ಪಿರಿಯಾಪಟ್ಟಣ: ಕನ್ನಡ ಚಿತ್ರರಂಗದ ಖ್ಯಾತ ನಟಿ, ಅಭಿನಯ ಶಾರದೆ ಜಯಂತಿಯವರಿಗೆ ಪಿರಿಯಾಪಟ್ಟಣ ತಾಲೂಕು ಗಾನ ಕೋಗಿಲೆ ವಾದ್ಯಗೋಷ್ಠಿ, ಲಘು ಸಂಗೀತ ಮತ್ತು ನೃತ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷ ಪಿ.ವಿ.ವಿಶ್ವನಾಥ್ ಮಾತನಾಡಿ, ಕನ್ನಡ ಚಿತ್ರರಂಗದ ಅಭಿನಯ ಶಾರದೆ ತನ್ನ ಅಭಿನಯದ ಪಯಣವನ್ನು ನಿಲ್ಲಿಸಿರುವುದು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದರು.
ಜಯಂತಿಯವರು ಬಹುಭಾಷ ನಟಿಯಾಗಿದ್ದು ತಮ್ಮ ಅದ್ಭುತ ನಟನೆಯ ಮೂಲಕ ಅನೇಕ ಪಾತ್ರಕ್ಕೆ ಜೀವ ತುಂಬುತಿದ್ದ ಕಲಾವಿದೆ. ಆದ್ದರಿಂದಲೇ ಅವರಿಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳ ಜೊತೆಗೆ ಅಭಿನಯ ಶಾರದೆಯೆಂದು ಜನಮಾನಸದಲ್ಲಿ ಅಮರರಾಗಿದ್ದಾರೆ ಎಂದು ತಿಳಿಸಿದರು.
ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಅಭಿನಯದ ಮೂಲಕ ಬಹಳಷ್ಟು ಪಾತ್ರಗಳಿಗೆ ಜೀವ ತುಂಬುತಿದ್ದ ನಟಿ. ಎಡಕಲ್ಲು ಗುಡ್ಡದ ಮೇಲೆ, ಮಸಣದ ಹೂಗಳಂತಹ ಸಿನಿಮಾಗಳಲ್ಲಿ ಇವರ ನಟನೆ ಅದ್ಭುತವಾಗಿದ್ದು ನಟನೆಯ ಮೂಲಕ ಜಯಂತಿಯವರು ಎಂದೆಂದಿಗೂ ಅಮರರಾಗಿದ್ದಾರೆ ಎಂದು ಹೇಳಿದರು.
ಕನ್ನಡ ಚಿತ್ರರಂಗದಲ್ಲಿ ಅಮ್ಮ ಎಂದೇ ಚಿರಪರಿಚಿತರಾದ ಜಯಂತಿಯವರು ಎಂತಹ ಪಾತ್ರಗಳಿದ್ದರೂ ಆ ಪಾತ್ರಕ್ಕೆ ಜೀವತುಂಬುತಿದ್ದವರು ಇವರ ಅಭಿನಯ ಉದಯೋನ್ಮುಖ ಕಲಾವಿದರಿಗೆ ಮಾದರಿಯಾಗಿವೆ ಎಂದರು.
ಸಂಘದ ಸಹ ಕಾರ್ಯದರ್ಶಿ ಅಂಬಾರಿ ಪರಮೇಶ್, ನಿರ್ದೇಶಕ ಸುಬ್ರಹ್ಮಣ್ಯ, ಸದಸ್ಯರಾದ ಶಿವಮೂರ್ತಿ ಹಾಗೂ ಚರಣ್ ಉಪಸ್ಥಿತರಿದ್ದರು.
ರಾವಂದೂರು: 158 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿಪೂಜೆ