ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದ ಪೆಟ್ರೋಲ್ ಬಂಕ್ ಮುಂಭಾಗ ಮಾಜಿ ಶಾಸಕ ಕೆ.ವೆಂಕಟೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪೆಟ್ರೋಲ್ ನೂರು ನಾಟ್‌ಔಟ್ ಫಲಕ ಹಿಡಿದು ವ್ಯಂಗ್ಯ ಮಾಡುವ ಮೂಲಕ ಬಿಜೆಪಿ ಸರ್ಕಾರದಿಂದ ಏರಿಕೆ ಆಗಿರುವ ತೈಲಗಳ ಬೆಲೆ ಖಂಡಿಸಿ ಭಾನುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಮಾತನಾಡಿ, ಈ ಕೊರೊನಾ ಎಂಬ ಮಾರಕ ವೈರಸ್‌ನಿಂದ ಜನರು ಈಗಾಗಲೇ ಸಂಕಷ್ಟದಲ್ಲಿ ಇದ್ದಾರೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಮೇಲೆ ಪೆಟ್ರೋಲ್, ಡೀಸೆಲ್ ಮತ್ತು ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಸಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಮೂಲಕ ಸುಲಿಗೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಕೋವಿಡ್ ಸಂಕಷ್ಟದ ಸಮಯದಲ್ಲಿ ದೇಶದ ರೈತರಿಗೆ ಹಾಗೂ ಜನತೆಗೆ ನೆರವುನೀಡುವ ಬದಲಾಗಿ ಶೋಷಣೆ ಮಾಡುತ್ತಿದೆ. ಪ್ರಧಾನಿ ಮೋದಿ ಹಿಟ್ಲರ್‌ಗಿಂತ ಕೆಟ್ಟದಾಗಿ ವರ್ತಿಸುತ್ತಾ ದಬ್ಬಾಳಿಕೆಯ ಮೂಲಕ ದೇಶ ಆಳುತ್ತಿದ್ದಾರೆ ಎಂದು ಆರೋಪಿಸಿದರು.
ತಾಪಂ ಮಾಜಿ ಸದಸ್ಯರಾದ ಕುಂಜಪ್ಪ ಕಾರ್ನಾಡ್, ಅನಿತಾ ತೋಟಪ್ಪಶೆಟ್ಟಿ, ಮುಖಂಡರಾದ ಬಿ.ಜೆ.ಬಸವರಾಜ್, ಎಸ್.ಎನ್.ಭುಜಂಗ, ಸಣ್ಣಸ್ವಾಮಿಗೌಡ, ಕರಡೀಪುರ ಕುಮಾರ್, ಪಿ.ಪಿ.ಪುಟ್ಟಯ್ಯ, ಮಹೇಂದ್ರ ಕುಮಾರ್, ಜೆ.ಮೋಹನ್, ಗಗನ್, ಈಚೂರು ಲೋಕೇಶ್, ಹಿಟ್ನೆಹೆಬ್ಬಾಗಿಲು ಶಿವರುದ್ರ, ಹಮ್ಮಿಗೆ ಮಹೇಶ್, ರಹಮತ್‌ಜಾನ್ ಬಾಬು, ಕೋಮಲಾಪುರ ಹರೀಶ್, ಬಿ.ವಿ. ರವಿ, ಮನು, ಮಲ್ಲೇಶ್, ಪುಟ್ಟರಾಜು, ಅಲ್ಪನಾಯಕನಹಳ್ಳಿ ಭೀಮಣ್ಣ, ಗಂಗನಕುಪ್ಪೆ ಚತುರ, ಈ.ರಮೇಶ್, ಪರಮೇಶ್, ರಕ್ಷಿತ್, ಸೇರಿದಂತೆ ಮತಿತ್ತರು ಇದ್ದರು.