ವಿಜಯಪಥ ಸಮಗ್ರ ಸುದ್ದಿ
ಕೋಲ್ಕತಾ: ದೇಶದ ಜನರನ್ನು ಬಾಧಿಸುತ್ತಿರುವ ಕೊರೊನಾ 2ನೇ ಅಲೆ ಭೀತಿ ನಡುವೆಯೂ ಪಶ್ಚಿಮ ಬಂಗಾಳದಲ್ಲಿ 6ನೇ ಹಂತದ ಮತದಾನ ಪ್ರಕ್ರಿಯೆ ಇಂದು ( ಗುರುವಾರ) ಆರಂಭವಾಗಿದ್ದು, ಈ ವರೆಗೂ ಶೇ.18.59ರಷ್ಟು ಮತದಾನವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಇನ್ನೂ ಎರಡು ಹಂತದ ಮತದಾನ ಬಾಕಿ ಇದ್ದು, ಏಪ್ರಿಲ್ 26 ರಂದು ಮತ್ತು 29ರಂದು ಏಳು ಮತ್ತು ಎಂಟನೇ ಹಂತದ ಮತದಾನ ನಡೆಯಲಿದೆ. ಈ ನಡುವೆ ಇಂದು ರಾಜ್ಯದ ಪುರ್ಬಾ ಬರ್ಧಮಾನ್, ನಡಿಯಾ, ಉತ್ತರ 24 ಪರಗಣ ಜಿಲ್ಲೆಗಳಲ್ಲಿ 43 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಈ ನಡುವೆಯೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದ ಜನರು ಹೊಸ ತನವನ್ನು ಬಯಸಿದ್ದು ಆ ಹಾದಿಯಲ್ಲೇ ಮತ ಚಲಾಯಿಸುತ್ತಿದ್ದಾರೆ. ಇಂದು ಆರನೇ ಹಂತದಲ್ಲಿ, ಪ್ರತಿಯೊಬ್ಬರೂ ಮತ ಹಕ್ಕು ಚಲಾಯಿಸಲು ಮರೆಯಬೇಡಿ ಎಂದು ಹೇಳಿದ್ದಾರೆ.
ಈ ನಡುವೆ ನಿರ್ಭೀತಿಯಿಂದ ಮತಹಕ್ಕು ಚಲಾಯಿಸಿ ಎಂದು ಗೃಹಸ ಸಚಿವ ಅಮಿತ್ ಷಾ ಬಂಗಾಳಿ ಭಾಷೆಯಲ್ಲಿಯೇ ಟ್ವೀಟ್ ಮಾಡಿಕೊಂಡಿದ್ದಾರೆ.