ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಾರ್ವಜನಿಕ ಪ್ರಯಾಣಿಕರಿಗೆ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೆ ಈ ಕೆಳಕಂಡ ಮಾರ್ಗಗಳಲ್ಲಿ ಹವಾನಿಯಂತ್ರಿತ ಸಾರಿಗೆಯನ್ನು ಪ್ರಾರಂಭಿಸಲಾಗಿದೆ.
ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಲ್ಲಿ ಮಾರ್ಗ ಸಂಖ್ಯೆ ವಿ-365 – ಹವಾನಿಯಂತ್ರಿತ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ನ್ಯಾಷನಲ್ಪಾರ್ಕ್ ಕಾರ್ಪೋರೇಷನ್, ಶಾಂತಿನಗರ ಬಸ್ ನಿಲ್ದಾಣ,ಗುರಪ್ಪನಪಾಳ್ಯ, ಗೊಟ್ಟಿಗೆರೆ ಮಾರ್ಗವಾಗಿ ಚಲಿಸಲಿದ್ದು, ವಾರದ ಮೂರು ದಿನಗಳಲ್ಲಿ ಸಂಚರಿಸಲಿದೆ. ಆ ದಿನಗಳಲ್ಲಿ ನಿತ್ಯ 12 ಸುತ್ತುವಳಿಗಳು ಇರಲಿವೆ.
ಈ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 07:30, 08:00, 08:30, 13.15, 14:15, 15:15ಕ್ಕೆ ನಿರ್ಗಮಿಸಲಿದೆ. ಅದರಂತೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಿಂದ ಬೆಳಗ್ಗೆ 9:15, 10:30, 11:30, 17:00, 17:30, 18 ಗಂಟೆಗೆ ನಿರ್ಗಮಿಸಲಿದೆ.
ಬೆಂಗಳೂರು ದರ್ಶಿನಿ-01 ನಂ.ನ ಹವಾನಿಯಂತ್ರಿತ ಬಸ್ ಕೆಂಪೇಗೌಡ ಬಸ್ ನಿಲ್ದಾಣ-ಇಸ್ಕಾನ್ ದೇವಾಲಯ, ವಿಧಾನಸೌಧ, ಟಿಪ್ಪು ಪ್ಯಾಲೇಸ್, ಗವಿಗಂಗಾಧರೇಶ್ವರ ದೇವಸ್ಥಾನ, ಬುಲ್ ಟೆಂಪಲ್, ದೊಡ್ಡಗಣಪತಿ ದೇವಸ್ಥಾನ, ಕರ್ನಾಟಕ ಸಿಲ್ಕ್ ಎಂಪೋರಿಯಂ.
ಎಂ.ಜಿ.ರಸ್ತೆ, ಹಲಸೂರು ಕೆರೆ, ಕಬ್ಬನ್ ಪಾರ್ಕ್, ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ, ಕರ್ನಾಟಕ ಚಿತ್ರಕಲಾ ಪರಿಷತ್ ಕೆಂಪೇಗೌಡ ಬಸ್ ನಿಲ್ದಾಣ ಮಾರ್ಗವಾಗಿ ಸಲಿಸಲಿದೆ. ಕೆಂಪೇಗೌಡ ಬಸ್ ನಿಲ್ದಾಣ ದಿಂದ ಬೆಳಗ್ಗೆ 9 ಗಂಟೆಗೆ ನಿರ್ಗಮಿಸಲಿದ್ದು ಸಂಜೆ 18 ಗಂಟೆಗೆ ಆಗಮಿಸಲಿದೆ.
ಇನ್ನು ಮಾರ್ಗ ಸಂಖ್ಯೆ ವಿ-226 ಎಚ್‍ಎಸ್‍ಆರ್ ಎಚ್.ಎಸ್.ಆರ್. ಬಿಡಿಎ ಕಾಂಪ್ಲೆಕ್ಸ್‍ವಂಡರ್‍ಲಾ ಬಿಟಿಎಂ ಲೇಔಟ್, ರಾಗಿಗುಡ್ಡ, ಬನಶಂಕರಿ ಟಿಟಿಎಂಸಿ, ಪಿಇಎಸ್ ಕಾಲೇಜು, ನಾಯಂಡಹಳ್ಳಿ, ಕೆಂಗೇರಿ ಮಾರ್ಗವಾಗಿ ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಲ್ಲಿ ಚಲಿಸಲಿದೆ.
ಎಚ್.ಎಸ್.ಆರ್ ಬಿಡಿಎ ಕಾಂಪ್ಲೆಕ್ಸ್ ನಿಂದ ಬೆಳಗ್ಗೆ 9 ಗಂಟೆಗೆ ನಿರ್ಗಮಿಸಲಿದ್ದು, ವಂಡರ್‌ಲಾದಿಂದ ಸಂಜೆ 18:15 ನಿರ್ಗಮಿಸಲಿದೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.