NEWSದೇಶ-ವಿದೇಶವಿಜ್ಞಾನ

ಅಂತಾರಾಷ್ಟ್ರೀಯ ವಿಮಾನ ಸೇವೆ ಜೂನ್‌ 30ರವರೆಗೂ ಸ್ಥಗಿತ: ಡಿಜಿಸಿಎ ಆದೇಶ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ:
ವಿಶ್ವಮಾರಿ ಕೊರೊನಾ ಸೋಂಕು ನಾಗಾಲೋಟದಲ್ಲಿ ಹರಡುತ್ತಿರುವುದರಿಂದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದೆ. ಇದೀಗ ಅದನ್ನು ಇನಷ್ಟು ದಿನ ಮುಂದುವರಿಸುವ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಮುಂದಾಗಿದ್ದು, ಅದನ್ನು ಜೂನ್ 30ರವರೆಗೆ ವಿಸ್ತರಿ ಆದೇಶ ಹೊರಡಿಸಿದೆ.

ಈ ಮೂಲಕ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಮತ್ತೆಜೂನ್ 30ರ ವರೆಗೆ ವಿಸ್ತರಿಸಿರುವ ಬಗ್ಗೆ ಡಿಜಿಸಿಎ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಇದರ ನಡುವೆಯೂ ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ವಿಮಾನದಲ್ಲಿ ಪ್ರಯಾಣಿಸಬಹುದಾದ ಅವಕಾಶವನ್ನು ಮತ್ತು ಈ ನಿರ್ಬಂಧ ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಳೆದ 2020ರ ಮಾರ್ಚ್ 25ರಂದು ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದರು. ಆ ನಂತರ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.

ಮೇ 2020 ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈನಿಂದ ಆಯ್ದ ದೇಶಗಳೊಂದಿಗೆ ದ್ವಿಪಕ್ಷೀಯ ‘ಏರ್ ಬಬಲ್’ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿಸಲಾಗಿದೆ.

ಭಾರತವು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ಕೀನ್ಯಾ, ಭೂತಾನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದ ರೂಪಿಸಿದೆ. ಎರಡು ದೇಶಗಳ ನಡುವಿನ ಏರ್ ಬಬಲ್ ಒಪ್ಪಂದದಡಿಯಲ್ಲಿ, ವಿಶೇಷ ಅಂತಾರಾಷ್ಟ್ರೀಯ ವಿಮಾನಗಳನ್ನು ತಮ್ಮ ವಿಮಾನಯಾನ ಸಂಸ್ಥೆಗಳು ಪ್ರಾಂತ್ಯಗಳ ನಡುವೆ ನಿರ್ವಹಿಸಬಹುದಾಗಿದೆ.

Vijayapatha - ವಿಜಯಪಥ

Leave a Reply

error: Content is protected !!
LATEST
KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪ್ರಣಾಪಾಯದಿಂದ ಪತ್ನಿ ಪಾರು 600ರಿಂದ 800 ಮಂದಿ ಅಧಿಕಾರಿಗಳಿಗಾಗಿ 1.07 ಲಕ್ಷ ನೌಕರರಿಗೆ ಅನ್ಯಾಯ ಮಾಡಲು ಹೊರಟಿರುವುದು ನ್ಯಾಯವೇ? KSRTC ನಾಲ್ಕೂ ನಿಗಮಗಳ ಸಾರಿಗೆ ನೌಕರರಿಗೆ ಸಮಾನ ವೇತನ ಲಾಭವೋ-ನಷ್ಟವೋ..!?? ಹರಿಯಾಣದಲ್ಲಿ ಸಮಾವೇಶ: ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಅನ್ನದಾತರ ಪಟ್ಟು ಪ್ರಜಾಪ್ರಭುತ್ವದ ಉಳಿವಿಗಾಗಿ ಮಾನವ ಸರಪಳಿ : ಉಸ್ತುವಾರಿ ಸಚಿವ ಮುನಿಯಪ್ಪ BMTC ಅಧಿಕಾರಿಗಳ ವಾಹನಗಳಿಗೂ ಖಾಸಗಿ ಚಾಲಕರ ನೇಮಕಕ್ಕೆ ಟೆಂಡರ್‌ ಕರೆದ ಸಂಸ್ಥೆ KSRTC ಮಡಿಕೇರಿ: ವೇತನ ಬಿಡುಗಡೆ ಆಗ್ರಹಿಸಿ ಪ್ರತಿಭಟನೆಗೆ ಇಳಿದ ಗುತ್ತಿಗೆ ಚಾಲಕರು KSRTC ನೌಕರರ ನಂಬಿಸಲು ಹೋದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದಲೇ ಅವರ ಊಸರವಳ್ಳಿ ಬಣ್ಣ ಬಯಲು..! KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ