ವಿಜಯಪಥ ಸಮಗ್ರ ಸುದ್ದಿ
ಜೌನ್‌ಪುರ : ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಅಂತ್ಯಕ್ರಿಯೆಗೆ ಗ್ರಾಮದಲ್ಲಿ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ವೃದ್ಧರೊಬ್ಬರು ಸೈಕಲ್‌ನಲ್ಲಿ ಆ ಮೃತದೇಹವನ್ನು ಸಾಗಿಸಿದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಆಕೆ ಕೊರೊನಾ ಸೋಂಕಿನಿಂದ ಮೃತಪಟ್ಟ ಬಗ್ಗೆ ತಿಳಿದು ಬಂದಿಲ್ಲ. ಆದರೆ ಸೈಕಲ್‌ನಲ್ಲಿ ಮೃತದೇಹ ಸಾಗಿಸುತ್ತಿರುವುದನ್ನು ನೋಡಿದರೆ ಆಕೆ ಕೊರೊನಾ ಸೋಂಕಿಗೆ ಬಲಿಯಾದಂತೆ ಕಾಣಿಸುತ್ತಿಲ್ಲ.
ಆದರೂ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಏಕೆ ಅವಕಾಶ ಮಾಡಿಕೊಡಲು ಗ್ರಾಮಸ್ಥರು ಒಪ್ಪಲಿಲ್ಲ ಎಂಬ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ. ಈ ನಡುವೆ ಕೃತಜ್ಞತೆಯಿಂದ ಪೊಲೀಸರು ಮಧ್ಯಪ್ರವೇಶಿಸಿ ಗ್ರಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದಕ್ಕೂ ಮೊದಲು ವೃದ್ಧ ಮೃತದೇಹ ಸಾಗಿಸುವಾಗ ಯಾರು ನೆರವಿಗೆ ಬಂದಿಲ್ಲ. ಹೀಗಾಗಿ ದಾರಿಯಲ್ಲಿ ಶವವಿದ್ದ ಸೈಕಲ್ ತಳ್ಳಲು ಆಗದೆ ದಾರಿಯಲ್ಲೇ ಮೃತದೇಹದ ಸಹಿತ ಸೈಕಲ್ ಬಿಟ್ಟು ರಸ್ತೆ ಬದಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ.
ದೇಶ ಮತ್ತು ರಾಜ್ಯದಲ್ಲಿ ಸರ್ಕಾರಗಳು ಇವೆಯೋ ಇಲ್ಲವೋ ಎಂಬ ಅನುಮಾನ ಈ ಎಲ್ಲ ದೃಶ್ಯಗಳನ್ನು ನೋಡುತ್ತಿದ್ದರೆ ಕಾಡದೆ ಇರದು. ಇಂಥ ಹೀನ ಸಂಸ್ಕೃತಿಗೆ ದಾರಿ ಮಾಡಿಕೊಡುತ್ತಿರುವ ಸರ್ಕಾರಗಳ ಹಿಂದಿನ ನಡೆ ಏನು ಎಂಬುವುದೇ ಅಗೋಚರವಾಗಿದೆ.
ಬದುಕಿದ್ದಾಗವಿರಲಿ ಸತ್ತಾಗಲು ಪ್ರಾಣಿಗಿಂತ ಕಡೆಯಾಗಿ ಮೃತದೇಹವನ್ನು ನೋಡುತ್ತಿರುವ ವಕ್ರದೃಷ್ಟಿಗೆ ಕೊನೆಯೆಂದು ಎಂಬುವುದು ಜನರ ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರೆ ಉತ್ತರ ಕೊಡಬೇಕಿದೆ.
ರೋಗಿ ಆಯೋಗ್ಯನಾಥನ ರಾಮರಾಜ್ಯದ ಕೆಲ ಚಿತ್ರಗಳು.😢 pic.twitter.com/5C8VO7bNcc
— Chetan Krishna👑 🇮🇳 (@ckchetanck) April 28, 2021