ಮಗಳು ಒತ್ತಡದಲ್ಲಿದ್ದಾಳೆ: ಆಕೆ ಹೇಳಿಕೆ ದಾಖಲಿಸಬೇಡಿ ಎಂದು ಭಾವುಕರಾದ ಸಂತ್ರಸ್ತೆ ತಂದೆ
ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಮಗಳು ಒತ್ತಡದಲ್ಲಿದ್ದು ಈ ಸಂದರ್ಭದಲ್ಲಿ ಆಕೆ ಹೇಳಿಕೆಗಳನ್ನು ಪರಿಗಣಿಸಬಾರದು. ಮಗಳಿಗೆ ಕೌನ್ಸಲಿಂಗ್ ಅಗತ್ಯವಿದೆ. ಕೌನ್ಸಲಿಂಗ್ ನಂತರವೇ ಹೇಳಿಕೆಯನ್ನು ಪೊಲೀಸರು ಮತ್ತು ನ್ಯಾಯಾಧೀಶರು ದಾಖಲಿಸಿಕೊಳ್ಳಬೇಕು ಎಂದು ಸಿಡಿ ಪ್ರಕರಣದ ಯುವತಿಯ ತಂದೆ ಮನವಿ ಮಾಡಿದ್ದಾರೆ.
ಸಿಡಿ ಯುವತಿ ನ್ಯಾಯಾಲಯದ ಎದುರು ಇಂದು ಪ್ರತ್ಯಕ್ಷ ಆಗುತ್ತಾರೆ ಎಂದು ತಿಳಿದ ಸಂತ್ರಸ್ತೆಯ ಪೋಷಕರು ಮಾಧ್ಯಮಗಳ ಜೊತೆ ಮಾತನಾಡಿದರು.
ನಮ್ಮ ಮೇಲೆ ಒತ್ತಡವಿಲ್ಲ. ನಮಗೆ ಕಾನೂನು ಗೊತ್ತಿಲ್ಲ. ಆದರೆ, ದೇಶದ ಪ್ರಜೆಯಾಗಿ ಮಗಳಿಗೆ ತೊಂದರೆ ಆಗಿದ್ದಕ್ಕೆ ದೂರು ಸಲ್ಲಿಸುವ ಹಕ್ಕು ನನಗಿದೆ. ನಮ್ಮ ಮಗಳು ಯಾವ ಒತ್ತಡದಲ್ಲಿ ಯಾವ ಮನಸ್ಥಿತಿಯಲ್ಲಿದ್ದಾರೆ ಎಂಬುವುದು ನಮಗೆ ಗೊತ್ತಿಲ್ಲ. ಹಾಗಾಗಿ ಮಗಳನ್ನು ನಮ್ಮ ವಶಕ್ಕೆ ನೀಡಬೇಕೆಂದು ಕೇಳಿಕೊಂಡರು.
ಇನ್ನು ಡಿವೈಎಸ್‌ಪಿ ಕಟ್ಟಿಮನಿ ನಮಗೆ ಒತ್ತಡ ಹಾಕಿಲ್ಲ. ಇವರ ಸಹಕಾರದಿಂದಲೇ ನಾವು ಎಸ್‌ಐಟಿ ಮುಂದೆ ಬಂದಿದ್ದೇವೆ. ಹೀಗಾಗಿ ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಹೇಳಿದರು.
ಆಕೆ ನಮ್ಮ ಮಗಳು ಮನೆಗೆ ಬರಲಿ. ನಮ್ಮ ಮಗಳನ್ನು ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಮಗಳಿಗೆ ನಮ್ಮ ಬಳಿಯಲ್ಲಿರುವ ಇಷ್ಟವಿದ್ರೆ ನಾವು ಕಳೆದುಕೊಳ್ಳುತ್ತೇವೆ. ಏನೇ ಆದರೂ ಆಕೆ ನನ್ನ ಮಗಳು. ಆಕೆ ಸ್ವಂತವಾಘಿ ಯಾವುದೇ ಹೇಳಿಕೆ ನೀಡುತ್ತಿಲ್ಲ. ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುತ್ತಿದ್ದಾಲೆ. ಮನಸ್ಸಿಗೆ ನೋವಾಗಿದೆ ಎಂದು ಯುವತಿಯ ತಂದೆ ಭಾವುಕರಾದರು.
ಡಿಕೆಶಿಯೇ ನೇರ ಕಾರಣ
ಇದೇ ವೇಳೆ ಮಾತನಾಡಿದ ಯುವತಿಯ ಸಹೋದರ ನಮ್ಮ ಅಕ್ಕ ಶಿವಕುಮಾರ್ ಅಣತಿಯಂತೆ ಕೆಲಸ ಮಾಡುತ್ತಿದ್ದಾಳೆ. ಆಕೆಯನ್ನು ರಾಜಕಾರಣದಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಇನ್ನು ಆಕೆ ನನ್ನ ಜತೆ ಮಾತನಾಡಿರುವುದು ನಿಜ ಆದರೆ, ಅದು ಹೇಗೆ ಬಂತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೆಲ್ಲಾ ಡಿ.ಕೆ.ಶಿವಕುಮಾರ್ ನೇರ ಕಾರಣ ಅವರು ನೀಡಿದ ಹಣದಿಂದಲೇ ಗೋವಾಕ್ಕೆ ಹೋಗುವುದಾಗಿ ಹೇಳಿದ್ದಳು. ಬೇಕಾದರೆ ಎಲ್ಲರಿಗೂ ಆ ಆಡಿಯೋ ಕೇಳಿಸುತ್ತೇನೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು.