ಜೇವರ್ಗಿ: ಪಟ್ಟಣದ ವಿಜಯಪುರ ಸರ್ಕಲ್ ಬಳಿ ಇರುವ ಎಪಿಎಂಸಿ ವ್ಯಾಪ್ತಿ ಹಳೆಯ ಗೋಡೊನ್ ಜಾಗವನ್ನು ಬಸವೇಶ್ವರ ಪುತ್ಥಳಿಗೆ ಮಂಜೂರು ಮಾಡುವಂತೆ ಜೇವರ್ಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸವಿತಾ ನಾಯಕ ಅವರಿಗೆ ತಾಲೂಕು ವೀರಶೈವ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಸುಮಾರು 1.50 ಲಕ್ಷ ವೀರಶೈವ ಲಿಂಗಾಯತ ಸಮುದಾಯವಿದ್ದು, ಕಳೆದ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ಇಲ್ಲದಿರುವುದು ದುರ್ದೈವದ ಸಂಗತಿ.
ಆದ್ದರಿಂದ ಜೇವರ್ಗಿ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಇರುವ ಬೀದರ್ ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಒಳಗೆ ಶಿಥಿಲಗೊಂಡಿರುವ ಹಳೆಯ ಗೋದಾಮು ಇರುವ ಸ್ಥಳ 100″100 ಅಡಿ ಅಳತೆಯ ಸ್ಥಳವನ್ನು ಜಗಜ್ಯೋತಿ ಬಸವೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಬೇಕೆಂದು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸಿದ್ದು ಅಂಗಡಿ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಸಂಘಟನೆ ಪ್ರಧಾನ ಕಾರ್ಯದರ್ಶಿ ಅಶೋಕ ಪಾಟೀಲ, ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ಪದಾಧಿಕಾರಿಗಳಾದ ವಿಶ್ವ ಪಾಟೀಲ, ಕೇದಾರಲಿಂಗಯ್ಯ ಹಿರೇಮಠ, ಸಾಹೇಬಗೌಡ ಪಾಟೀಲ, ವಿಶಾಲ ಬಂಕೂರ, ವಿಜಯಕುಮಾರ ನರಿಬೋಳ ವಕೀಲರು, ಸಿದ್ದಯ್ಯ ಸ್ಥಾವರಮಠ, ರವಿ ಅವಟಿ, ವೀರು ಪಾಟೀಲ, ಷಣ್ಮುಖ ಹಿರೇಗೌಡ, ವೀರೇಶ ನರಿಬೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.