NEWSನಮ್ಮಜಿಲ್ಲೆವಿಜ್ಞಾನ

ನಂದಿಬೆಟ್ಟ ಬಂದ್: ಬ್ರಹ್ಮಗಿರಿ ಬೆಟ್ಟವೇರಿ ಪ್ರವಾಸಿಗರ ಮೋಜು ಮಸ್ತಿ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಬಳ್ಳಾಪುರ: ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಂದಿಬೆಟ್ಟ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಇತ್ತ ನಂದಿಬೆಟ್ಟ ಬಂದ್ ಆಗಿರುವುದರಿಂದ ಪ್ರವಾಸಿಗರು ಪಕ್ಕದ ಬ್ರಹ್ಮಗಿರಿ ಬೆಟ್ಟ ಏರಿ ಹುಚ್ಚಾಟ ಪ್ರದರ್ಶಿಸಿದ್ದಾರೆ. ಆದರೆ ಇದರಿಂದ ಕೊರೊನಾ ತನ್ನ ರೌದ್ರನರ್ತನ ತೋರಬಹುದು ಎಂಬ ಆತಂಕದಲ್ಲಿದೆ ಜಿಲ್ಲಾಡಳಿತ.

ಇನ್ನು ಕೊರೊನಾ ಮೂರನೇ ಅಲೆಗೂ ಪ್ರವಾಸಿಗರು ಡೋಂಟ್ ಕೇರ್ ಎಂಬಂತೆ ವರ್ತಿಸುತ್ತಿದ್ದು, ವಿಶ್ವವಿಖ್ಯಾತ ನಂದಿಗಿರಿಧಾಮದತ್ತ ಸಾವಿರಾರು ಮಂದಿ ಆಗಮಿಸಿದ್ದಾರೆ. ಬೆಳ್ಳಂ ಬೆಳಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸಿದ್ದು. ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಇದಿರಿಂದ ಈಗ ಕೊರೊನಾ ಹೆಚ್ಚಾಗುವ ಭಯ ಶುರುವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವೀಕೆಂಡ್ ನಂದಿಬೆಟ್ಟ ಸಂಪೂರ್ಣ ಬಂದ್ ಮಾಡಿ ಲಾಕ್‍ಡೌನ್ ಮಾಡಿದೆ. ಆದರೂ ಕ್ಯಾರೆ ಎನ್ನದ ಪ್ರವಾಸಿಗರು ನಂದಿಬೆಟ್ಟದತ್ತ ದಾಂಗುಡಿಯಿಟ್ಟಿದ್ದಾರೆ. ಮಾಸ್ಕ್ ಮರೆತು ಸಾಮಾಜಿಕ ಅಂತರ ನಿರ್ಲಕ್ಷ್ಯ ಮಾಡಿ, ಕೊರೊನಾ ಮೂರನೇ ಅಲೆಗೆ ಅಹ್ವಾನ ನೀಡುತ್ತಿದ್ದಾರೆ.

ಇನ್ನು ಒಂದೇ ಬಾರಿಗೆ ನೂರಾರು ಕಾರು ಬೈಕ್ ಗಳ ಆಗಮನದ ಹಿನ್ನೆಲೆ ನಂದಿಬೆಟ್ಟದ ತಪ್ಪಲಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತ್ತ ಚೆಕ್ ಪೋಸ್ಟ್ ಬಳಿ ಪ್ರವಾಸಿಗರಿಗೆ ತಡೆದಿದ್ದರಿಂದ ರಸ್ತೆಯಲ್ಲೇ ಕಾರು ಬೈಕ್ ಪಾರ್ಕ್ ಮಾಡಿದ ಪ್ರವಾಸಿಗರು ಪೊಲೀಸರ ಕಣ್ತಪ್ಪಿಸಿ ನಂದಿಬೆಟ್ಟದ ಪಕ್ಕದ ತಪ್ಪಲಿನ ಬ್ರಹ್ಮಗಿರಿ ಬೆಟ್ಟ ಏರಿ ಹುಚ್ಚಾಟ ಮೆರೆದಿದ್ದಾರೆ.

ಬ್ರಹ್ಮಗಿರಿ ಬೆಟ್ಟ ಏರಿ ಫೋಟೋ, ಸೆಲ್ಫಿ ತೆಗೆದುಕೊಳ್ಳುವ ಸಾಹಸ ಮಾಡಿದ್ದಾರೆ. ಬೆಟ್ಟ ಏರಿದ ನೂರಾರು ಮಂದಿ ಪ್ರವಾಸಿಗರನ್ನು ಕೆಳಗಿಳಸಲು ಪೊಲೀಸರು ಹರಸಾಹಸಪಡುವಂತಾಗಿದೆ. ಯಾರೇ ಎಷ್ಟೆ ಹೇಳಿದರೂ ನಾವ್ ಇರೋದು ಹೀಗೆ ನಾವ್ ಮಾಡೋದು ಹೀಗೆ ಅಂತ ಪ್ರವಾಸಿಗರು ತಮ್ಮ ಮೋಜುಮಸ್ತಿ ಅಂತ ನಂದಿಬೆಟ್ಟದತ್ತ ಆಗಮಿಸಿ ಕೊರೊನಾ ಗುಮ್ಮವನ್ನು ಆಹ್ವಾನಿಸುತ್ತಿದ್ದಾರೆ.

ಇನ್ನು ಕೊರೊನಾ ಸೋಂಕು ಹೆಚ್ಚಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿದ್ದು ಸರ್ಕಾರ ವಿಶ್ವಮಾರಿ ನಿಯಂತ್ರಿಸಲು ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಚಿಂತನೆಯಲ್ಲಿದೆ. ಆದರೆ ಇತ್ತ ಪ್ರವಾಸಿಗರು ತಮ್ಮ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ.

ಮಹದೇವಪುರ: ಅನಧಿಕೃತ ಕೇಬಲ್ ಪಾದಚಾರಿ ಮಾರ್ಗ ಒತ್ತುವರಿ ತೆರವು

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ