ನ್ಯೂಡೆಲ್ಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆ ಇದ್ದರೂ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಳ ಮಾಡುತ್ತಿದೆ. ಇದನ್ನು ಖಂಡಿಸಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.
ನಿರುದ್ಯೋಗ, ಹಣದುಬ್ಬರ, ಹವಾಮಾನ ವೈಪರೀತ್ಯ ಮತ್ತಿತರ ಸಮಸ್ಯೆಗಳಿಂದ ಜನ ಸಾಮಾನ್ಯ ಕಂಗಲಾಗಿದ್ದರೂ ಪೆಟ್ರೋಲ್, ಡೀಸೆಲೆ ಮತ್ತು ಅಡುಗೆ ಅನಿಲದ ಬೆಲೆಗಳ ಏರಿಕೆ ಮಾಡುತ್ತಲೇ ಇದೆ. ಇದು ಜನರನ್ನು ಕಿತ್ತು ತಿನ್ನುವ ಸಂಸ್ಕೃತಿ ಯಾಗಿದೆ.
ಹೀಗಾಗಿ ಒಟ್ಟಾರೆ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಬಗ್ಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಕ್ಟೋಬರ್ 26ರಂದು ನಡೆಯುವ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ರೂಪು ರೇಷೆಗಳನ್ನು ನಿರ್ಧರಿಸಲಾಗುತ್ತದೆ.
ಪ್ರತಿಭಟನೆ ತೀವ್ರಗೊಳಿಸಲು ತೀರ್ಮಾನ: ದೇಶಾದ್ಯಂತ ಹಲವು ಸಮಸ್ಯೆಗಳಿದ್ದು ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಕಷ್ಟದಲ್ಲಿ ಇರುವ ಜನರ ನೆರವಿಗೆ ಬರುವ ಬದಲು ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಳ ಮಾಡಿ ಇನ್ನಷ್ಟು ಹೊರೆ ಏರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚೆಚ್ಚು ತೆರಿಗೆ ಹಾಕಿ ಜನರಿಂದ ಹಣವನ್ನು ಲೂಟಿ ಮಾಡುತ್ತಿದೆ.
ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಈಗ ಪ್ರತಿಭಟನೆಯನ್ನು ತೀವ್ರಗೊಳಿಸಿ ನವೆಂಬರ್ 14ರಿಂದ ದೇಶಾದ್ಯಂತ ಬೆಲೆ ಏರಿಕೆ ಬಗ್ಗೆ ಜನ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.
ಮುಂದಿನ ವರ್ಷದ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರ ಖಂಡ ಮತ್ತು ಗೋವಾ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಪೈಕಿ 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಈ ವಿಧಾನಸಭಾ ಚುನಾವಣೆಗಳು ಭಾರೀ ಮುಖ್ಯವಾದವು.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 26ರ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮುಂಬರುವ ಚುನಾವಣೆಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಕರ್ನಾಟಕದ ವಿವಿಧೆಡೆ ಪೆಟ್ರೋಲ್ ದರ: ಬಾಗಲಕೋಟೆ – 111.64 ರೂ.ಬೆಂಗಳೂರು – 110.98 ರೂ.ಬೆಂಗಳೂರು ಗ್ರಾಮಾಂತರ -110.61 ರೂ.ಬೆಳಗಾವಿ – 110.85 ರೂ.ಬಳ್ಳಾರಿ – 112.27 ರೂ.ಬೀದರ್ – 111.51 ರೂ.ಬಿಜಾಪುರ – 110.98 ರೂ.ಚಾಮರಾಜನಗರ – 111.06 ರೂ.ಚಿಕ್ಕಬಳ್ಳಾಪುರ – 111.27 ರೂ. ಚಿಕ್ಕಮಗಳೂರು – 111.40 ರೂ.ಚಿತ್ರದುರ್ಗ – 112.39 ರೂ.ದಕ್ಷಿಣ ಕನ್ನಡ – 110.60 ರೂ.ದಾವಣಗೆರೆ – 112.50 ರೂ.ಧಾರವಾಡ – 110.72 ರೂ.
ಗದಗ – 111.74 ರೂ.ಗುಲಬುರ್ಗ – 111.45 ರೂ. ಹಾಸನ – 110.89 ರೂ. ಹಾವೇರಿ – 111.44 ರೂ.ಕೊಡಗು – 112.50 ರೂ.ಕೋಲಾರ – 110.39 ರೂ.ಕೊಪ್ಪಳ- 111.10 ರೂ.ಮಂಡ್ಯ – 110.95 ರೂ.ಮೈಸೂರು – 110.75 ರೂ. ರಾಯಚೂರು – 110.94 ರೂ. ರಾಮನಗರ – 111.19 ರೂ.ಶಿವಮೊಗ್ಗ – 112.45 ರೂ.ತುಮಕೂರು – 111.44 ರೂ.ಉಡುಪಿ – 110.52 ರೂ.ಉತ್ತರಕನ್ನಡ – 113.21 ರೂ .ಯಾದಗಿರಿ – 111.54 ರೂ.
ಕರ್ನಾಟಕದ ವಿವಿಧೆಡೆ ಡೀಸೆಲ್ ಬೆಲೆ: ಬಾಗಲಕೋಟೆ – 102.49ರೂ. ಬೆಂಗಳೂರು – 101.86ಬೆಂಗಳೂರು ಗ್ರಾಮಾಂತರ – 101.53ಬೆಳಗಾವಿ – 101.77ಬಳ್ಳಾರಿ – 103.07ಬೀದರ್ -102.37ಬಿಜಾಪುರ – 101.89ಚಾಮರಾಜನಗರ – 101.94ಚಿಕ್ಕಬಳ್ಳಾಪುರ – 102.13.ಚಿಕ್ಕಮಗಳೂರು – 102.16ಚಿತ್ರದುರ್ಗ – 103.03ದಕ್ಷಿಣ ಕನ್ನಡ – 101.48ದಾವಣಗೆರೆ -103.13 ರೂ.
ಧಾರವಾಡ – 101.65ಗದಗ – 102.58ಗುಲಬರ್ಗ – 102.32ಹಾಸನ – 101.67ಹಾವೇರಿ – 102.31ಕೊಡಗು – 103.14ಕೋಲಾರ – 101.97ಕೊಪ್ಪಳ- 102.70ಮಂಡ್ಯ – 101.84 ಮೈಸೂರು –101.63ರಾಯಚೂರು – 101.87ರಾಮನಗರ – 102.06ಶಿವಮೊಗ್ಗ – 103.13ತುಮಕೂರು –102.16ಉಡುಪಿ – 101.41ಉತ್ತರಕನ್ನಡ – 103.81ಯಾದಗಿರಿ – 102.40 ರೂ.
ಇದಲ್ಲದೆ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 104.24 ರೂ ಇದ್ದರೆ ಡೀಸೆಲ್ ಬೆಲೆ 100.75 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 107.54 ರೂ ಮತ್ತು ಡೀಸೆಲ್ 95.77 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಪೆಟ್ರೋಲ್ 113.18 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 104.12 ರೂ.ಗೆ ಮಾರಾಟ ಮಾಡಲಾಗುತ್ತಿದೆ.