NEWSದೇಶ-ವಿದೇಶನಮ್ಮರಾಜ್ಯ

ವಕೀಲರ ಮೇಲೆ ಹಲ್ಲೆಗೆ ಮುಂದಾದರೆ ಅಪಾಯ ಖಚಿತ: ಹೊಸ ಕಾಯ್ದೆ ಕರಡು ಸಿದ್ಧ..!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ವಕೀಲರು ತಮ್ಮ ವೃತ್ತಿಯಿಂದಲೇ ಪ್ರಕರಣವನ್ನು ಬೇಧಿಸಬೇಕಾದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಕೆಲವು ತಿಂಗಳುಗಳ ಹಿಂದೆ ವಿಜಯನಗರ ಜಿಲ್ಲೆಯ ಹೊಸಪೇಟೆ ನ್ಯಾಯಾಲಯದ ಆವರಣದಲ್ಲೇ ವಕೀಲ ತಾರೇಹಳ್ಳಿ ವೆಂಕಟೇಶ್‌ ಅವರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಮತ್ತು ವಕೀಲರ ಸಂರಕ್ಷಣೆಗೆ ಕಾಯ್ದೆ ರೂಪಿಸಿಬೇಕೆಂದು ದೇಶಾದ್ಯಂತ ವಕೀಲರ ಸಂಘಗಳು ಪ್ರತಿಭಟನೆ ಮಾಡಿದ್ದವು.

ಈ ಎಲ್ಲದರ ಹಿನ್ನೆಲೆಯಲ್ಲಿ ಸದ್ಯ ವಕೀಲರ ರಕ್ಷಣೆಗೆ ಕಾಯ್ದೆಯೊಂದನ್ನು ರಚಿಸಲು ಕರಡನ್ನು ಸಿದ್ಧಪಡಿಸಲಾಗಿದೆ. ವಕೀಲರು ಅಥವಾ ವಕೀಲರ ಕುಟುಂಬಸ್ಥರಿಗೆ‌ ಯಾವುದೇ ರೀತಿಯ ನೋವು ನೀಡಿದರೂ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಬಾರ್ ಕೌನ್ಸಿಲ್ ಆಫ್ ಕಮೀಟಿಯ ಎಸ್.ಪ್ರಭಾಕರನ್, ಸೀನಿಯರ್ ಅಡ್ವೋಕೇಟ್ ವೈಸ್ ಚೇರ್ಮನ್ ಬಾರ್ ಕೌನ್ಸಿಲ್ ಆಫ್ ಇಂಡಿಯಾ , ಡೆಬಿ ಪ್ರಸಾದ್ ಧಾಲ್ ಸೀನಿಯರ್ ಅಡ್ವೋಕೇಟ್ ಕೋ-ಚೇರ್ಮನ್ ಬಾರ್ ಕೌನ್ಸಿಲ್ ಆಫ್ ಇಂಡಿಯಾ.

ಸುರೇಶ ಚಂದ್ರ ಶ್ರೀಮಾಲಿ ಕೋ ಚೇರ್ಮನ್ ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಶೈಲೇಂದ್ರ ದುಬೆ ಮೆಂಬರ್ ಕೌನ್ಸಿಲ್ ಆಫ್ ಇಂಡಿಯಾ ಆ್ಯಂಡ್ ಪ್ರೇಸ್ ಕೌನ್ಸಿಲ್ ಆಫ್ ಇಂಡಿಯಾ, ಪ್ರಶಾಂತ ಕುಮಾರ ಸಿಂಗ್ ಚೇರ್ಮನ್, ಕೋ- ಆರ್ಡಿನೇಷನ್ ಕಮಿಟಿ ಆಫ್ ಸ್ಟೇಟ್ ಬಾರ್ ಕೌನ್ಸಿಲ್ಸ್ .

ಎ.ರಾಮಿ ರೆಡ್ಡಿ ಎಜ್ಯೂಕುಟಿವ್ ವೈಸ್ ಚೇರ್ಮನ್ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್, ಶ್ರೀನಾಥ್ ತ್ರಿಪತಿ ಚೇರ್ಮನ್ ಲೀಗಲ್ ಏಡ್ ಕಮೀಟಿ ಅವರನ್ನೊಳಗೊಂಡ 7 ಜನ ಹಿರಿಯ ವಕೀಲರ ಸಮಿತಿ ಈ ಕಾಯ್ದೆಯ ಕರಡನ್ನು ಸಿದ್ಧಪಡಿಸಿದ್ದು, ಸದ್ಯದಲ್ಲಿಯೇ ಸಂಸತ್​ನಲ್ಲಿ ಮಂಡಿಸುವ ಕುರಿತು ಪ್ರಯತ್ನ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ವಕೀಲರ ಮೇಲಿನ ಹಲ್ಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಈ ಕಾಯ್ದೆಯನ್ನು ರಚಿಸಲು ಉದ್ದೇಶಿಸಲಾಗಿದ್ದು , ಒಟ್ಟು 16 ಭಾಗಗಳನ್ನು ಕರಡಿನಲ್ಲಿ ಅಳವಡಿಸಲಾಗಿದೆ. ಸಂಸತ್​ ಸಭೆಯಲ್ಲಿ ಚರ್ಚೆಯ ನಂತರ ಈ ಕಾಯ್ದೆ ಕರಡು ಪಡೆಯಲಿರುವ ಅಂತಿಮ ಸ್ವರೂಪ ಇನ್ನಷ್ಟೇ ತಿಳಿಯಬೇಕಿದೆ.

ಈ ಕಾಯ್ದೆಯ ಕರಡಿನಲ್ಲಿ ಏನೆಲ್ಲ ರಕ್ಷಣೆ ಇದೆ?
ಸದ್ಯ ಪ್ರಸ್ತಾಪಿತ ಕಾಯ್ದೆಯ ಕರಡಿನಲ್ಲಿ ಭಾರತೀಯ ವಕೀಲರ ಪರಿಷತ್​ನಿಂದ ನೇಮಕಗೊಂಡ ವಕೀಲರು ಅಥವಾ ಅವರ ಕುಟುಂಬಸ್ಥರಿಗೆ‌ ಯಾವುದೇ ರೀತಿಯ ಹಾನಿ, ಬೆದರಿಕೆ, ಅಡ್ಡಿ, ಹಲ್ಲೆ ನಡೆಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳು ಅವಕಾಶ ನೀಡಲಾಗಿದೆ. 6 ತಿಂಗಳಿನಿಂದ ಹಿಡಿದು 2 ವರ್ಷಗಳ ವರೆಗೆ ಜೈಲು ಮತ್ತು 10 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಅವಕಾಶವಿದೆ. ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದಲ್ಲಿ ಈ ಮೇಲೆ ಹೇಳಲಾದ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.

ಪೊಲೀಸರು ಯಾವುದೇ ನ್ಯಾಯವಾದಿ ವಿರುದ್ಧ ಪ್ರಕರಣ ದಾಖಲಾದಲ್ಲಿ ನ್ಯಾಯವಾದಿಯನ್ನು ಜಿಲ್ಲೆಯ ಮುಖ್ಯ ದಂಡಾಧಿಕಾರಿಯ ಆದೇಶವಿಲ್ಲದೆ ಯಾವುದೇ ಪ್ರಕರಣದಲ್ಲಿ ಬಂಧಿಸುವಂತಿಲ್ಲ. ವಕೀಲರಿಗೆ ಕೋರ್ಟ್​ ಆಫೀಸರ್ ಎಂದು ಮಾನ್ಯತೆ ನೀಡುವ ಕುರಿತೂ ಕರಡಿನಲ್ಲಿ ಪ್ರಸ್ತಾಪಿಸಲಾಗಿದ್ದು, ಅವರ ವಿರುದ್ಧದ ಯಾವುದೇ ಪ್ರಕರಣವನ್ನು 30 ದಿನದಲ್ಲಿ ಮುಕ್ತಾಯಗೊಳಿಸಬೇಕು ಎಂದು ಉಲ್ಲೇಖಿಸಲಾಗಿರುವ 16 ಕಲಂಗಳ ಕಾಯಿದೆಯ ಡ್ರಾಫ್ಟ್ ಸಿದ್ಧವಾಗಿದೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ