ವಾಷಿಂಗ್ಟನ್: ಮಂಗಳವಾರ ಅಮೆರಿಕದ ಕೊನೆಯಯುದ್ಧ ವಿಮಾನವು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರುವುದರೊಂದಿಗೆ 2001ರಿಂದ ಅಫ್ಘಾನಿಸ್ತಾನದಲ್ಲಿ ಅಮೆರಿಕವು ನಡೆಸುತ್ತಿದ್ದ ಎರಡು ದಶಕಗಳಯುದ್ಧವು ಕೊನೆಗೊಂಡಿದೆ.
ಅಮೆರಿಕದ ಪ್ರಮುಖ ರಾಷ್ಟ್ರೀ ಯ ಹಿತಾಸಕ್ತಿಗೆ ವಿರುದ್ಧವಾದ ಯುದ್ಧದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಈ ಮೂಲಕ ಅಫ್ಘಾನಿಸ್ತಾನದಿಂದ 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಸೈನ್ಯವನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ಮತ್ತು ಸರಿಯಾದ ನಿರ್ಧಾರ ಎಂದು ಬೈಡನ್ ಸಮರ್ಥಿಸಿ ಕೊಂಡಿದ್ದಾರೆ.
ನಾನು ನನ್ನ ಮನಪೂರ್ವಕವಾಗಿ ಇದನ್ನು ಹೇಳುತ್ತಿದ್ದೇ ನೆ. ಇದು ಸರಿಯಾದ, ವಿವೇಚನೆಯ ನಿರ್ಧಾರ. ಅಮೆರಿಕದ ಪಾಲಿಗೆ ಅತ್ಯುತ್ತಮ ನಿರ್ಣಯ ಎಂದು ಭಾವಿಸುತ್ತೇನೆ ಎಂದು ಶ್ವೇತ ಭವನದಲ್ಲಿ ರಾಷ್ಟ್ರವನ್ನು ಉದ್ದೇ ಶಿಸಿ ಮಾಡಿದ ಭಾಷಣದ ವೇಳೆ ತಿಳಿಸಿದ್ದಾರೆ.
ಅಮೆರಿಕ ಅಧ್ಯ ಕ್ಷ ಸ್ಥಾನಕ್ಕೆ ಸ್ಪರ್ಧಿಸುವಾಗ ಈಯುದ್ಧವನ್ನು ಕೊನೆಗೊಳಿಸುವುದಾಗಿ ಅಮೆರಿಕದ ಜನರಿಗೆ ಭರವಸೆಯನ್ನು ಕೊಟ್ಟಿದ್ದೇನೆ.
ನಾನು ಆ ಬದ್ಧತೆಯನ್ನು ಗೌರವಿಸುತ್ತೇನೆ. ಇದು ಅಮೆರಿಕದ ಜನರೊಂದಿಗೆ ಪ್ರಾಮಾಣಿಕವಾಗಿರುವ ಸಮಯ. ಇನ್ನು ಮುಂದೆ ಅಫ್ಘಾನಿಸ್ತಾನದಲ್ಲಿ ಮುಕ್ತ ಕಾರ್ಯಾಚರಣೆಯಲ್ಲಿ ನಾವು ಯಾವುದೇ ಸ್ಪಷ್ಟವಾದ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಜಗತ್ತು ಬದಲಾಗುತ್ತಿದ್ದು, ಅಮೆರಿಕ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಚೀನಾದಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದೇ ವೆ. ರಷ್ಯಾ ದಿಂದಲೂ ಅನೇಕ ಕ್ಷೇತ್ರ ಗಳಲ್ಲಿ ಸ್ಪರ್ಧೆ ಎದುರಾಗಿದೆ. ಸೈಬರ್ ದಾಳಿ ಮತ್ತು ಪರಮಾಣು ಪ್ರಸರಣದ ಸವಾಲುಗಳು ನಮ್ಮ ಮುಂದಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಭಯೋತ್ಪಾದನೆ ಬೆದರಿಕೆಯು ಕೇವಲ ಅಫ್ಘನ್‌ಗಷ್ಟೇ ಸೀಮಿತ ಅಲ್ಲ. ಜಗತ್ತಿನಾದ್ಯಂತ ಹರಡಿದೆ ಎಂದವರು ಸೇನೆಯ ನಿರ್ಗಮನವನ್ನು ಸಮರ್ಥಿಸಿದ್ದಾರೆ.
ಅಫ್ಘನ್‌ನಲ್ಲಿ 20 ವರ್ಷಗಳ ನಂತರ ಅಮೆರಿಕದ ಇನ್ನೊಂದು ತಲೆಮಾರಿನ ಗಂಡು ಹಾಗೂ ಹೆಣ್ಣು ಮಕ್ಕಳನ್ನು ಯುದ್ಧಕ್ಕೆ ಕಳುಹಿಸುವುದನ್ನು ನಿರಾಕರಿಸಿದ್ದೇನೆ. ಬಹಳ ಹಿಂದೆ ಈಯುದ್ಧ ಕೊನೆಗೊಳ್ಳಬೇಕಿತ್ತು ಎಂದು ಹೇಳಿದ್ದಾರೆ.