NEWSದೇಶ-ವಿದೇಶ

ಲಾಕ್‌ಡೌನ್‌ ಮುಗಿಯುವವರೆಗೂ ಮದ್ಯದ ಅಂಗಡಿಗಳಿಗೆ ಬೀಗ

ತಮಿಳುನಾಡು ಉಚ್ಚನ್ಯಾಯಾಲಯದ ಆದೇಶ

ವಿಜಯಪಥ ಸಮಗ್ರ ಸುದ್ದಿ

ಚೆನ್ನೈ: ರಾಜ್ಯಾದ್ಯಂತ ತೆರೆದಿರುವ ವೈನ್‌ ಶಾಪ್‌ಗಳನ್ನು ಮುಚ್ಚುವಂತೆ ತಮಿಳುನಾಡು ಉಚ್ಚನ್ಯಾಯಾಲಯ ಆದೇಶ ನೀಡಿದೆ.

ಮಾಜಿ ಐಪಿಎಸ್‌ ಅಧಿಕಾರಿ ಮೌರ್ಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ವಿನೀತ್ ಕೊಠಾರಿ ಮತ್ತು ಪುಷ್ಪ ಸತ್ಯನಾರಾಯಣ ಅವರನ್ನೊಳಗೊಂಡ ಹೈಕೋರ್ಚ್ ವಿಶೇಷ ವಿಭಾಗೀಯ ಪೀಠ ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕಕ್ಕೆ ಮಾತ್ರ ಅವಕಾಶ ನೀಡಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

ಕೊರೊನಾ ಮಹಾಮಾರಿಯಿಂದ ಜನರು ಜತ್ತರಿಸಿ ಹೋಗಿದ್ದು, ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ ಇದರ ನಡುವೆ ನೀವು ಮದ್ಯದಂಗಡಿಗಳನ್ನು ತೆರೆದರೆ ಸಾಮಾಜಿಕ ಅಂತರ ಕಾಯ್ದಕೊಳ್ಳುವುದು ಹೇಗೆ ಸಾಧ್ಯ ಎಂದು ಸರ್ಕಾರಕ್ಕೆ ಚಾಟಿ  ಬೀಸಿರುವ ಹೈ ಕೋರ್ಟ್‌ ಲಾಕ್‌ಡೌನ್‌ ಮುಗಿಯುವ ವರೆಗೂ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯಬಾರದು. ಜತೆಗೆ ಈಗ ತೆರೆದಿರುವ ಅಂಗಡಿಗಳನ್ನು ಮುಚ್ಚಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.

ಆದರೆ, ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಮದ್ರಾಸ್ ಹೈಕೋರ್ಟ್ ಈ ಹಿಂದೆ ಮಾರ್ಗಸೂಚಿಗಳನ್ನು ನೀಡಿತ್ತು. ಮದ್ಯವನ್ನು ಖರೀದಿಸಲು ಕ್ಯೂನಲ್ಲಿ ನಿಂತವರ ನಡುವೆ ಆರು ಅಡಿ ಅಂತರವನ್ನು ಕಾಯ್ದುಕೊಳ್ಳುವಂತೆ ಅದು ಆದೇಶಿಸಿತ್ತು, ಖರೀದಿದಾರರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರವನ್ನು ಕೋರಿತ್ತು. ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದರೆ ಅಂಗಡಿಗಳನ್ನು ಮುಚ್ಚಿಸುವುದಾಗಿಯೂ ನ್ಯಾಯಾಲಯ ಎಚ್ಚರಿಕೆ ನೀಡಿತ್ತು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

Leave a Reply