ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್, ವೇರ್‌ಹೌಸಿಂಗ್ ಸೊಸೈಟಿಯಲ್ಲಿ 39 ಕೋಟಿ ರೂ. ಹಗರಣ ನಡೆದಿದ್ದು, ಆರೋಗ್ಯ ಸಚಿವ ಸುಧಾಕರ್ ಅವರ ಅಣತಿಯಂತೆ ಆಪ್ತ ಕಂಪನಿಗಳಿಗೆ ಅಧಿಕಾರಿಗಾಳು ಗುತ್ತಿಗೆ ನೀಡಿದ್ದಾರೆ ಎಂದು ಪಕ್ಷದ ಬೆಂಗಳೂರು ನಗರದ ಅಧ್ಯಕ್ಷ ಮೋಹನ್ ದಾಸರಿ ಗಂಭೀರ ಆರೋಪ ಮಾಡಿದ್ದಾರೆ
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಸೌಲಭ್ಯ ನೀಡಲು ಖರೀದಿಸುವ ಜೈವಿಕ ರಸಾಯನ ಶಾಸ್ತ್ರ ಮತ್ತು ಹೆಮಟೋಲಜಿ ಉಪಕರಣಗಳ ಟೆಂಡರ್ ಅನ್ನು ಆಪ್ತ ಕಂಪನಿಗೆ ನೀಡುವ ಉದ್ದೇಶದಿಂದ ಸಚಿವರ ಅಣತಿಯಂತೆ ಇಲಾಖೆ ಅಧಿಕಾರಿಗಳು ಭಾರಿ ಅಕ್ರಮ ನಡೆಸಿದ್ದಾರೆ ಎಂದು ದೂರಿದರು.
ಅಕ್ರಮ ನಡೆದಿರುವ ಎರಡು ಟೆಂಡರ್ಸ್ ಬಗ್ಗೆ ಮಾತನಾಡಿದ ಅವರು, Bio-Chemistry And Hematology Instruments ಖರೀದಿಯಲ್ಲಿ ನಡೆದಿರುವ ಅವ್ಯವಹಾರಗಳು ಆರೋಗ್ಯ ಇಲಾಖೆಯ ಅನಾರೋಗ್ಯವನ್ನು ತೋರುತ್ತದೆ. ಆಪ್ತ ಕಂಪನಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು, ಸುಧಾಕರ್ ಪಡೆದಿರುವ ಕಿಕ್ ಬ್ಯಾಕ್ ಎಷ್ಟು? ಎಂದು ಕೇಳಿದ್ದಾರೆ. ಒಂದು ಅಲ್ಪಾವಧಿ ಟೆಂಡರ್ ಅನ್ನು ರದ್ದು ಮಾಡಿ ರೀ ಟೆಂಡರ್ ಮಾಡುವಾಗ, ಟೆಂಡರ್ ಸ್ಪೆಸಿಫಿಕೇಶನ್ ಬದಲಿಸಲು ಅವಕಾಶವಿಲ್ಲ. ಹೀಗಿರುವಾಗ ಏಕೆ ಬದಲಾವಣೆ ಮಾಡಿದ್ದಾರೆ? ಟೆಂಡರ್ ನಲ್ಲಿ ಕೇವಲ ಒಂದೇ ಬಿಡ್ ಬಂದರೂ ಅದನ್ನು ಆಯ್ಕೆ ಸಮಿತಿ ಹೇಗೆ ಪರಿಗಣಿಸಿದೆ ಎಂದು ಪ್ರಶ್ನಿಸಿದರು.
ಈ ಹಗರಣದ ಬಗ್ಗೆ ಇಲಾಖೆಯಿಂದಲೇ ಮಾಹಿತಿ ಸಂಗ್ರಹ ಮಾಡಿದ್ದು, ಬಿಡ್ ಪೂರ್ವ ಸಭೆಯಲ್ಲಿ ಹೆಚ್ಚಿನ ಕಂಪನಿಗಳು ಭಾಗವಹಿಸಿದ್ದಾಗ ಕೆಲ ವಿವರಣೆಯನ್ನು ಬದಲಾಯಿಸಲು ಕೇಳಲಾಯಿತು. ಆದರೆ ಆಯ್ಕೆ ಸಮಿತಿ ಒಪ್ಪಲಿಲ್ಲ. ಈ ಟೆಂಡರ್ ಗಾಗಿ 50% ಬಳಕೆದಾರರ ಪ್ರಮಾಣಪತ್ರಗಳ ಷರತ್ತನ್ನು ಅವರು ಸೇರಿಸಿದ್ದಾರೆ. ನಂತರ, ಬಹುತೇಕ ಕಂಪನಿಗಳು, ಬಳಕೆದಾರರ ಪ್ರಮಾಣ ಪತ್ರಗಳು ಮತ್ತು ಕೋಟ್ ಸಲ್ಲಿಸಲು ಸಾಧ್ಯವಾಗದಂತೆ ಮಾಡಲಾಗಿದೆ ಎಂದರು.
SYSMEX ಎಂಬ ಕಂಪನಿಯು ಈ ಎರಡು ರೀತಿಯ ಉಪಕರಣವನ್ನು ಬೇರೆ ರಾಜ್ಯಕ್ಕೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದೆ. ಆದರೆ ನಮ್ಮ ರಾಜ್ಯಕ್ಕೆ ಡಬಲ್ ರೇಟ್ ನಲ್ಲಿ ಮಾರಿದ್ದರೂ ಇಲಾಖೆ ಕಣ್ಣುಮುಚ್ಚಿ ಕುಳಿತು PURCASE ORDER ನೀಡಿದ್ದಾದರೂ ಏಕೆ ಎಂದು ಪ್ರಾಶ್ನಿಸಿದರು. ಈಗಾಗಲೇ ಉಪಕರಣ ಸರಬರಾಜು ಶುರುವಾಗಿದ್ದು, ಯಾವುದೇ ಚಿಂತೆಯಿಲ್ಲದೆ ಸುಧಾಕರ್ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ ಎಂದು ಕಿಡಿಕಾರಿದರು.
80% ಕಾರ್ಯಕ್ಷಮತೆಯ ಮಾನದಂಡಗಳು ಸರಿಯಾಗಿರದಿದ್ದರೂ, ಸಿಸ್ಮೆಕ್ಸ್ ಕಾರ್ಪೊರೇಷನ್ ಲಿಮಿಟೆಡ್ ಆಯ್ಕೆಮಾಡಿದ ಏಕೈಕ ಕಂಪನಿಯಾಗಿದೆ. ಈ ಮೊದಲು ಸಿಸ್ಮೆಕ್ಸ್ – Sysmax ನೇರವಾಗಿ ಎಲ್ಲೂ ಮಾರಾಟ ಮಾಡಿಲ್ಲ. ಆದರೆ ಅವರು ಹಿಂದಿನ ಡಿಸ್ಟ್ರಿಬ್ಯೂಟರ್ ಆರ್ಡರ್ ಗಳನ್ನು ತೋರಿಸಿ (Sysmax ನಿಂದ ನೇರ ಮಾರಾಟ ಮಾಡಲಾಗಿದೆ ಎಂದು ತೋರಿಸಿದ್ದಾರೆ) ಮತ್ತು 80% ಕಾರ್ಯಕ್ಷಮತೆಯ ಕಾಗದಗಳನ್ನು ತೋರಿಸಿದ್ದಾರೆ.
ಟೆಂಡರ್ ಸಮಿತಿಯು ಈ ಅಂಶವನ್ನೂ ಕಡೆಗಣಿಸಿ ಬಿಡ್ ಗೆ ಒಪ್ಪಿಗೆ ನೀಡಿರುವುದರ ಹಿಂದೆ ಸಚಿವರ ಕೈವಾಡವಿದೆ ಮತ್ತು ಜನರ ಪ್ರಾಣ ಮತ್ತು ಆರೋಗ್ಯಕ್ಕೆ ಮನ್ನಣೆ ನೀಡದೆ ಕಿಕ್ ಬ್ಯಾಕ್ ಪಡೆಯುವ ಉದ್ದೇಶದಿಂದ ಮಾತ್ರ ಇದನ್ನು ತರಾತುರಿಯಲ್ಲಿ ಮಾಡಿ ಮುಗಿಸಿದ್ದಾರೆ.
ಈ ಕೆಳಗಿನ ಪಟ್ಟಿಯಲ್ಲಿ ಆಯ್ಕೆಯಾದ ಸಂಸ್ಥೆಯು ನಮ್ಮ ಕರ್ನಾಟಕ ರಾಜ್ಯಕ್ಕೆ ಕೋಟ್ ಮಾಡಲಾದ ದರ ಮತ್ತು ಅದೇ ಮಾದರಿಯ ಉಪಕರಣಗಳನ್ನು ಇತರ ರಾಜ್ಯಗಳಿಗೆ ಕೋಟ್ ಮಾಡಲಾದ ದರ ಮತ್ತು 5ನೇ ಕಾಲಂ ನಲ್ಲಿ ಇತರ ರಾಜ್ಯದ ದರವನ್ನು ಹೋಲಿಸಲಾಗಿ ನಮ್ಮ ರಾಜ್ಯಕ್ಕೆ ಆಗುವ ನಷ್ಟ ಮತ್ತು ದರ ವೆತ್ಯಾಸವನ್ನು ತೋರಿಸಲಾಗಿದೆ.
3 parts ಹೆಮಟಾಲಜಿ ಸೆಲ್ ಕೌಂಟರ್ –1195 ಸಂಖ್ಯೆ) ಆಯ್ಕೆಗೊಂಡ ಕಂಪನಿ : ಸ್ಮೆಕ್ಸ್ Sysmax
ಈ ಉಪಕರಣವನ್ನು ದೆಹಲಿ ಸರ್ಕಾರ 1,80,540 ಕ್ಕೆ ಖರೀದಿಸಿದೆ, ಹಿಮಾಚಲ ಪ್ರದೇಶ ಸರ್ಕಾರ 1,30,000 ಕ್ಕೆ ಖರೀದಿಸಿದೆ ಮತ್ತು ದೆಹಲಿಯ ಮುನಿಸಿಪಾಲಿಟಿ 1,44,000 ಕ್ಕೆ ಖರೀದಿಸಿದೆ.
ಹೀಗಿರುವಾಗ ನಮ್ಮ ಸರ್ಕಾರ ಉಪಕರಣ ಒಂದಕ್ಕೆ 2,96,180 ನೀಡಿ upply Order issue ಮಾಡಿದೆ. ಒಟ್ಟಾರೆ 1195 ಉಪಕರಣ ಖರೀದಿ ಮಾಡಬೇಕಾಗಿರುವುದರಿಂದ 19.85 ಕೋಟಿ ಹೆಚ್ಚುವರಿಯಾಗಿ ನೀಡಬೇಕಾಗಿದೆ.
5 Partsಹೆಮಟಾಲಜಿ ಸೆಲ್ ಕೌಂಟರ್ -165 ನಂಬರ್ ( ಯೂನಿಟ್ ಪ್ರಮಾಣ ಸಂಖ್ಯೆ) ಗೆ ಆಯ್ಕೆಯಾದ ಕಂಪನಿ Sysmax. ಇಲ್ಲೂ ಸಹ ಕೇರಳ ಸರ್ಕಾರಕ್ಕೆ ಇದೇ ಸಂಸ್ಥೆ 4.60 ಲಕ್ಷಕ್ಕೆ ಮರಾಟ ಮಾಡಿದ್ದು, ಕರ್ನಾಟಕ ಸರ್ಕಾರಕ್ಕೆ 8.35 ಲಕ್ಷಕ್ಕೆ ವ್ಯಾಪಾರ ಕುದುರಿಸಿದೆ. 165 ಉಪಕರಣಕ್ಕೆ 6.18 ಕೋಟಿಯಷ್ಟು ಹೆಚ್ಚುವರಿ ಭರಿಸಬೇಕಾಗಿದೆ.
ಮೇಲಿನ ಸಂಗತಿಗಳು ಮತ್ತು ವಿವರಗಳನ್ನು ಆಧರಿಸಿ – ಆಯ್ದ ಕಂಪನಿಗಳಿಗೆ ಸುಮಾರು 25 ಕೋಟಿ ಗೂ ಹೆಚ್ಚು ಮೊತ್ತವನ್ನು ಸರಕಾರವು ಹೆಚ್ಚಾಗಿ ಪಾವತಿಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಈ ರೀತಿಯ ಪ್ರಕರಣವು ಈ ಸೊಸೈಟಿಯಲ್ಲಿ ಹೆಚ್ಚಾಗಿ ನಡೆಯುತ್ತಿದೆ, ಕೊವಿಡ್ ಸಂದರ್ಭದಲ್ಲಿ ಎಲ್ಲಾ ಖರೀದಿಗಳನ್ನು ತರಾತುರಿಯಲ್ಲಿ ಮಾಡಬೇಕು ಎಂಬ ನೆಪ ಹೇಳಿ, ಸಚಿವರು ಮತ್ತು ಅಧಿಕಾರಿಗಳು ಪ್ರತಿ ಖರೀದಿಯಲ್ಲಿ ಕೋಟಿ ಕೋಟಿ ಬಾಚಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆ ಹೊರಬರಬೇಕಾದರೆ ಸಮಗ್ರವಾಗಿ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ಉಪಸ್ಥಿತರಿದ್ದರು.