NEWSನಮ್ಮಜಿಲ್ಲೆರಾಜಕೀಯ

ಬಿಬಿಎಂಪಿ ವ್ಯಾಪ್ತಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ಜನಪ್ರತಿನಿಧಿಗಳ ಅಡ್ಡಗಾಲು: ಎಎಪಿ

847 ಕೋಟಿ ರೂ. ತೆರಿಗೆ ಹಣ ನಷ್ಟ l ತಕ್ಷಣ ಮುಖ್ಯಮಂತ್ರಿಗಳ ಮಧ್ಯ ಪ್ರವೇಶಕ್ಕೆ ಆಪ್‌ ಆಗ್ರಹ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ಮೂರು ವರ್ಷದಲ್ಲಿ 847 ಕೋಟಿ ರೂಪಾಯಿಗಳ ನಷ್ಟ
  • ಮೂರು ವರ್ಷದಲ್ಲಿ ಮೂರು ಪಕ್ಷಗಳ ಜನಪ್ರತಿನಿಧಿಗಳೇ ಇದಕ್ಕೆ ಹೊಣೆ
  • ಈ ನಷ್ಟವವನ್ನು ತುಂಬಿಕೊಡುವವರು ಯಾರು

ಬೆಂಗಳೂರು: ಪ್ರತಿವರ್ಷ ಕೊಟ್ಯಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ಉಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌ ಅಳವಡಿಕೆ ಕಾರ್ಯಕ್ಕೆ ನಗರದ ಸಚಿವರು ಹಾಗೂ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ ನಲ್ಲಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದರಿಂದ ಮೂರು ವರ್ಷಗಳಲ್ಲಿ ಸುಮಾರು 847 ಕೋಟಿ ರೂಪಾಯಿಗಳ ನಷ್ಟವಾಗಿದ್ದು, ಜನರ ತೆರಿಗೆ ಹಣ ಅನಗತ್ಯ ವ್ಯವಯವಾಗುವುದನ್ನು ನಿವಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‌ಇಡಿ ಬಲ್ಬ್‌ ಗಳ ಅಳವಡಿಕೆಗೆ ಷಹಾಪೋರ್ಜಿ ಪಲ್ಲೊಂಜಿ, ಎಸ್‌ಎಮ್‌ಎಸ್‌ ಇನ್ಪ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್ಸ್‌ – ಈ ಮೂರು ಕಂಪನಿಗಳ ಕನ್ಸೋರ್ಷಿಯಮ್‌ ಗೆ 2018 ರಲ್ಲಿ ಟೆಂಡರ್‌ ನೀಡಲಾಗಿತ್ತು. ನಗರದಲ್ಲಿ ಬೀದಿ ದೀಪಗಳ ವಿದ್ಯುತ್‌ ಬಳಕೆಯ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಪಿಡಬ್ಲ್ಯುಸಿ ಸಂಸ್ಥೆಯನ್ನೂ ನೇಮಿಸಲಾಗಿತ್ತು.

ಈ ಸಂಸ್ಥೆಯ ವತಿಯಿಂದ ನಡೆಸಲಾದ ಅಧ್ಯಯನದಲ್ಲಿ ಬಿಬಿಎಂಪಿ ಪ್ರತಿವರ್ಷ ತನ್ನ 4.85 ಲಕ್ಷ ಬೀದಿದೀಪಗಳ ನಿರ್ವಹಣೆಗೆ 240 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಅದರಲ್ಲಿ ಸುಮಾರು 200 ಕೋಟಿ ರೂಪಾಯಿಗಳನ್ನು ಬೆಸ್ಕಾಂಗೆ ನೀಡಲಾಗುತ್ತಿದೆ. ವರ್ಷಪೂರ್ತಿ ಬೀದಿದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಈ ವೆಚ್ಚ ಸುಮಾರು 330 ಕೋಟಿ ರೂ.ಗಳಿಗೆ ತಲುಪುತ್ತದೆ ಎನ್ನುವುದನ್ನು ಸ್ಥಳೀಯ ಆಡಳಿತ ಅಂದಾಜು ಕೂಡಾ ಮಾಡಿದೆ ಎಂದರು.

ಜಾಗತಿಕ ಟೆಂಡರ್‌ ಕರೆಯುವ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವೆಚ್ಚವನ್ನು 233 ಕೋಟಿ ರೂಪಾಯಿಗಳಿಗೆ ಇಳಿಸುವ ಅಂದಾಜು ಮಾಡಲಾಗಿತ್ತು. ಈ ಉಳಿತಾಯ ಎಲ್‌ಇಡಿ ವಿದ್ಯುತ್‌ ದೀಪಗಳ ಅಳವಡಿಕೆಯಿಂದಾಗುವ ವಿದ್ಯುತ್‌ ಬಳಕೆಯಲ್ಲಿನ ಇಳಿಕೆಯಿಂದ ಸಾಧ್ಯವಾಗುತ್ತಿತ್ತು.

ವಿದ್ಯುತ್‌ ಬಳಕೆಯ ಪ್ರಮಾಣ 290 ಕೋಟಿ ರೂಪಾಯಿಗಳಿಂದ 33 ಕೋಟಿ ರೂಪಾಯಿಗಳಿಗೆ ಇಳಿಕೆಯಾಗುತ್ತಿತ್ತು. 5 ಲಕ್ಷ ಎಲ್‌ಇಡಿ ವಿದ್ಯುತ್‌ ದೀಪಗಳನ್ನು ಅಳವಡಿಸಿ ಅವುಗಳ ಸಮರ್ಪಕ ನಿರ್ವಹಣೆಯಿಂದ ಶೇಕಡಾ 85.50% ರಷ್ಟು ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಈ ಕನ್ಸೋರ್ಷಿಯಮ್‌ ಸುಮಾರು 175 ಕೋಟಿ ರೂಪಾಯಿಗಳನ್ನು ಆದಾಯ ಪಡೆದುಕೊಳ್ಳುತ್ತಿತ್ತು.

ಆದರೆ, ಇಂತಹ ಉತ್ತಮ ಯೋಜನೆ ಕಾರ್ಯಗತಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯ ದುಷ್ಟ ಶಕ್ತಿಗಳ ಕಾರಣ. ಸೆಪ್ಟೆಂಬರ್‌ 9 ರಂದು ಯಶವಂತಪುರದಲ್ಲಿ ಎಲ್‌ ಇಡಿ ಬೀದಿದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ನೌಕರರ ಮೇಲೆ ನಗರದ ಕೆಲ ಸಚಿವರು ಹಾಗೂ ಮಾಜಿ ಕಾರ್ಪೋರೇಟರ್‌ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪ್ರತಿನಿತ್ಯ ಅವರ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.

ವಿಶ್ವವಿಖ್ಯಾತ ಬೆಂಗಳೂರು ನಗರದಲ್ಲೇ ಇಂತಹ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾದನೀಯ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆ ಕಾರ್ಯಗತವಾಗಿದ್ದರೆ ಸುಮಾರು 847 ಕೋಟಿ ರೂಪಾಯಿಗಳ ಉಳಿತಾಯ ಆಗುತ್ತಿತ್ತು.

ಆದರೆ ರಾಜಕೀಯ ಪ್ರತಿನಿಧಿಗಳ ದುಷ್ಟ ಮನಸ್ಥಿತಿಯಿಂದ ಇದು ಸಾಧ್ಯವಾಗಿಲ್ಲ. ಈ ನಷ್ಟವನ್ನು ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಆಡಳಿತ ನಡೆಸಿದ ಜೆಸಿಬಿ ಪಕ್ಷಗಳಿಂದ ವಸೂಲು ಮಾಡಿಕೊಳ್ಳಬೇಕು ಎಂದು ಮೋಹನ್‌ ದಾಸರಿ ಆಗ್ರಹಿಸಿದರು.

ನಗರದ ಜನತೆಯ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸುವಂತಹ ಯೋಜನೆಗೆ ಅಡ್ಡಗಾಲು ಹಾಕುವ ಮೂಲಕ ರಾಜಕಾರಣಿಗಳು ಅಭಿವೃದ್ದಿಯ ಪರವಲ್ಲ ಎನ್ನುವ ಧೋರಣೆಯನ್ನು ತೋರಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿಬೇಕು ಹಾಗೂ ಬೀದಿ ದೀಪಗಳ ಎಲ್‌ಇಡಿ ಅಳವಡಿಕೆಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ