CrimeNEWSನಮ್ಮರಾಜ್ಯ

ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ: ಬೆಳ್ಳಂಬೆಳಗ್ಗೆ ಎಸಿಬಿ ದಾಳಿ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಸೂರ್ಯ ನಗರಿ ಕಲಬುರಗಿ  ಹಾಗೂ ಕುಂದಾನಗರಿ ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟರ ನಿದ್ದೆಗೆಡಿಸಿದ್ದಾರೆ.

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದಡಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಕಲಬುರಗಿ ಮತ್ತು ಯಾದಗಿರಿ ವ್ಯವಸ್ಥಾಪಕ ಜಗದೇವಪ್ಪ ಮುಗುಟ ಅವರ ಮನೆ ಎಸಿಬಿ ತಂಡ ದಾಳಿ ಮಾಡಿದೆ.

ಕಲಬುರಗಿ ಮತ್ತು ಯಾದಗಿರಿ ಡಿವೈಎಸ್ಪಿ ಗಳ ನೇತೃತ್ವದ ತಂಡ ಕಲಬುರಗಿಯ ಮನೆ , ಕಾಂಪ್ಲೆಕ್ಸ್ , ಯಾದಗಿರಿ ಕಚೇರಿ‌ ಸೇರಿ ಬೀದರ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಕುಂದಾನಗರಿಯಲ್ಲಿ ದಾಳಿ
ಕಲಬುರಗಿ ಮಾತ್ರವಲ್ಲದೆ ಬೆಳಗಾವಿಯ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ಸುಭಾಷ್​ ಉಪ್ಪಾರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೂ ಸಹ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡ ನೇತೃತ್ವದ ತಂಡ ಬೆಳಗಾವಿಯ ರುಕ್ಮಿಣಿ ನಗರದ ಮನೆ, ಕಚೇರಿ, ಬಾಡಿಗೆ ಮನೆ ಹಾಗೂ ಬಸವನ ಕುಡಚಿಯಲ್ಲಿರುವ ಅಳಿಯ ಸದಾನಂದ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಈ ವೇಳೆ ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.

Leave a Reply