Breaking NewsNEWSನಮ್ಮಜಿಲ್ಲೆ

ಮೂರನೇ ಹಂತದ ಕೋವಿಡ್‌ ವ್ಯಾಕ್ಸಿನೇಷನ್ ನೀಡಲು ಬಿಬಿಎಂಪಿ ಸಜ್ಜು : ಗೌರವ್ ಗುಪ್ತ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಕೋವಿಡ್ ಲಸಿಕೆ ಪಡೆಯಲು ಅರ್ಹರಾಗಿದ್ದು, ನಾಳೆಯಿಂದ (ಏಪ್ರಿಲ್ 28) https://www.cowin.gov.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪಾಲಿಕೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಅದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಪಾಲಿಕೆ ವ್ಯಾಪ್ತಿಯಲ್ಲಿ 3ನೇ ಹಂತದ ವ್ಯಾಕ್ಸಿನೇಷನ್ ನೀಡುವ ಸಂಬಂಧ ಮಾಡಿಕೊಳ್ಳಬೇಕಿರುವ ಸಿದ್ಧತೆಗಳ ಕುರಿತು ನಡೆದ ವರ್ಚುವಲ್ ಸಭೆಯಲ್ಲಿ ಆಯುಕ್ತರು ಮಾತನಾಡಿ, ನಗರದಲ್ಲಿ 3ನೇ ಹಂತದ ಲಸಿಕೆ ನಿಡುವ ಸಂಬಂಧ ಎಲ್ಲಾ ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 18 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ ನೀಡಲು ತಿಳಿಸಿದೆ.

ಅದರಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಉಚಿತವಾಗಿ ಲಸಿಕೆ ನಿಡಲು ರಾಜ್ಯ ಸರ್ಕಾರ ತಿಳಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ/ಪಾಲಿಕೆಯಿಂದ ಲಸಿಕೆಯನ್ನು ಪೂರೈಸುವುದಿಲ್ಲ. ನೇರವಾಗಿ ಸಂಸ್ಥೆಗಳಿಂದಲೇ ಲಸಿಕೆಯನ್ನು ತೆಗೆದುಕೊಳ್ಳಬೇಕು. ರಾಜ್ಯ ಸರ್ಕರ ದರವನ್ನು ನಿಗದಿಪಡಿಸಲಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳು ಸಮನ್ವಯದಿಂದ ವ್ಯವಸ್ಥಿತವಾಗಿ ಲಸಿಕೆ ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಆರೋಗ್ಯಾಧಿಕಾರಿಗಳು, ವ್ಯಾಕ್ಸಿನೇಷನ್ ನೋಡಲ್ ಅಧಿಕಾರಿಗಳು, ಖಾಸಗಿ ಆಸ್ಪತ್ರೆಯ ನೋಡಲ್ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
4ನಿಗಮಗಳ ಅಧಿಕಾರಿಗಳು-ನೌಕರರಿಗೂ ಸರಿಸಮಾನ ವೇತನ ಕೊಡಿ: ಸಾರಿಗೆ ಸಚಿವರು, ಅಧಿಕಾರಿಗಳಿಗೆ KSRTC ಸಿಬ್ಬಂದಿ, ಲೆಕ್ಕ ಪತ್... ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ “ಮೀಡಿಯಾ ಕಿಟ್” ವಿತರಣೆಗೆ ಅರ್ಜಿ ಆಹ್ವಾನ ಅ.28ರಂದು ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC ‍& KSRTC ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ BMTC ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಕಿರಾತಕ: ಆತಂಕದಲ್ಲೇ ಡ್ಯೂಟಿ, ಚಾಲನಾ ಸಿಬ್ಬಂದಿಗಳಿಗಿಲ್ಲ ಜೀವ ರಕ್ಷಣೆ KKRTC ಬಸ್‌ ಪಲ್ಟಿ ಮಹಿಳೆ ಸಾವು- ಒಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ