ಕೋಲ್ಕತ್ತಾ: ಬಾಗ್ದಾ ಬಿಜೆಪಿ ಶಾಸಕ ಬಿಸ್ವಜಿತ್ ದಾಸ್ ಅವರು ಮಂಗಳವಾರ ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದಾರೆ.
ಕಳೆದ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಕೇಸರಿ ಪಕ್ಷ ತೊರೆಯುತ್ತಿರುವ ಮೂರನೇ ಶಾಸಕರುಇವರಾಗಿದ್ದಾರೆ.
ಈ ಮೂಲಕ ದೇಶದಲ್ಲಿ ಬಿಜೆಪಿಯ ಬಲ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕುಗ್ಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಈ ದಾರಿಯಲ್ಲಿ ಪಕ್ಷ ಸಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಟಿಎಂಸಿಯಿಂದ ಎರಡು ಬಾರಿ ಶಾಸಕರಾಗಿದ್ದ ದಾಸ್ 2019ರಲ್ಲಿ ಬಿಜೆಪಿ ಸೇರಿದ್ದರು. ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಬಾಗ್ದಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ.
ಬಿಜೆಪಿ ಚಿಹ್ನೆಯಡಿ ಗೆದಿದ್ದರೂ ಅವರಿಗೆ ಪಕ್ಷದಲ್ಲಿ ಮುಂದುವರಿಯಲು ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ಟಿಸಿಎಂಸೇರುತ್ತಿರುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದೆ ನಾನು ಬಿಜೆಪಿ ಸೇರಿ ತಪ್ಪು ಮಾಡಿದೆ ಎನಿಸುತ್ತಿದೆ. ಹೀಗಾಗಿ ನಾನು ಆ ತಪ್ಪುಗಳನ್ನು ತಿದ್ದುಕೊಂಡಿದ್ದು, ನಾನು ಈಗ ನನ್ನ ಮನೆಗೆ ಮರಳಿದ್ದೇನೆ ಮತ್ತು ನಾನು ನನ್ನ ರಾಜ್ಯ ಮತ್ತು ಕ್ಷೇತ್ರದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ದಾಸ್ ಹೇಳಿದ್ದಾರೆ.
ಹೀಗಾಗಿ ಇಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಸಮ್ಮುಖದಲ್ಲಿ ಟಿಎಂಸಿ ಸೇರಿದ್ದಾರೆ. ಆ ನಂತರ ಮಾತನಾಡಿದ ದಾಸ್, “ನಾನು ಬಿಜೆಪಿಯಲ್ಲಿ ಎಂದಿಗೂ ಹಾಯಾಗಿರಲಿಲ್ಲ. ನಾನು ಬಹಳ ಹಿಂದೆಯೇ ಟಿಎಂಸಿಗೆ ಮರಳಲು ಬಯಸಿದ್ದೆ. ಬಿಜೆಪಿ ಬಂಗಾಳಕ್ಕೆ ಏನೂ ಮಾಡಿಲ್ಲ ಎಂದು ಆರೋಪಿಸಿದರು.
ಕಳೆದ ಸೋಮವಾರ ಮತ್ತೊಬ್ಬ ಬಿಜೆಪಿ ಶಾಸಕ ತನ್ಮಯ್ ಘೋಷ್ ಅವರು ಟಿಎಂಸಿಗೆ ಮರಳಿದ್ದರು. ಈ ಹಿಂದೆ, ಜೂನ್ ನಲ್ಲಿ, ಬಿಜೆಪಿ ಶಾಸಕ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವನ್ನು ತೊರೆದು ನಾಲ್ಕು ವರ್ಷಗಳ ನಂತರ ಮತ್ತೆ ಟಿಎಂಸಿಗೆ ಸೇರಿಕೊಂಡಿದ್ದರು.
ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ 292 ಸ್ಥಾನಗಳಲ್ಲಿ ಬಿಜೆಪಿ 77 ಸ್ಥಾನಗಳನ್ನು ಗೆದ್ದಿದೆ. ತೃಣಮೂಲ ಕಾಂಗ್ರೆಸ್ 213 ಸ್ಥಾನಗಳನ್ನು ಗೆದ್ದರೆ, ಐಎಸ್‌ಎಫ್ ಮತ್ತು ಜಿಜೆಎಂ ತಲಾ ಒಂದು ಸ್ಥಾನವನ್ನು ಪಡೆದುಕೊಂಡಿವೆ.
Bengal witnessed a wave of growth & development under the leadership of @MamataOfficial.
Inspired by this phenomenal work, today @BJP4Bengal MLA from Bagda Shri Biswajit Das joined us in the presence of Shri @itspcofficial, Smt. @kakoligdastidar and Smt. Alo Rani Sarkar. (1/2) pic.twitter.com/pKbAVnSbV5
— All India Trinamool Congress (@AITCofficial) August 31, 2021