NEWSದೇಶ-ವಿದೇಶರಾಜಕೀಯವಿದೇಶ

ಐಎಂಎಫ್‌ ಫಂಡ್‌ಗೆ ಬ್ರೇಕ್‌: ಹಣದ ಹರಿವು ಇಲ್ಲದೆ ತಾಲಿಬಾನಿಗಳು ಕಂಗಾಲು

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ (IMF) ನಿರ್ಧಾರ ಮಾಡಿದೆ. ಇದರಿಂದ ಹಣದ ಹರಿವು ಇಲ್ಲದೆ ತಾಲಿಬಾನಿಗಳು ಇದೀಗ ಕಂಗಾಲಾಗಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಆಫ್ಘನ್‌ಗೆ ಹಣ ನೀಡಲು ಈ ಹಿಂದೆ ಐಎಂಎಫ್ ಅನುಮೋದನೆ ಕೊಟ್ಟಿತ್ತು. ಅರಂತೆ 650 ಮಿಲಿಯನ್ ಡಾಲರ್ ನೀಡಲು ಅನುಮೋದನೆ ಸೂಚಿಸಿ, ಆಗಸ್ಟ್ 23ರಂದು 340 ಮಿಲಿಯನ್ ಡಾಲರ್ ನೀಡಬೇಕಾಗಿತ್ತು. ಆದರೆ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಈಗ ಐಎಂಫ್ ನಿರ್ಧರಿಸಿದೆ ಎಂದು ಐಎಂಎಫ್ ವಕ್ತಾರ ಅಧಿಕೃತ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಆಫ್ಘನ್‌ನಲ್ಲಿರುವ ತಾಲಿಬಾನಿಗಳಿಗೆ ಹಣ ಸಿಗದೆ ಕಂಗಾಲಾಗಿದೆ. ಇನ್ನೊಂದೆಡೆ ದಿ ಅಪ್ಘಾನಿಸ್ತಾನ ಬ್ಯಾಂಕ್‌ನ ಹಣವನ್ನು ಅಮೆರಿಕ ಜಪ್ತಿ ಮಾಡಿದೆ. ಹೀಗಾಗಿ ಹಣ ಸಿಗದೆ ತಾಲಿಬಾನ್ ಉಗ್ರರು ಪರಿತಪ್ಪಿಸುತ್ತಿದ್ದಾರೆ.

ಅಮೆರಿಕ, ಇಂಗ್ಲೆಂಡ್, ಜರ್ಮನಿ, ಭಾರತ ಸೇರಿದಂತೆ ಪ್ರಮುಖ ದೇಶಗಳಿಂದ ತಾಲಿಬಾನಿಗಳಿಗೆ ಹಣ ಸಿಗುತ್ತಿಲ್ಲ. ಪಾಕ್ ಈಗಾಗಲೇ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಹೀಗಾಗಿ ಸದ್ಯ ಹಣ ಸಿಗದೆ ತಾಲಿಬಾನಿಗಳು ಕಂಗಾಲಾಗಿದ್ದಾರೆ. ಚೀನಾದಿಂದ ಹಣ ಬರುವ ನಿರೀಕ್ಷೆಯಲ್ಲಿ ತಾಲಿಬಾನ್ ಉಗ್ರರು ಇದ್ದಾರೆ. ಅಪ್ಘಾನಿಸ್ತಾನ ಅಭಿವೃದ್ಧಿಗೆ ಚೀನಾ ಕೊಡುಗೆ ನೀಡಬಹುದು ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಹೀನ್ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಯಾವ ರೀತಿ ಅಧಿಕಾರ ನಡೆಸಬೇಕು ಎಂಬುದರ ಬಗ್ಗೆ ತಾಲಿಬಾನ್ ತಂಡ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಾಲಿಬಾನ್‌ನ ಹಿರಿಯ ಸದಸ್ಯ ವಹೀದುಲ್ಲಾ ಹಾಶಿಮಿ ಹೇಳಿರುವುದಾಗಿ ಗುರುವಾರ ರಾಯಿಟರ್ಸ್‌ ವರದಿ ಮಾಡಿತ್ತು.

ಈ ಗುಂಪು ತನ್ನ ಹಿಂದಿನ ಆಡಳಿತದಂತೆಯೇ ಆಡಳಿತವನ್ನು ಯೋಜಿಸುತ್ತಿರುವುದರಿಂದ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯು ಇರುವುದಿಲ್ಲ. ಯಾಕೆಂದರೆ ಅದು ದೇಶದಲ್ಲಿ ಯಾವುದೇ ನೆಲೆಯನ್ನು ಹೊಂದಿಲ್ಲ ಎಂದು ಸದಸ್ಯರು ವಿವರಿಸಿದ್ದರು.

ಅಫ್ಘಾನಿಸ್ತಾನದಲ್ಲಿ ನಾವು ಯಾವ ರೀತಿಯ ರಾಜಕೀಯ ವ್ಯವಸ್ಥೆಯನ್ನು ಅನ್ವಯಿಸಬೇಕು ಎಂಬುದನ್ನು ನಾವು ಚರ್ಚಿಸುವುದಿಲ್ಲ ಏಕೆಂದರೆ ಅದು ಸ್ಪಷ್ಟವಾಗಿದೆ. ಇದು ಶರಿಯಾ ಕಾನೂನು, ಅಷ್ಟೇ ಎಂದು ಹಾಶಿಮಿ ಹೇಳಿದ್ದರು.

ದೇಶದ ಮೇಲ್ವಿಚಾರಣೆಗೆ ಕೌನ್ಸಿಲ್: ಹಾಶಿಮಿ ಪ್ರಕಾರ ಒಂದು ಕೌನ್ಸಿಲ್ ದೇಶದ ದಿನನಿತ್ಯದ ಚಟುವಟಿಕೆಯ ಮೇಲ್ವಿಚಾರಣೆ ಮಾಡುತ್ತದೆ. ತಾಲಿಬಾನ್‌ನ ಅತ್ಯುನ್ನತ ನಾಯಕ ಹೈಬತುಲ್ಲಾ ಅಖುಂಡಜಾದ ಒಟ್ಟಾರೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

1996 ರಿಂದ 2001 ರವರೆಗೆ ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ಹೇಗೆ ಆಳಿದರು ಎಂಬಂತೆಯೇ ಇದು ಇರಲಿದೆ. ಆ ಸಮಯದಲ್ಲಿ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ನೆರಳಿನಲ್ಲಿ ನಿಂತ ಹಿನ್ನೆಲೆಯಲ್ಲಿ ದೈನಂದಿನ ಆಡಳಿತವು ಕೌನ್ಸಿಲ್​ನ ಜವಾಬ್ದಾರಿ ಆಗಿತ್ತು.

Leave a Reply

error: Content is protected !!
LATEST
ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ