NEWSದೇಶ-ವಿದೇಶ

ಉತ್ತರಾಖಂಡ್ : ಎಎಪಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್‌ – ಕೇಜ್ರಿವಾಲ್ ಘೋಷಣೆ

ವಿಜಯಪಥ ಸಮಗ್ರ ಸುದ್ದಿ

ಡೆಹ್ರಾಡೂನ್: ಉತ್ತರಾಖಂಡ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ, ದೆವಲಿ ಸಿಎಂ ಅರವಿಂದ್ ಕೇಜ್ರಿವಾಲ್ ಉತ್ತರಾಖಂಡ್‌ನ ಜನತೆಗೆ ಹಲವು ಭರವಸೆಗಳನ್ನು ನೀಡಿದ್ದಾರೆ.

ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿನ ನಗರ ಪ್ರದೇಶದಲ್ಲಿರುವ ಜನತೆಗೆ 300 ಯುನಿಟ್ ಗಳಷ್ಟು ಉಚಿತ ವಿದ್ಯುತ್‌ ಪೂರೈಕೆ ಮಾಡುವುದಾಗಿ ಘೋಷಿಸುವ ಜತೆಗೆ ಹಲವು ಭರವಸೆಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ.

ನಾವು ಅಧಿಕಾರಕ್ಕೆ ಬಂದು ನಂತರದ ದಿನಗಳಲ್ಲಿ, ಹಿಂದೆ ನೀಡಿದ್ದ ಭರವಸೆಗಳನ್ನು ಮರೆಯುವವರಲ್ಲ ಎಂದು ಕೇಜ್ರಿವಾಲ್ ತಾವು ಕೊಟ್ಟಿರುವ ಭರವಸೆಯನ್ನು ಮತ್ತೊಮ್ಮೆ ನೆನಪಿಸಿದ್ದಾರೆ. ಜತೆಗೆ ರೈತರಿಗೂ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿರುವ ಅವರು, ಬಾಕಿ ಇರುವ ರೈತರ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡುವುದಾಗಿಯೂ ತಿಳಿಸಿದ್ದಾರೆ.

ರೈತರು ಅತ್ಯಂತ ಬಡವರಾಗಿದ್ದು, ಅವರಿಂದಲೂ ವಿದ್ಯುತ್ ಶುಲ್ಕ ಪಡೆಯುತ್ತಿದ್ದೇವೆ. ಈ ರೀತಿ ಮಾಡಿದರೆ, ರೈತರಿಗೆ ಅವರ ಕುಟುಂಬದ ಕ್ಷೇಮ ಹಾಗೂ ಮಕ್ಕಳಿಗಾಗಿ ಸಾಕಷ್ಟು ಖರ್ಚು ಮಾಡಲು ಸಾಧ್ಯವಾಗುವುದಿಲ್ಲ. ನಾವು ಪ್ರಸ್ತುತ ವಿದ್ಯುತ್ ಬಿಲ್ ಗಳಲ್ಲಿ ಭ್ರಷ್ಟಾಚಾರಗಳನ್ನು ನೋಡುತ್ತಿದ್ದೇವೆ. ಆಪ್ ಅಧಿಕಾರಕ್ಕೆ ಬಂದಲ್ಲಿ ರೈತರು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಗಳನ್ನು ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ದೆಹಲಿಯಲ್ಲಿ ಎರಡನೇ ಬಾರಿಗೆ ಆಯ್ಕೆಯಾದಾಗ ಆಪ್ ಶಾಸಕರು ಲೈನ್ ಬೈ ಲೈನ್ ತೆರಳಿ ವಿದ್ಯುತ್ ತಂತಿ, ಟ್ರಾನ್ಸ್ಫಾರ್ಮಗಳನ್ನು ಕೂಲಂಕಷ ಪರೀಕ್ಷೆ ನಡೆಸಿದ್ದರು. ಈಗ ದೆಹಲಿಯ ಜನತೆ ಇನ್ವರ್ಟರ್ ಗಳು ಹಾಗೂ ಜನರೇಟರ್ ಗಳನ್ನು ಬಳಕೆ ಮಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಕೇಜ್ರಿವಾಲ್ ಖುಷಿಯಿಂದಲೇ ತಮ್ಮ ಸರ್ಕಾರದ ನಡೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲೂ ಉಚಿತ ವಿದ್ಯುತ್ ನೀಡಿದ್ದೇವೆ ಉತ್ತರಾಖಂಡ್ ನಲ್ಲಿಯೂ ಇದನ್ನೇ ಮಾಡುತ್ತೇವೆ ಇದಕ್ಕಾಗಿ ರಾಜ್ಯದ ಬಜೆಟ್ ನಲ್ಲಿ 1,200 ಕೋಟಿಯಿಂದ 50,000 ಕೋಟಿ ರೂ.ಗಳವರೆಗೆ ಖರ್ಚಾಗಲಿದೆ, ದೇಶದಲ್ಲಿ ಕೊರತೆ ಇಲ್ಲದ ಸರ್ಕಾರ ಎಂದರೆ ಅದು ದೆಹಲಿ ಸರ್ಕಾರ ಎಂದು ಸಿಎಜಿ ವರದಿ ಹೇಳುತ್ತದೆ ಎಂದು ತಿಳಿಸಿದ್ದಾರೆ.

ಆಮ್ ಆದಿ ಪಕ್ಷಕ್ಕೆ ಅಧಿಕಾರ ದೊರೆತಲ್ಲಿ ಉತ್ತರಾಖಂಡ್ ಜನತೆಗೆ ಉಚಿತ ವಿದ್ಯುತ್ ನೀಡಲು ಹೊಸ ತೆರಿಗೆ ಹಾಕುವುದಿಲ್ಲ ಎಂದೂ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು