ಸಿಎಂ ಜನನ ಅಕಾಲಿಕ ಎಂದು ಹೀಯಾಳಿಸಿದ ಎ.ರಾಜ: ಗದ್ಗದಿತರಾದ ಪಳನಿಸ್ವಾಮಿ
ವಿಜಯಪಥ ಸಮಗ್ರ ಸುದ್ದಿ
ಚೆನ್ನೈ: ತಮ್ಮ ಜನನದ ಬಗ್ಗೆ ಡಿಎಂಕೆ ಮುಖಂಡ ಎ.ರಾಜ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ನೆನೆದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಗದ್ಗದಿತರಾಗಿದ್ದಾರೆ.
ತಾಯಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ ಯಾರೇ ಮಹಿಳೆಯರನ್ನು ಅವಹೇಳನ ಮಾಡಿದ್ದರು ದೇವರು ಅವರನ್ನು ಶಿಕ್ಷಿಸುತ್ತಾನೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಸ್ಪರ್ಧಿಸುತ್ತಿರುವ ಚಪಕ್ ತಿರುವಳ್ಳಿಕೇಣಿಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭ ರಾಜ ತಮ್ಮ ನಾಯಕ ಸ್ಟಾಲಿನ್ ಅವರನ್ನು ಹೊಗಳುವ ಭರದಲ್ಲಿ ಸ್ಟಾಲಿನ್ ಅವರು ಉತ್ತಮ ಸಂಬಂಧದಿಂದ ನಾರ್ಮಲ್ ಡೆಲಿವರಿ ಮೂಲಕ ಜನಿಸಿದ್ದಾರೆ. ಪಳನಿಸ್ವಾಮಿ ಜನಿಸಿದ್ದು ಅಕ್ರಮ ಸಂಬಂಧದಿಂದ ಮತ್ತು ಅದು ಅಕಾಲಿಕ ಜನನ ಎಂದು ಅವಹೇಳನ ಮಾಡಿ ಹೀಯಾಳಿಸಿದ್ದರು.
ಈ ಕುರಿತಂತೆ ಉತ್ತರ ಚೆನ್ನೈನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಪಳನಿಸ್ವಾಮಿ, ರಾಜು ಹೇಳಿಕೆ ನೆನೆದು ಗದ್ಗದಿತರಾದರು. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಬಗ್ಗೆಯೇ ಆಕ್ಷೇಪ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದರೆ ಅವರು ಅಧಿಕಾರಕ್ಕೆ ಬಂದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಯೋಚಿಸಿ. ನಮ್ಮ ಮಹಿಳೆಯರು, ತಾಯಂದಿರು ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದು ಮುಂದಿನ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಇದೇ ವೇಳೆ ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡುವ ಎ.ರಾಜ ಅಂಥವರಿಗೆ ಚುನಾವಣೆಯಲ್ಲಿ ಸರಿಯಾದ ಶಿಕ್ಷೆ ವಿಧಿಸಬೇಕೆಂದು ಸ್ವಾಮಿ ಮತದಾರರಿಗೆ ಮನವಿ ಮಾಡಿದರು.
ಈ ಮಧ್ಯೆ ರಾಜ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಎಐಎಡಿಎಂಕೆ ಮತ್ತು ಪಿಎಂಕೆ ಸೇರಿದಂತೆ ಮಿತ್ರ ಪಕ್ಷಗಳ ಕಾರ್ಯಕರ್ತರು ಭಾನುವಾರ ತಮಿಳುನಾಡಿನ ಹಲವೆಡೆ ಪ್ರತಿಭಟನೆ ನಡೆಸಿದರು.