NEWSನಮ್ಮಜಿಲ್ಲೆ

ಸಿದ್ಧಾರ್ಥ ಸೇವಾ ಟ್ರಸ್ಟ್ ನಿಂದ ಪೌರಕಾರ್ಮಿಕ ಸ್ಟೀಮರ್ ಗಳ ಕೊಡುಗೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪುರಸಭಾ ಪೌರಕಾರ್ಮಿಕ ಸಿಬ್ಬಂದಿಗೆ ಸಿದ್ಧಾರ್ಥ  ಸೇವಾ ಟ್ರಸ್ಟ್ ವತಿಯಿಂದ ಆರೋಗ್ಯ ರಕ್ಷಣೆಗಾಗಿ ಸ್ಟೀಮರ್ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್  ಮಾತನಾಡಿ, ಕೋವಿಡ್ ಮಹಾಮಾರಿ ಅತೀ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದಲ್ಲದೆ ಗಣನೀಯ ಸಂಖ್ಯೆಯಲ್ಲಿ ಸಾವುನೋವುಗಳು ಕಂಡು ಬಂದು ಜನರಲ್ಲಿ ಭೀತಿಯನ್ನು ಉಂಟುಮಾಡಿದೆ.

ಆದ್ದರಿಂದ ದಿನನಿತ್ಯ ತಮ್ಮ ಜೀವನದ ಹಂಗನ್ನು ತೊರೆದು ಸಾರ್ವಜನಿಕರ ಆರೋಗ್ಯ ಹಾಗೂ ಪ್ರಾಣ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಪೌರ ಕಾರ್ಮಿಕರ ಆರೋಗ್ಯದ ರಕ್ಷಣೆ ಬಹಳ ಪ್ರಮುಖವಾಗಿದೆ.  ಪ್ರತಿಯೊಬ್ಬ ಪೌರ ಕಾರ್ಮಿಕ ಕೂಡ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು.

ಇನ್ನು ಪೌರಕಾರ್ಮಿಕ ಹಾಗೂ ಸಫಾಯಿ ಕರ್ಮಚಾರಿ ವೃತ್ತಿಯಲ್ಲಿ ತೊಡಗಿರುವ ಸಿಬ್ಬಂದಿ ತಮ್ಮ ಆರೋಗ್ಯಕ್ಕೆ  ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿನಿತ್ಯ ಅನೈರ್ಮಲ್ಯವನ್ನು  ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಇವರು ಪ್ರಥಮ ಕೊರೊನಾ ವಾರಿಯರ್ಸ್  ಗಳ ಪಟ್ಟಿಗೆ ಬರುತ್ತಾರೆ. ಅದರಿಂದ ಪೌರ ಕಾರ್ಮಿಕರ ರಕ್ಷಣೆ ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದರು.

ತಹಸೀಲ್ದಾರ್ ಚಂದ್ರಮೌಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್, ತಾಪಂ ಮಾಜಿ ಸದಸ್ಯ ಎ.ಟಿ.ರಂಗಸ್ವಾಮಿ, ಸಫಾಯಿ ಕರ್ಮಚಾರಿ ಮೇಲ್ವಿಚಾರಣಾ ಸಮಿತಿ ಸದಸ್ಯ ಎಚ್.ಕೆ. ಮಹೇಶ್, ಸಿದ್ಧಾರ್ಥ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಕಾಂತರಾಜು, ಕಾರ್ಯದರ್ಶಿ ಸುಧಾರಾಣಿ,  ಆರೋಗ್ಯ ನಿರೀಕ್ಷಕ ಆದರ್ಶ, ಪ್ರದೀಪಕುಮಾರ್, ಮುಖಂಡರಾದ ಸೋಮಶೇಖರ್, ದೇವರಾಜು,  ಅಣ್ಣಯ್ಯ ಶೆಟ್ಟಿ  ಪುರಸಭಾ ನೌಕರರು ಇದ್ದರು.

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ