NEWSನಮ್ಮರಾಜ್ಯಸಿನಿಪಥ

ಅಭಿಮಾನಿಗಳ ದಾಸ ದರ್ಶನ್‌ ಫೇಸ್​ಬುಕ್ ಲೈವ್‌ನಲ್ಲಿ!

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಿನಿಸುದ್ದಿ
ಬೆಂಗಳೂರು: ದರ್ಶನ್​ ಬಹಳ ಸಮಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬರಲಿದ್ದಾರೆ. ಜನವರಿ 10ರಂದು ಬೆಳಗ್ಗೆ 11ಕ್ಕೆ ತಮ್ಮ ಫೇಸ್​ಬುಕ್​ ಖಾತೆಯಿಂದ ಲೈವ್‌ನಲ್ಲಿ ಕಾಣಿಸಿಕೊಳ್ಳುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆದರೆ ಅವರು​ ಲೈವ್​ ಬರಲಿರುವ ಕಾರಣ ಮಾತ್ರ ಏನು ಎಂದು ಬಹಿರಂಗಪಡಿಸಿಲ್ಲ.

ಆದರೆ, ದರ್ಶನ್​ ಅವರ ಲೈವ್​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜತೆಗೆ ಡಿಬಾಸ್​ ರಾಬರ್ಟ್​ ಸಿನಿಮಾ ಕುರಿತಾಗಿ ಏನಾದರೂ ಪ್ರಕಟಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ದರ್ಶನ್​ ಲೈವ್​ ಬರುವ ಸುದ್ದಿ ದರ್ಶನ್​ ಅವರ ಅಭಿಮಾನಿಗಳ ಪುಟಗಳಲ್ಲಿ ಈಗಾಗಲೇ ಹರಿದಾಡುತ್ತಿದೆ.

ಇನ್ನು ಕೊರೊನಾ ಲಾಕ್​ಡೌನ್​ ನಡುವೆಯೂ ಅಭಿಮಾನಿಗಳ ದಾಸ ದರ್ಶನ್​ ಪ್ರತಿ ಹಬ್ಬಕ್ಕೂ ಒಂದೊಂದು ಹೊಸ ಪೋಸ್ಟರ್ ಹಾಗೂ ರಾಬರ್ಟ್​ ಚಿತ್ರದ ಹಾಡನ್ನು ರಿಲೀಸ್ ಮಾಡಿದ್ದರು. ಜತೆಗೆ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ತಮ್ಮ ಬೈಕ್​ ಟ್ರಿಪ್​ ಅಪ್ಡೇಟ್ಸ್​​ ಮೂಲಕ ಫ್ಯಾನ್ಸ್​ಗೆ ರಸದೌತಣ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸ ಹಾಗೂ ಸಿನಿಮಾ ಕುರಿತಾದ ಅಪ್ಡೇಟ್​ ಕೊಡುವ ಡಿಬಾಸ್​ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ.

ಚಿತ್ರಮಂದಿರಗಳು ಆರಂಭವಾದಾಗಿವೇ ಆದರೆ, ಈವರೆಗೂ ಯಾವ ಸ್ಟಾರ್ ನಟರ ಸಿನಿಮಾಗಳೂ ರಿಲೀಸ್​ ಆಗಿಲ್ಲ. ಈಗ ಒಂದೊಂದೇ ಚಿತ್ರತಂಡಗಳು ರಿಲೀಸ್ ದಿನಾಂಕ ಪ್ರಕಟಿಸುತ್ತಿವೆ. ಆದರೆ ರಾಬರ್ಟ್​ ಸಿನಿಮಾದ ರಿಲೀಸ್​ ದಿನಾಂಕ ಇನ್ನೂ ನಿಗದಯಾಗಿಲ್ಲ. ಈ ಚಿತ್ರ ಏಪ್ರಿಲ್​ನಲ್ಲಿ ರಿಲೀಸ್​ ಆಗಬಹುದು ಎನ್ನಲಾಗುತ್ತಿದೆ. ಹೀಗಿರುವಾಗಲೇ ದರ್ಶನ್​ ತಮ್ಮ ಅಭಿಮಾನಿಗಳಿಗೆ ಈ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.

ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್ ಸಿನಿಮಾ ತಂಡ ಈಗಾಗಲೇ ಚಿತ್ರೀಕರಣ ಮುಗಿಸಿದೆ. ಹೀಗಾಗಿ ಉಮಾಪತಿ ನಿರ್ಮಾಣದ ಈ ಸಿನಿಮಾ ಇನ್ನೇನು ರಿಲೀಸ್​ ಹಂತದಲ್ಲಿದೆ. ಮುಖ್ಯಭೂಮಿಕೆಯಲ್ಲಿರುವ ದರ್ಶನ್ ಜೊತೆ ಆಶಾ ಭಟ್​, ಜಗಪತಿ ಬಾಬು ನಟಿಸಿದ್ದಾರೆ.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್