CrimeNEWSನಮ್ಮಜಿಲ್ಲೆ

ಜಾಹೀರಾತು ಹೊರ್ಡಿಂಗ್‌ಗೆ ಅನುಮತಿ ವಿರೋಧಿಸಿ ಬಿಬಿಎಂಪಿ ಮುಂದೆ ಜನತಾ ಪಕ್ಷ ಪ್ರತಿಭಟನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಉದ್ಯಾನನಗರಿ ಸೌಂದರ್ಯ ಹಾಳುಮಾಡಲು ತಲೆಯೆತ್ತುವ ಹೋರ್ಡಿಂಗ್ ಮಾಫಿಯಾ ವಿರುದ್ಧ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಹಿಂದೆ 2018ರ ಆಗಸ್ಟ್ ತಿಂಗಳಿನಲ್ಲಿ ನಗರದ ಸೌಂದರ್ಯಕ್ಕೆ ಮಾರಕವಾಗಿರುವ ನಗರದ ಎಲ್ಲಾ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿತ್ತು. ಮುಂದುವರಿದು, 2018 ರ ಆಗಸ್ಟ್ ತಿಂಗಳಿನಲ್ಲಿಯೇ ಒಂದು ವರ್ಷದ ಅವಧಿಗೆ ಹೊರಾಂಗಣ ಜಾಹೀರಾತು ನಿಷೇಧಿಸಿ ಪಾಲಿಕೆ ಕೌನ್ಸಿಲ್ ನಿರ್ಣಯಿಸಿತ್ತು.

ಆದರೆ, ಇಂದು ಏಕಾಏಕಿ ರಾಜ್ಯಸರ್ಕಾರ ಹೋರ್ಡಿಂಗ್ ಮಾಫಿಯಾಕ್ಕೆ ತಲೆಬಾಗಿರುವುದು ಬೆಂಗಳೂರು ನಗರದ ಜನತೆಗೆ ಆತಂಕಕಾರಿ ವಿಷಯವಾಗಿದೆ. ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಸಹಿ ಹಾಕಿದ ಕಡತಗಳ ಪೈಕಿ ಈ ಕಡತವು ಒಂದಾಗಿದ್ದು, ಸದ್ದಿಲ್ಲದೆ ಅವಘಡ ನಡೆದಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಜಾಹೀರಾತು ಹೊರ್ಡಿಂಗ್‌ಗೆ ಅನುಮತಿ ನೀಡಿರುವ ವಿರುದ್ಧ ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ “ನಗರದ ಸೌಂದರ್ಯ ಕಾಪಾಡಲು ಫ್ಲೆಕ್ಸ್, ಬ್ಯಾನರ್ ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. “ಸ್ವಚ್ಛ ನಗರ ನಿರ್ಮಾಣಕ್ಕಾಗಿ ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಿಗೆ ಸಂಪೂರ್ಣ ನಿಷೇಧ ಹೇರುತ್ತೇವೆ” ಎಂದು 2018 ರಲ್ಲಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆ ಈಗ ಹುಸಿಯಗಿದೆ ಎಂದರು.

ಆಂತರಿಕವಾಗಿ ಜನಪ್ರತಿನಿಧಿಗಳಿಗೆ ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಮತ್ತು ಹಫ್ತಾವಸೂಲಿ ವೀರರಿಗೆ ಅಧಿಕೃತವಾಗಿ ಪರವಾನಗಿ ಕೊಟ್ಟಂತಾಗುತ್ತದೆ ಎಂಬುದು ಸಾಮಾನ್ಯ ನಾಗರೀಕರಿಗೆ ಅರ್ಥವಾಗದ ಸತ್ಯವಾಗಿದೆ ! ಹೋರ್ಡಿಂಗ್ ರೂಪದ ಜಾಹೀರಾತುಗಳು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವುದಲ್ಲದೆ, ಜನನಿಬಿಡ ರಸ್ತೆಗಳಲ್ಲಿ ವಾಹನ ಸವಾರರ ಗಮನವನ್ನು ಸೆಳೆದು ಅನೇಕ ಅಪಘಾತವಾಗಿರುವ ನಿದರ್ಶನಗಳೂ ಇವೆ.

ಪರಿಸರದ ಮೇಲೂ ನಕಾರಾತ್ಮಕವಾದ ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ಪರಿಸರತಜ್ಞರ ಸ್ಪಷ್ಟ ಅಭಿಪ್ರಾಯವೂ ಇದೆ. ಇವೆಲ್ಲವನ್ನೂ ಉಲ್ಲಂಘಿಸಿ, ಬಿಜೆಪಿ ಪಕ್ಷವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಾತ್ರೋರಾತ್ರಿ ಜಾಹೀರಾತು-ಹೋರ್ಡಿಂಗ್‌ಗಳಿಗೆ ಅನುಮತಿ ನೀಡಿರುವುದು ಜನವಿರೋಧಿ ಕ್ರಮ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಖ್ಯಾತ ತಜ್ಞರ, ಸಾಮಾಜಿಕ ಕಾರ್ಯಕರ್ತರ, ಬುದ್ದಿಜೀವಿಗಳ ಹಾಗೂ ಮುಖ್ಯವಾಗಿ ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಆಹ್ವಾನಿಸಿ ನಂತರ ತೀರ್ಮಾನಿಸಬೇಕಾಗಿದ್ದು ರಾಜ್ಯ ಸರ್ಕಾರದ ಕರ್ತವ್ಯವಾಗಿತ್ತು. ಆದರೆ, ರಾಜ್ಯ ಸರ್ಕಾರದ ಈ ನಡೆ ಅದರ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕೈಗನ್ನಡಿ.

ಆದ್ದರಿಂದ ಸರ್ಕಾರ ಮತ್ತು ಬಿಬಿಎಂಪಿ ಖ್ಯಾತ ತಜ್ಞರ, ಸಾಮಾಜಿಕ ಕಾರ್ಯಕರ್ತರ, ಬುದ್ದಿಜೀವಿಗಳ ಹಾಗೂ ಮುಖ್ಯವಾಗಿ ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಪರಿಗಣ ಸಿ ಖಾಸಗಿ ಜಾಹೀರಾತು ಏಜೆನ್ಸಿಗಳ ಮಾಫಿಯಾಕ್ಕೆ ತಲೆಬಾಗದೆ, ಬೆಂಗಳೂರು ನಗರದ ಸೌಂದರ್ಯಕ್ಕೆ ಚ್ಯುತಿ ಬರದಂತೆ ಕಾರ್ಯಪ್ರವೃತ್ತವಾಗಬೇಕೆಂದು ಜನತಾ ಪಾರ್ಟಿ ಒಂದು ಪ್ರಬುದ್ಧ ರಾಜಕೀಯ ಪಕ್ಷವಾಗಿ ರಾಜ್ಯಸರ್ಕಾರ ಮತ್ತು ಬಿಬಿಎಂಪಿ ಯನ್ನು ಆಗ್ರಹಿಸಿದೆ.

ಒಂದು ವೇಳೆ ರಾಜ್ಯಸರ್ಕಾರ ಮತ್ತು ಬಿಬಿಎಂಪಿಯು ತನ್ನ ನಿರ್ಧಾರಗಳಿಂದ ಹಿಂದೆ ಸರಿಯದಿದ್ದಲ್ಲಿ, ಜನತಾ ಪಾರ್ಟಿಯು ಕಾನೂನಾತ್ಮಕ ಹೋರಾಟ ಮಾಡಬೇಕಾಗುತ್ತದೆ ಎಂಬುದನ್ನು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಈ ಮೂಲಕ ಎಚ್ಚರಿಕೆ ನೀಡಿದೆ.

ಜನತಾಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸ್ಥಾವರಮಠ, ರಾಜ್ಯಾಧ್ಯಕ್ಷ ಕೆ.ಎಂ.ಪಾಲಾಕ್ಷ, ರಾಜ್ಯ ಹಿರಿಯ ಮುಖಂಡ ಅಬ್ದುಲ್ ಬಶೀರ್, ರಾಜ್ಯ ಉಪಾಧ್ಯಕ್ಷ ನಂದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ವೀರೇಶ್, ರಾಜ್ಯ ಯುವ ಘಟಕದ ಅಧ್ಯಕ್ಷ ಭಾಸ್ಕರ್, ಬೆಂಗಳೂರು ನಗರ ಅಧ್ಯಕ್ಷ ನಾಗೇಶ್ ಎನ್ . ಇತರರಿದ್ದರು.

ಪಿರಿಯಾಪಟ್ಟಣ: ಅಭಿನಯ ಶಾರದೆ ಜಯಂತಿಗೆ ನುಡಿನಮನ

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...