ಮುಂಬೈ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ವಿರುದ್ಧದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜೀರಿಯಾದ ಇಬ್ಬರು ಪ್ರ ಜೆಗಳನ್ನು ಮಾದಕವಸ್ತು ನಿಯಂತ್ರ ಣ ದಳ ಬಂಧಿಸಿದೆ.
ಮಂಗಳವಾರ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದು, ಮುಂಬೈ ಮತ್ತು ನೆರೆಯ ಉಪನಗರದ ಹಲವೆಡೆ ಸೋಮವಾರ ರಾತ್ರಿ ಎನ್ಸಿಬಿಯ ಮುಂಬೈ ವಲಯ ಘಟಕವು ದಾಳಿ ನಡೆಸಿದೆ. ಈ ವೇಳೆ ನೈಜೀರಿಯಾದ ಇಬ್ಬರು ಡ್ರಗ್ ಪೆಡ್ಲರ್ಗಳಿಂದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಎನ್ಸಿಬಿಯು ಭಾನುವಾರ ಮುಂಜಾನೆ ಅರ್ಮಾನ್ ಕೊಹ್ಲಿ ಮನೆಯಲ್ಲಿ ಶೋಧ ನಡೆಸಿತ್ತು . ಆಗ ಅಧಿಕಾರಿಗಳಿಗೆ ಸಣ್ಣ ಪ್ರಮಾಣದಲ್ಲಿ ಕೊಕೇನ್ ಸಿಕ್ಕಿತ್ತು . ಈ ಹಿನ್ನೆ ಲೆಯಲ್ಲಿ ಅರ್ಮಾನ್ ಕೊಹ್ಲಿಯನ್ನು ಬಂಧಿಸಲಾಗಿತ್ತು.
ಪ್ರಕರಣದ ತನಿಖೆ ವೇಳೆ ಡ್ರಗ್ಸ್‌ನ ಮೂಲ ದಕ್ಷಿಣ ಆಫ್ರಿಕಾ ಎಂಬುದು ತಿಳಿದುಬಂದಿದೆ. ಮುಂಬೈಗೆ ಯಾವ ಮಾರ್ಗ ಮತ್ತು ಮೂಲಗಳ ಮೂಲಕ ಕೊಕೇನ್ ಅನ್ನು ತರಲಾಗಿದೆ ಎಂಬುದರ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ.