ನ್ಯೂಡೆಲ್ಲಿ: ನೋಯ್ಡಾದಲ್ಲಿ ಸೂಪರ್ಟೆಕ್ ಲಿಮಿಟೆಡ್ ನಿರ್ಮಿಸಿರುವ 40 ಅಂತಸ್ತುಗಳ ಅವಳಿ ಕಟ್ಟಡಗಳಿಗೆ ಸಂಬಂಧಿಸಿದ ಬೈಲಾಗಳನ್ನು ಉಲ್ಲಂಘಿಸಿರುವ ಕಾರಣ ಮೂರು ತಿಂಗಳ ಒಳಗಾಗಿ ಆ 40 ಅಂತಸ್ತುಗಳ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅವಳಿ ಕಟ್ಟ ಡಗಳ ನಿರ್ಮಾಣದಿಂದಾಗಿ ಕಿರುಕುಳ ಅನುಭವಿಸಿದ್ದಕ್ಕಾಗಿ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್‌ಗೆ 2 ಕೋಟಿ ರೂ. ಪಾವತಿಸಬೇಕು. ಇನ್ನು ಈ ಕಟ್ಟ ಡಗಳಲ್ಲಿ ಮನೆಗಳನ್ನು ಖರೀದಿಸಿರುವವರಿಗೆ, ಮನೆ ಬುಕಿಂಗ್ ವೇಳೆ ಅವರು ನೀಡಿದ್ದ ಮೊತ್ತವನ್ನು ವಾರ್ಷಿಕ ಶೇ.12ರ ಬಡ್ಡಿಯೊಂದಿಗೆ ಮರುಪಾವತಿಸಬೇಕು ಎಂದೂ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎಂ.ಆರ್.ಶಾ ಅವರಿರುವ ನ್ಯಾ ಯಪೀಠ, ‘ಅವಳಿ ಕಟ್ಟ ಡಗಳನ್ನು ನೆಲಸಮಗೊಳಿಸುವಂತೆ 2014ರ ಏಪ್ರಿಲ್ 1ರಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಸರಿಯಾಗಿದೆ. ಈ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವ ಅಗತ್ಯ ವಿಲ್ಲ ಎಂದು ಹೇಳಿದೆ.
ಸೂಕ್ತ ಏಜೆನ್ಸಿ ಹಾಗೂ ನೋಯ್ಡಾ ಪ್ರಾಧಿಕಾರದ ಮೇಲ್ವಿ ಚಾರಣೆಯಲ್ಲಿ ಕಟ್ಟ ಡಗಳ ನೆಲಸಮ ಕಾರ್ಯ ನಡೆಯಬೇಕು. ಈ ಕಾರ್ಯಕ್ಕೆ ತಗುಲುವ ಎಲ್ಲ ವೆಚ್ಚ ವನ್ನು ಸೂಪರ್ಟೆಕ್ ಭರಿಸಬೇಕು ಎಂದು ನ್ಯಾ ಯಪೀಠ ಆದೇಶದಲ್ಲಿ ತಿಳಿಸಿದೆ.
ದೇಶದ ಮಹಾನಗರಗಳಲ್ಲಿ ನಿಯಮಗಳನ್ನು ಉಲ್ಲಂ ಘಿಸಿ ಕಟ್ಟ ಡಗಳನ್ನು ನಿರ್ಮಾಣಮಾಡುತ್ತಿರುವುದು ಇತ್ತೀ ಚಿನ ದಿನಗಳಲ್ಲಿ ಹೆಚ್ಚು ತ್ತಿದೆ. ಇಂಥ ನಿರ್ಮಾಣಗಳಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ಸಹ ಶಾಮೀಲಾಗಿರುವುದು ಕಂಡುಬಂದಿದೆ. ಇಂಥ ವಿಷಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳು ವುದು ಅಗತ್ಯ ಎಂದೂ ನ್ಯಾ ಯಪೀಠ ಹೇಳಿದೆ.