Breaking NewsNEWSನಮ್ಮಜಿಲ್ಲೆರಾಜಕೀಯ

ಮೀಡಿಯಾ ಪೋಸ್ ಬೇಡ, ರಾಜ್ಯದ ಜನತೆ ಪ್ರಾಣ ಉಳಿಸಿ: ತೇಜಸ್ವಿ ಸೂರ್ಯ ಕುಟುಕಿದ ನಾಗಣ್ಣ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ತಿಮಿಂಗಿಲಗಳನ್ನು ಹಿಡಿಯದೆ ಬರೀ ಮೀಡಿಯಾ ಪೋಸ್ ನೀಡುತ್ತಿರುವ ಸಂಸದರು ನಿಜಕ್ಕೂ ತಾಕತ್ ಇದ್ದಲ್ಲಿ ಕೇಂದ್ರ ಸರ್ಕಾರದಿಂದ ಆಕ್ಸಿಜನ್ ತರಿಸಿ ಕೊರೊನಾ ಸೋಂಕಿತರಿಗೆ ನೆರವಾಗಿ ತೋರಿಸಲಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ. ಟಿ .ನಾಗಣ್ಣ ಸವಾಲು ಹಾಕಿದ್ದಾರೆ.

ಇಂದು ನಗರದ ಪಕ್ಷದ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯ ಮಹಾದುರಂತ ರಾಷ್ಟ್ರವನ್ನು ಅಪ್ಪಳಿಸುತ್ತಿರುವ ಈ ಸಮಯದಲ್ಲಿ ಜನಸಾಮಾನ್ಯರಿಗೆ ಬೆಡ್ ಗಳು, ಐಸಿಯು, ವೆಂಟಿಲೇಟರ್, ಆಕ್ಸಿಜನ್ ಸಮಯಕ್ಕೆ ಸಿಗದೆ ಪ್ರತಿ ದಿನ ನೂರಾರು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ ಗಳಾಗುತ್ತಿರುವುದು ಕಟುವಾಸ್ತವ ಎಂದು ಕಿಡಿಕಾರಿದರು.

ಕೊರೊನಾ ಮಹಾ ಮಾರಿಯ ಮೊದಲನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಹಲವಾರು ವೈಫಲ್ಯಗಳ ನಂತರ ಎರಡನೇ ಅಲೆಯಲ್ಲಿಯೂ ಸಹ ಪೂರ್ವಯೋಜಿತವಾಗಿ ಏನನ್ನು ಸಿದ್ಧಪಡಿಸಿಕೊಳ್ಳದೆ ಸಂಪೂರ್ಣ ವೈಫ ಲ್ಯ ಕಂಡಿದೆ. ಪರಿಣಾಮ ರಾಜ್ಯದಲ್ಲಿ ಇಂದು ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸರ್ಕಾರದ ಇಷ್ಟೆಲ್ಲಾ ವೈಫಲ್ಯ ಗಳಿದ್ದರೂ ಸಹ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತ ಕಡೆ ಗಮನಹರಿಸಿ ಸಮರೋಪಾದಿಯಲ್ಲಿ ವೈಫಲ್ಯಗಳನ್ನು ಸರಿಪಡಿಸುವುದನ್ನು ಬಿಟ್ಟು ಬೆಡ್ ಬ್ಲಾಕಿಂಗ್ ಎಂಬ ದಂಧೆಯನ್ನು ಬಯಲಿಗೆಳೆದಿದ್ದೇನೆ ಎಂಬಂತೆ ಮಾಧ್ಯಮಗಳ ಮುಂದೆ ಫೋಸ್ ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದರು.

ತಮ್ಮ ಬಿಜೆಪಿ ಸರ್ಕಾರದ ಮಂತ್ರಿ ಮಹೋದಯರು ಈ ದಂಧೆಯಲ್ಲಿ ನಿರತರಾಗಿ ಇದ್ದರೂ ಸಹ ಯಾವುದೋ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ಬೃಹತ್ ತಿಮಿಂಗಿಲಗಳನ್ನು ಹಿಡಿಯಲಾರದೆ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಇಂದು ರೆಮಿಡಿ ಸಿವರ್ ಔಷಧ, ಆಕ್ಸಿಜನ್ ಸಿಲಿಂಡರ್ ಕಾಳಸಂತೆಯಲ್ಲಿ ಅವ್ಯಾಹತವಾಗಿ ಮಾರಾಟವಾಗುತ್ತಿವೆ. ಇವೆಲ್ಲವುಗಳನ್ನು ಮೂಲೋಚ್ಛಾಟನೆ ಮಾಡುವುದು ಬಿಟ್ಟು ಏಕಾಏಕಿ ಯಾವುದೇ ಕಾಲ್ ಸೆಂಟರ್ ಗೆ ನುಗ್ಗಿ ಪೌರುಷವನ್ನು ಪ್ರದರ್ಶಿಸುವುದು ಹೇಡಿತನದ ಲಕ್ಷಣ ಎಂದು ನಾಗಣ್ಣ ಆಕ್ರೋಶವನ್ನು ಹೊರಹಾಕಿದರು.

ಸಂಸದರಿಗೆ ನಿಜಕ್ಕೂ ಬೆಂಗಳೂರಿಗರ ಪ್ರಾಣದ ಮೇಲೆ ಕಿಂಚಿತ್ತಾದರೂ ಕಾಳಜಿ – ಕಳವಳ ಹಾಗೂ ತಾಕತ್ತು ಇದ್ದರ ಈ ಕೂಡಲೇ 28 ಮಂದಿ ರಾಜ್ಯದ ಸಂಸತ್ ಸದಸ್ಯರನ್ನು ಸೇರಿಸಿಕೊಂಡು ಪ್ರಧಾನ ಮಂತ್ರಿಗಳ ಮೇಲೆ ತೀವ್ರ ಒತ್ತಡವನ್ನು ಹೇರುವ ಮೂಲಕ ಈ ತಕ್ಷಣದಿಂದಲೇ ರಾಜ್ಯಕ್ಕೆ ಬೇಕಾಗುವಷ್ಟು ವೈದ್ಯಕೀಯ ಆಮ್ಲಜನಕ ಗಳನ್ನು ತಂದು ರಾಜ್ಯದ ಜನತೆಯ ಪ್ರಾಣವನ್ನು ಉಳಿಸಬೇಕೆಂದು ಆಗ್ರಹಿಸಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು