ಪಿರಿಯಾಪಟ್ಟಣ: ನನಗೆ ರಾಜಕೀಯವಾಗಿ ಜನ್ಮ ನೀಡಿದ ಜನತಾದಳ ಹಾಗೂ ನೆಲೆಕೊಟ್ಟಿರುವ ಜೆಡಿಎಸ್ ಪಕ್ಷವನ್ನು ಎಂದಿಗೂ ತೊರೆಯುವವುದಿಲ್ಲ ಎಂದು ಕೆ.ಮಹದೇವ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕರ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇತ್ತೀಚೆಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿರುವ ಬಗ್ಗೆ ವರದಿಯಾದ ನಂತರ ಜಿಟಿಡಿ ಬಂಬಲಿಗ ಮಹದೇವ್ ಕೂಡ ಜೆಡಿಎಸ್ ತೊರೆಯುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ಹಾಗೂ ವಿಪಕ್ಷಗಳು ಸುಳ್ಳುಸುದ್ದಿ ಹಬ್ಬಿಸುತ್ತಿವೆ. ಇಂತ ವಂದತಿಗಳಿಗೆ ನಮ್ಮ ಕಾರ್ಯಕರ್ತರು ಕಿವಿಗೊಡಬಾರದು ಎಂದು ತಿಳಿಸಿದರು.
ಸದ್ಯದಲ್ಲಿಯೇ ಜಿಲ್ಲಾ ಪಂಚಾಯಿತಿ ಹಾಗೂ ತಾಪಂ ಚುನಾವಣೆಗೆ ಸಜ್ಜಾಗುವಂತೆ ತಿಳಿಸಿದ ಅವರು ನಾನು ಯಾವುದೇ ಮಾಧ್ಯಮಗಳ ಮುಂದೆ ಅಥವಾ ಪತ್ರಿಕೆಗಳಿಗೆ ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ಹೇಳಿಕೆ ನೀಡಿಲ್ಲದಿದ್ದರೂ ಕೆಲವು ಮಾಧ್ಯಮಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇದು ಶುದ್ಧ ಸುಳ್ಳಾಗಿದೆ ಹಾಗಾಗಿ ಜೆಡಿಎಸ್ ಬಿಡುವ ಮಾತಿಲ್ಲ. ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಜನತಾದಳದಿಂದ ಅಂದಿನಿಂದ ಇಂದಿನವರೆಗೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿ ಇಂದು ಶಾಸಕನಾಗಿದ್ದೇನೆ. ಮುಂದೆಯೂ ಜೆಡಿಎಸ್ ನಲ್ಲಿಯೇ ಆದ್ದರಿಂದ ಸುಳ್ಳುಸುದ್ದಿಗೆ ಕಿಗೊಡಬೇಡಿ ಎಂದರು.
ಇನ್ನು ಈ ಹಿಂದೆಯೂ ಬಿಜೆಪಿಗೆ ಅನೇಕರು ಸೇರ್ಪಡೆಯಾಗುವಂತೆ ಸಲಹೆ ನೀಡಿದ್ದರೂ ನನ್ನ ನಿಷ್ಠೆ ಜೆಡಿಎಸ್ ಪಕ್ಷಕ್ಕೆ ಎಂದು ಹೇಳಿದ್ದೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಚಿಂತೆಯು ಮಾಡಿಲ್ಲ, ವಿಪಕ್ಷದವರು ಮತ್ತು ಆ ಪಕ್ಷದ ಕಾರ್ಯಕರ್ತರು ಜಿಪಂ ಮತ್ತು ತಾಪಂ ಚುನಾವಣೆ ಮುಂದಿಟ್ಟುಕೊಂಡು ಸುಳ್ಳಿನ ಸರಮಾಲೆಯನ್ನೆ ಹಬ್ಬಿಸುತ್ತಿದ್ದಾರೆ ಅವರ ಯಾರ ಮಾತಿಗೂ ಕಿವಿ ಕೊಡಬಾರದು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣ ಶೆಟ್ಟಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್. ರವಿ, ಜಿಪಂ ಮಾಜಿ ಸದಸ್ಯ ಶಿವಣ್ಣ, ತಾಪಂ ಮಾಜಿ ಅಧ್ಯಕ್ಷ ಜವರಪ್ಪ, ಮುಖಂಡರಾದ ಕುಮಾರ, ದೊರೆಕೆರೆ ನಾಗೇಂದ್ರ ಇದ್ದರು.