಸಂಘಟನೆಗಳ ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿದೆ. ಹೀಗಾಗಿ ನಾಳೆ ಎಲ್ಲರೂ ಒಗ್ಗೂಡಲಿದ್ದಾರೆ ಎಂಬ ವಿಶ್ವಾಸವನ್ನು ನೌಕರರು ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಸಾರಿಗೆ ನೌಕರರ ಪರವಾದ ಈ ಎಲ್ಲ ಸಂಘಟನೆಗಳು ಕೈ ಜೋಡಿಸಿದ್ದೆ ಆದರೆ, ಈಗ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳು ಶೇ..50ರಷ್ಟು ನಿವಾರಣೆಯಾಗಲಿವೆ ಎಂದು ಹೇಳಲಾಗುತ್ತಿದೆ.

ನೌಕರರ ವಿರುದ್ಧ ಪೊಲೀಸ್ ಪ್ರಕರಣಗಳೂ ದಾಖಲಾಗಿದ್ದು, ಈ ಲ್ಲ ಸಮಸ್ಯೆಗಳನ್ನು ಸರಿಪಡಿಸಿಕೊಡುವಂತೆ ಹಲವಾರು ಸಂಘಟನೆಗಳ ನಾಯಕರು ಹಲವಾರು ಬಾರಿ ಮುಖ್ಯ ಮಂತ್ರಿಗಳು, ಮಂತ್ರಿಗಳು, ಸಾರಿಗೆ ಸಚಿವರ ಗಮನಕ್ಕೆ ತಂದು ಮನವಿ ಮಾಡಿದ್ದಾರೆ. ಆದಾಗ್ಯೂ ಇದುವರೆಗೂ ಯಾವೊಬ್ಬ ನೌಕರನು ಸಮಸ್ಯೆಯಿಂದ ಹೊರ ಬರಲಾಗಿಲ್ಲ.

ಯಾವುದೇ ಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಿಮಗೆ ಅನುಕೂಲ ಮಾಡಿಸಿಕೊಡುತ್ತೇವೆ ಎನ್ನುವ ಭರವಸೆಗಳಲ್ಲಿಯೇ 8 ತಿಂಗಳು ಕಳೆದು ಹೋಗಿವೆ. ಇನ್ನೂ ಹೀಗೆ ತಿಂಗಳುಗಟ್ಟಲೇ ಮುಂದುವರಿದರೆ ನಮ್ಮ ಹಲವಾರು ನೌಕರರ ಪರಿಸ್ಥಿತಿ ತೀರ ತಳಮಟ್ಟಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ.

ಹಾಗಾಗಿ ಸಾರಿಗೆ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಈ ಒಂದು ಸಭೆ ನಡೆಸಲು ಕೂಟವು ಜವಾಬ್ದಾರಿ ತೆಗೆದುಕೊಂಡಿದೆ. ಈ ಸಭೆಯಲ್ಲಿ ಸರ್ವ ಮುಖಂಡರೂ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಆ ನಿರ್ಧಾರದಂತೆ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿ ಜತೆ ಒಂದು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ನೀಗಿಸುವ ಪ್ರಯತ್ನ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಕಾರ್ಮಿಕರ ಭವಿಷ್ಯವನ್ನಾಧರಿಸಿ ಎಲ್ಲಾ ಸಂಘಟನೆಗಳು ಜಂಟಿಯಾಗಿ ಹೋಗುವುದರ ಕುರಿತಾಗಿ ಈ ಮೊದಲ ಹೆಜ್ಜೆ ಸ್ವಾಗತಾರ್ಹ. ಇದು ನೊಂದ ಕಾರ್ಮಿಕರಿಗೆ ಸಂತೋಷದ ಸುದ್ದಿ. ಎಲ್ಲ ಸಂಘಟನೆಗಳು ಸ್ವಪ್ರತಿಷ್ಠೆ ಬಿಟ್ಟು ಒಂದಾದರೆ ಕಾರ್ಮಿಕರಿಗೆ ಐತಿಹಾಸಿಕ ಭವಿಷ್ಯ ಸೃಷ್ಟಿಸಬಹುದೆಂಬ ಸದುದ್ದೇಶದಿಂದ ನಿಮ್ಮ ನಡೆ ಸ್ವಾಗತಾರ್ಹವಾಗಿದೆ ಎಂದು ನೌಕರರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಂಟಿ ವೇದಿಕೆ ಸಿದ್ಧವಾಗುತ್ತಿದೆ. ಇದು ತುಂಬಾ ಹೆಮ್ಮೆಯ ವಿಷಯ. ಇದು ಕೇವಲ ಬೆಂಗಳೂರಿನಲ್ಲಿರುವವರಿಗಷ್ಟೇ ಪ್ರಚಾರ ವಾಗಬಾರದು. ಸಂಪೂರ್ಣ ಕರ್ನಾಟಕದಾದ್ಯಂತ ಇರುವ ನಮ್ಮ ನೌಕರರಿಗೆ ಈ ಮಾಹಿತಿ ತಲುಪುವಂತಾಗಬೇಕು. ಆದಷ್ಟು ಬೇಗ ವಜಾ ಆದ ನೌಕರರು ಕರ್ತವ್ಯ ಮಾಡುವಂತೆ ಈ ಜಂಟಿ ವೇದಿಕೆ ಮಾಡಬೇಕು. ಸ್ವ ಪ್ರತಿಷ್ಠೆಗಳನ್ನು ಬಿಟ್ಟು ಒಂದಾಗುತ್ತಿರುವುದಕ್ಕೆ ಎಲ್ಲಾ ಕಾರ್ಮಿಕರಿಗೆ ತುಂಬಾ ಸಂತೋಷ ತಂದಿದೆ ಎಂದು ನೌಕರರೊಬ್ಬರು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್ ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ