ಇಸ್ಲಾಮಾಬಾದ್: ಪಾಕಿಸ್ತಾನದ ಹಿರಿಯ ಪರಮಾಣು ವಿಜ್ಞಾನಿ ಡಾ.ಅಬ್ದು ಲ್ ಖಾದೀರ್ ಖಾನ್ (85) ಇಸ್ಲಾಮಾಬಾದ್‌ನಲ್ಲಿ ಭಾನುವಾರ ನಿಧನರಾದರು.
ಎ.ಕೆ ಖಾನ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆ ಲೆಯಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ, ಭಾನುವಾರ ಮುಂಜಾನೆ ಕೊನೆಯುಸಿರೆಳೆದರು ಎಂದು ‘ರೇಡಿಯೋ ಪಾಕಿಸ್ತಾನ’ದ ಮಾಹಿತಿ ಉಲ್ಲೇ ಖಿಸಿ ಸುದ್ದಿ ಮಾಧ್ಯಮ ‘ದಿ ಡಾನ್’ ವರದಿಮಾಡಿದೆ.
1936ರಲ್ಲಿ ಭಾರತದಭೋಪಾಲ್ನಲ್ಲಿ ಜನಿಸಿದ ಎ.ಕೆ ಖಾನ್, ವಿಭಜನೆಯ ನಂತರ 1947ರಲ್ಲಿ ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಬಂದಿದ್ದರು.
ಎ.ಕೆ ಖಾನ್ ಕೋವಿಡ್-19 ಹಿನ್ನೆ ಲೆಯಲ್ಲಿ ಆಗಸ್ಟ್ 26 ರಂದು ‘ಖಾನ್ ರಿಸರ್ಚ್ ಲ್ಯಾಬೋರೇಟರೀಸ್ ಆಸ್ಪತ್ರೆಗೆ ದಾಖಲಾಗಿದ್ದ ರು. ನಂತರ, ಅವರನ್ನು ರಾವಲ್ಪಿಂ ಡಿಯ ಮಿಲಿಟರಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ ಪ್ರಧಾನಿಯಾಗಲಿ ಅವರ ಸಂಪುಟ ಸಹೋದ್ಯೋ ಗಿಗಳಾಗಲಿ ತಮ್ಮ ಆರೋಗ್ಯ ವಿಚಾರಿಸಲಿಲ್ಲ ಎಂದು ಖಾನ್ ಕಳೆದ ತಿಂಗಳು ಆರೋಪಿಸಿದ್ದರು.
ಪಾಕಿಸ್ತಾನದ ಅಣ್ವ ಸ್ತ್ರ ಪ್ರ ಸರಣದಲ್ಲಿನ ತಮ್ಮ ಪಾತ್ರ ದ ಕುರಿತು ಖಾನ್ 2004ರಲ್ಲಿ ಬಹಿರಂಗವಾಗಿಯೇ ಘೋಷಿಸಿಕೊಂಡಿದ್ದರು. ಖಾನ್ ಅವರನ್ನು ಪಾಕಿಸ್ತಾನದ ಅಣ್ವಸ್ತ್ರ ಯೋಜನೆ ಪಿತಾಮಹ ಎಂದು ಕರೆಯಲಾಗುತ್ತದೆ.