Please assign a menu to the primary menu location under menu

NEWSನಮ್ಮಜಿಲ್ಲೆಶಿಕ್ಷಣ-

ಭಗವಾನ್ ಬುದ್ಧ ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನಾಚರಣೆ

ವಿಜಯಪಥ ಸಮಗ್ರ ಸುದ್ದಿ

ಮಳವಳ್ಳಿ: ಭಗವಾನ್ ಬುದ್ಧ ಕಾಲೇಜಿನ ಆವರಣದಲ್ಲಿ ಭಾರತೀಯ ಸಂವಿಧಾನ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವೈಮಾನಿಕ ಸಂಶೋಧನಾ ಪರಿಷತ್ ಹಾಗೂ ಭಗವಾನ್ ಬುದ್ಧ ಮಹಾ ವಿಶ್ವವಿದ್ಯಾನಿಲಯ ಮತ್ತು ಭಗವಾನ್ ಬುದ್ಧ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.

ಜ್ಯೋತಿ ಬೆಳಗಿಸುವ ಮೂಲಕ ಪ್ರೊ. ರಂಗಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಇಡೀ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸುವ ರೀತಿಯಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ನಮ್ಮ ದೇಶಕ್ಕೆ ರಚಿಸುವ ಮೂಲಕ ತಮ್ಮದೇ ಆದ ಅಪಾರ ಕೊಡುಗೆಯನ್ನು ನೀಡಿ ಜನಸಾಮಾನ್ಯರ ಮನಸ್ಸಿನಲ್ಲಿ ಚಿರವಾಗಿ ಉಳಿದಿದ್ದಾರೆ ಎಂದರು.

ಒಂದು ಕಾಲದಲ್ಲಿ ಭಾರತಕ್ಕೆ ಸಂವಿಧಾನವನ್ನು ರಚಿಸುವಂತೆ ಹೂರ ದೇಶದ ಹಲವು ಮಹನೀಯರ ಹತ್ತಿರ ಬೇಡಿಕೆ ಇಟ್ಟಾಗ ಅವರು ನಿಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಆದುದರಿಂದ ನಮಗೆ ರಚಿಸುವಷ್ಟು ಅನುಭವವಿಲ್ಲ.

ಹಾಗಾಗಿ ನಿಮ್ಮದೇ ದೇಶದ ವ್ಯಕ್ತಿ ಒಬ್ಬರು ಅತಿ ಹೆಚ್ಚು ವಿದ್ಯೆಯನ್ನು ಪಡೆದು ವಿದ್ವಾಂಸರ ಎನಿಸಿಕೊಂಡಿದ್ದಾರೆ. ಅವರು ತಮ್ಮದೇ ದೇಶದ ಬಡವರು ಬಲ್ಲಿದರ ದೇಶವಾಸಿಗಳ ನಾಡಿಮಿಡಿತವನ್ನು ಅರಿತಿರುವುದರಿಂದ ಸಂವಿಧಾನವನ್ನು ರಚಿಸುವ ಏಕೈಕ ವ್ಯಕ್ತಿ ಎಂದು ತಿಳಿಸಿದರು.

ಅವರನ್ನು ಭಾರತಕ್ಕೆ ವಾಪಸ್ ಕಳಿಸಿದ ತದನಂತರದಲ್ಲಿ ಸಮಿತಿ ರಚಿಸಿ ಪ್ರಮುಖ ಪಾತ್ರವನ್ನು ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಗತ್ತಿನಾದ್ಯಂತ ಹೆಗ್ಗಳಿಕೆ ಪಡೆದಂಥ ಜನ ಮೆಚ್ಚುವಂತಹ ಸಂವಿಧಾನವನ್ನು ರಚಿಸಿದ ಏಕೈಕ ವ್ಯಕ್ತಿಯಾಗಿ ಅಂಬೇಡ್ಕರ್ ಅವರು ನಿಂತಿದ್ದಾರೆ ಎಂದರು.

ಇಂದಿಗೂ ಜನಸಾಮಾನ್ಯರ ಜನಮಾನಸದಲ್ಲಿ ಉಳಿದಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಹಾಗೆ ಸಂವಿಧಾನವನ್ನು ರಚಿಸಿ 1946ರಲ್ಲಿ ಸಮಿತಿಗೆ ಸಲ್ಲಿಸಿದರು ಆ ದಿನವನ್ನು ರಾಜ್ಯ ಸರ್ಕಾರ ಭಾರತೀಯ ಸಂವಿಧಾನ ದಿನಾಚರಣೆ ಎಂದು ಆಚರಿಸಲು ಸರ್ಕಾರ ಎಲ್ಲಾ ಇಲಾಖೆಗಳಿಗೂ ಮತ್ತು ಎಲ್ಲಾ ವಿದ್ಯಾಸಂಸ್ಥೆಗಳು ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯಮದೂರು ಡಾ.ಸಿದ್ಧರಾಜು ಮಾತನಾಡಿ ಸಂವಿಧಾನವೆಂದರೆ ಅಂಬೇಡ್ಕರ್, ಅಂಬೇಡ್ಕರ್ ಎಂದರೆ ಸಂವಿಧಾನ. ಆ ರೀತಿಯಲ್ಲಿ ಸಂವಿಧಾನದಲ್ಲಿ ಬಾಬ ಸಾಹೇಬ ಅಂಬೇಡ್ಕರ್ ಅವರು ಬೆರೆತ್ತಿರುವುದು ಕೆಳವರ್ಗದ ಜನತೆಯ ಅದೃಷ್ಟ ವೆಂದರು.

ಅಂಬೇಡ್ಕರ್ ಅವರು ಸಂವಿಧಾನ ರಚಿಸದೆ ಇದ್ದಿದ್ದರೆ ಇಂದು ಕೆಳವರ್ಗದ ಜನತೆಗೆ ಸಮಾನತೆಯಾಗಲೀ ಶಿಕ್ಷಣವಾಗಲಿ ಮತದಾನವಾಗಲಿ ಯಾವ ಹಕ್ಕು ಇರುತ್ತಿರಲಿಲ್ಲ. ಹಾಗೆಯೇ ಕನ್ನಡ ನಾಡು ನುಡಿ ಬಗ್ಗೆ ಮಾತನಾಡುವುದಾದರೆ ಪ್ರಪಂಚದಲ್ಲಿ 6ಸಾವಿರದ ಐನೂರು ಭಾಷೆಗಳಿದ್ದು ಭಾರತ ದೇಶದಲ್ಲಿ562 ಭಾಷೆಗಳಿದ್ದು ಅದರಲ್ಲಿ 300 ಭಾಷೆಗಳಿಗೆ ಲಿಪಿಗಳಿದ್ದು ದೇಶದಲ್ಲಿ 22 ಬಾಷೆಗಳಿಗೆ ಮಾನ್ಯತೆ ದೊರಕಿದೆ.

ಅದರಲ್ಲಿ ಕನ್ನಡವೂ ಒಂದಾಗಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ಇಲ್ಲಿಯ ತನಕ 8 ಜ್ಞಾನಪೀಠ ಪ್ರಶಸ್ತಿ ಪಡೆದಂಥ ಏಕೈಕ ಭಾಷೆಯೆಂದರೆ ಅದು ನಮ್ಮ ಕನ್ನಡ ಭಾಷೆ. ಕನ್ನಡಿಗರು ಹೆಮ್ಮೆ ಪಡುವಂಥ ವಿಚಾರವಾಗಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಹಾಗೂ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಎಚ್.ಎಸ್. ಮುದ್ದೇಗೌಡ, ಬಿಜೆಪಿ ಮುಖಂಡ ಅಪ್ಪಾಜಿಗೌಡ, ಸಾಹಿತಿ ಮ ಸಿ ನಾರಾಯಣ, ಪ್ರಾಂಶುಪಾಲರಾದ ಶಿವಶಂಕರ್, ಶಿವನಂಜು, ಪುರಸಭೆ ಸದಸ್ಯರುಗಳಾದ ಶಿವಲಿಂಗೇಗೌಡರು, ವೇದಾವತಿ, ರಾಮಣ್ಣ, ಹಾಗೂ ಬಿಜೆಪಿ ಮುಖಂಡೆ ಶಕೀಲಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಬೋಧಕ ಬೋಧಕೇತರರು ಇದ್ದರು.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್