ಬೆಂಗಳೂರು: ನಾಳೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಸ್‌ಗಳು ಬಹುತೇಕ ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿಯಲಿದ್ದು, ನಾಲ್ಕೂ ಸಾರಿಗೆ ನಿಗಮಗಳಿಂದ 14.5 ಸಾವಿರ ಬಸ್‌ಗಳು ಕಾರ್ಯಾಚರಿಸಲಿವೆ.
ಅವುಗಳಲ್ಲಿ ಬಿಎಂಟಿಸಿಯ 4500ಕ್ಕೂ ಹೆಚ್ಚು ಬಸ್‌ಗಳು, ಕೆಎಸ್‌ಆರ್‌ಟಿಸಿಯ 4 ಸಾವಿರ ಬಸ್‌ಗಳು, ಎನ್‌ಇಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ತಲಾ 3 ಸಾವಿರಕ್ಕೂ ಹೆಚ್ಚು ಬಸ್‌ಗಳು ಸೇವೆ ಒದಗಿಸಲಿವೆ.
ಬೆಳಗ್ಗೆ5ರಿಂದ ರಾತ್ರಿ 9 ಗಂಟೆಯವರೆಗೆ ಬಸ್‌ಗಳು ಸಂಚರಿಸಲಿದ್ದು, ರಾತ್ರಿ 9 ಗಂಟೆ ನಂತರ ಬಸ್ ಸಂಚಾರ ಇರುವುದಿಲ್ಲ. ಜತೆಗೆ ಬೆಳಗ್ಗೆ 5 ಗಂಟೆಗೂ ಮುನ್ನವೂ ಬಿಎಂಟಿಸಿ ಬಸ್ ಸಂಚರಿಸುವುದಿಲ್ಲ.
8 ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡಿಸುವಂತಿಲ್ಲ
ಇನ್ನು ಬಿಎಂಟಿಸಿ ಸಿಬ್ಬಂದಿ 8 ಗಂಟೆಗೂ ಮೀರಿ ಕೆಲಸ ಮಾಡಿಸುವಂತಿಲ್ಲ. ಪ್ರತಿ ಡಿಪೋದಲ್ಲೂ 5 ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆಗೆ ಸಿದ್ಧವಾಗಿರಬೇಕು. ಬಸ್‌ಗಳಲ್ಲಿ ಮಾರ್ಗಸೂಚಿ ಫಲಕ ಕಡ್ಡಾಯವಾಗಿರಬೇಕು ಮತ್ತು ಶೇ.100ರಷ್ಟು ಪ್ರಯಾಣಿಕರಿಗೆ ಅಂದರೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಲಾಗಿದ್ದು, ನಿಂತುಕೊಂಡು (ಸ್ಟ್ಯಾಂಡಿಂಗ್ ) ಪ್ರಯಾಣಿಸುವುಕ್ಕೆ ಇನ್ನೂ ಅನುಮತಿ ನೀಡಿಲ್ಲ.
ಕೆಎಸ್ಆರ್ಟಿಸಿ : ನಾಳೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈಗಿರುವಂತೆಯೇ ಕೆಎಸ್ಆರ್ಟಿಸಿ ಬಸ್ ಸೇವೆ ಇರಲಿದೆ. ಅಂದರೆ ಪ್ರಸ್ತುತ 4 ಸಾವಿರ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರ ಲಭ್ಯತೆ ಅನುಗುಣವಾಗಿ ಸಂಸ್ಥೆಯಿಂದ ಬಸ್‌ಗಳು ಸಂಚರಿಸಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನು ಪ್ರಯಾಣಿಕರು ಕೊವಿಡ್ 19 ತಡೆ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೆಎಸ್ಆರ್ಟಿಸಿ ಸೂಚಿಸಿದೆ.
ಅಂತಾರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ ಸೇವೆ ಈಗ ಇರುವಂತೆಯೇ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ನಡುವೆ ಸಂಚರಿಸಲಿವೆ. ಇನ್ನು ಉಳಿದಂತೆ ಕೇರಳ, ತಮಿಳು ನಾಡಿನಲ್ಲಿ ಇನ್ನೂ ಕೋವಿಡ್ ನಿಯಮ ಸಡಿಲಿಕೆಯಾಗದಿರುವುದರಿಂದ ಆ ರಾಜ್ಯಗಳಿಗೆ ಬಸ್ ಸೇವೆ ಲಭ್ಯವಾಗುವುದಿಲ್ಲ.
ಎನ್‌ಇಕೆಆರ್‌ಟಿಸಿ: ಇನ್ನು ಎನ್ಇಕೆಆರ್ಟಿಸಿಯಿಂದ ಈಗಾಗಲೇ 3 ಸಾವಿರ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರ ಲಭ್ಯತೆ ನೋಡಿಕೊಂಡು ಹೆಚ್ಚುವರಿ ಬಸ್ ಸೇವೆಗೆ ಕ್ರಮ ವಹಿಸಲಾಗುವುದು, ಇನ್ನು ಅವುಗಳಲ್ಲಿ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಸಂಚರಿಸುತ್ತಿವೆ ಎಂದು ನಿಗಮದ ಅಧಿಕಾರಿ ತಿಳಿಸಿದ್ದಾರೆ.
ಎನ್‌ಡಬ್ಲ್ಯುಕೆಆರ್‌ಟಿಸಿ: ಎನ್ಡಬ್ಲ್ಯುಕೆಆರ್ಟಿಸಿಯಿಂದ 3ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚರಿಸಲಿದ್ದು, ಪ್ರಯಾಣಿಕರ ಲಭ್ಯತೆ ಮೇರೆಗೆ ಹೆಚ್ಚು ಬಸ್‌ಗಳ ಸಂಚಾರಕ್ಕೆ ನಿಗಮ ಮುಂದಾಗಲಿದೆ ಎಂದು ಸಂಸ್ಥೆ ಅಧಿಕಾರಿ ತಿಳಿಸಿದ್ದಾರೆ.