NEWSನಮ್ಮಜಿಲ್ಲೆ

ಇಲ್ಲಿ ಹೊರ ಜಿಲ್ಲೆಯವರ ಕ್ವಾರಂಟೈನ್  ಮಾಡಬೇಡಿ 

ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಸಕರಿಂದ ಜಿಲ್ಲಾಧಿಕಾರಿಗೆ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂ. ಗ್ರಾಮಾಂತರ: ವಿದೇಶಗಳಿಂದ ಬರುವ ಹೊರ ಜಿಲ್ಲೆಯ ಜನರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡದಿರಲು ಹಾಗೂ ಜಿಲ್ಲೆಯನ್ನು ಕೆಂಪು ವಲಯದಿಂದ ಬದಲಾಯಿಸುವಂತೆ ಕೋರಿ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಸಕರು, ಜಿಪಂ, ತಾಪಂ ವತಿಯಿಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರು  ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಮನವಿ ಸಲ್ಲಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

ಈವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು ಮಾಡಿರುವ ಮನವಿಯ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯ ಶಾಸಕರು ಮಾತನಾಡಿ, ವಿದೇಶಗಳಿಂದ ಕರ್ನಾಟಕದ ಜನರನ್ನು ಕರೆತರುವ ಸರ್ಕಾರದ ಕ್ರಮ ಪ್ರಶಂಸನೀಯವಾದುದಾಗಿದ್ದು, ಆದರೆ ಗ್ರಾಮಾಂತರ ಜಿಲ್ಲೆಯಲ್ಲಿ ವಿದೇಶದಿಂದ ಬರುವ ಹೊರ ಜಿಲ್ಲೆಯ ಪ್ರಯಾಣಿಕರನ್ನು ಕ್ವಾರಂಟೇನ್ ಮಾಡಬಾರದೆಂದು ತಿಳಿಸಿದರು.

ಹೊಸಕೋಟೆ  ಶಾಸಕ ಶರತ್ ಕುಮಾರ್ ಬಚ್ಚೇಗೌಡ, ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ದೇವನಹಳ್ಳಿ ಶಾಸಕ ನಿಸರ್ಗನಾರಾಯಣಸ್ವಾಮಿ, ನೆಲಮಂಗಲ ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ದೊಡ್ಡಬಳ್ಳಾಪುರ ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಇದ್ದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ