NEWSನಮ್ಮಜಿಲ್ಲೆನಮ್ಮರಾಜ್ಯ

ಸೆ.4ರಂದು ಸರ್ವ ಸಾರಿಗೆ ಸಂಘಟನೆಗಳ ಸಭೆ: ನೌಕರರ ಸಮಸ್ಯೆ ನೀಗಿಸಲು ಒಗ್ಗೂಡುತ್ತಿವೆಯೇ ಸಂಘಟನೆಗಳು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ನಡೆದು 5ತಿಂಗಳುಗಳಾದರೂ ಆ ವೇಳೆ ನೌಕರರಿಗೆ ಅಗಿರುವ ತೊಂದರೆ ಸರಿಪಡಿಸಲು ಇನ್ನೂ ವಿಳಂಬವಾಗುತ್ತಿದೆ. ಹೀಗಾಗಿ ಸಂಸ್ಥೆಯ ಎಲ್ಲ ಸಂಘಟನೆಗಳ ಮುಖಂಡರು ಸೆ.4ರಂದು ಒಗ್ಗೂಡುತ್ತಿದ್ದಾರೆ ಎಂಬ ಬಗ್ಗೆ ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.

ಸಾರಿಗೆಯ ನಾಲ್ಕೂ ನಿಗಮದ ಸಮಸ್ತ ನೌಕರರು ಒಗ್ಗೂಡಿ ಸಾರಿಗೆ ಮುಷ್ಕರ ನಡೆಸಿ ಹಲವು ತಿಂಗಳುಗಳು ಕಳೆದಿವೆ. ಈ ಮಧ್ಯೆ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಗಳು ಹಲವಾರು ರೀತಿಯಲ್ಲಿ ಪ್ರಯತ್ನಪಟ್ಟರು ಮುಷ್ಕರದ ಸಮಯದಲ್ಲಿ ವಜಾ, ಅಮಾನತು, ವರ್ಗಾವಣೆ ಹಾಗೂ ಪೊಲೀಸ್ ಪ್ರಕರಣಗಳಾಗಿರುವುದಕ್ಕೆ ಪರಿಹಾರ ನೀಡುವಲ್ಲಿ ಸರ್ಕಾರ ಮತ್ತು ಸಾರಿಗೆ ಅಧಿಕಾರಿಗಳು ವಿಳಂಬನೀತಿ ಅನುಸರಿಸಿದ್ದಾರೆ.

ಹೀಗಾಗಿ ಸಾವಿರಾರು ನೌಕರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಳಂಬವಾಗುತ್ತಿದೆ. ಆಡಳಿತ ಮಂಡಳಿ ಆಗಬಹುದು ಇಲ್ಲ ಸರ್ಕಾರ ವಾಗಬಹುದು ಸಂಘಟನೆಯ ನಾಯಕರು ಭೇಟಿಯಾದಂತಹ ಸಂದರ್ಭದಲ್ಲಿ ಎಲ್ಲವನ್ನು ಸರಿಪಡಿಸುತ್ತೇವೆ, ಮಾಡಿಕೊಡುತ್ತೇವೆ ಎಂಬ ಭರವಸೆಯೊಂದಿಗೆ ಐದು ತಿಂಗಳು ಕಳೆದಿದ್ದಾರೆ. ಆದರೇ ಈವರೆಗೂ ಏನೊಂದು ಕೆಲಸವೂ ಆಗಿಲ್ಲ.

ಐದು ತಿಂಗಳಿನಿಂದಲೂ ಬರಿ ಭರವಸೆಗಳನ್ನೂ ನೀಡಿದ್ದಾರೆಯೇ ಹೊರತು ನೌಕರರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈ ನಡುವೆ ನೌಕರರಿಗೆ ನ್ಯಾಯ ಸಿಗುವುದು ಇನ್ನೂ ತುಂಬಾ ವಿಳಂಬವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆದ್ದರಿಂದ ಈ ಎಲ್ಲ ವಿಚಾರವಾಗಿ ಚರ್ಚಿಸಿ ನೌಕರರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಾರಿಗೆ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಯ ಮುಖಂಡರು ಹಾಗೂ ನಾಲ್ಕೂ ನಿಗಮಗಳ ನೌಕರರು ಒಗ್ಗೂಡಿ ಒಂದು ಸಭೆ ಸೇರಬೇಕೆಂದು ತೀರ್ಮಾನಿಸಿದ್ದಾರೆ.

ಹಾಗಾಗಿ ಇದೇ ಸೆಪ್ಟಂಬರ್ 4ರ ಶನಿವಾರದಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಬೆಂಗಳೂರಿನ ಟೌನ್ ಹಾಲ್ ಹಿಂಭಾಗವಿರುವ ಎಸ್ಸಿ ಎಸ್ಟಿ ಸಮುದಾಯ ಭವನದಲ್ಲಿ ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಸಮಸ್ಯೆಗಳಿಗೆ ಒಳಗಾಗಿರುವ ಸಾರಿಗೆ ನೌಕರರ ಒಳಿತಿಗಾಗಿ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಯ ಪ್ರಮುಖರು ಸಹ ಭಾಗವಹಿಸಿ ಒಗ್ಗಟ್ಟಾಗಿ ನ್ಯಾಯ ದೊರಕಿಸಿಕೊಳ್ಳುವ ಬಗ್ಗೆ ಚರ್ಚಿಸಬೇಕಿದೆ.

ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ನಿರ್ಧರಿಸುವುದನ್ನು ಸಾಮೂಹಿಕವಾಗಿ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಈ ಸಲುವಾಗಿ ಎಲ್ಲರೂ ಒಗ್ಗೂಡಿ ಸಭೆಗೆ ಹಾಜರಾಗುವುದು ಪ್ರಮುಖವಾಗಿದೆ.

ಪತ್ರದ ಮೂಲಕ ವ್ಯವಹಾರ ನಡೆಸಲು ಸಮಯದ ಅಭಾವವಿರುವುದರಿಂದ ಹಲವಾರು ಸಂಘಟನೆಯ ನಾಯಕರಿಗೆ ದೂರವಾಣಿ ಕರೆ ಮಾಡಲು ನಿರ್ಧರಿಸಿದ್ದೇವೆ. ನಮಗೆ ದೂರವಾಣಿ ಕರೆ ಬಂದಿಲ್ಲವೆಂದು ಯಾವ ನಾಯಕರು ಹಿಂದೆ ಸರಿಯದೆ, ಈ ಮೆಸೇಜನ್ನು ನೋಡಿ ನೌಕರರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಎಲ್ಲರೂ ಬರಬೇಕೆಂದು ನೊಂದ ನೌಕರರು ಕೇಳಿಕೊಂಡಿದ್ದಾರೆ.

ಈ ಸಭೆ ಸೇರುವುದು ಪ್ರಮುಖವಾಗಿದೆ. ಕಾರಣ ಇದೇ ತಿಂಗಳ 13ರಿಂದ ವಿಧಾನಸಭಾ ಅಧಿವೇಶನವು ಪ್ರಾರಂಭವಾಗುತ್ತಿದ್ದು, ಕನಿಷ್ಠಪಕ್ಷ ಅಲ್ಲಿಯಾದರೂ ಈ ವಿಷಯ ಚರ್ಚೆಗೆ ಬಂದು ನಮ್ಮ ನೌಕರರ ಸಮಸ್ಯೆಗಳು ಬಗೆಹರಿಯಲಿ ಎಂಬುವುದು ನಮ್ಮ ಉದ್ದೇಶವಾಗಿದೆ ಎಂದು ತೊಂದರೆಗೆ ಸಿಲುಕಿರುವ ನೌಕರರು ತಿಳಿಸಿದ್ದಾರೆ.

1 Comment

  • ಸರ್, ವಿಜಯಪಥ whatsapp no ಕೊಡಿ ಸಾರಿಗೆ ಸಂಸ್ಥೆ ಯಲ್ಲಿ ನಡೀತಿರೋದು ಪ್ರತಿಯೊಂದು ಸುದ್ದಿ ಕಳಿಸ್ತೀವಿ.
    ಶಿವಮೊಗ್ಗ ಡಿವಿಸೇನ್

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ