ಪಿರಿಯಾಪಟ್ಟಣ: ತಾಲೂಕಿನ ಕೊತ್ತವಳ್ಳಿ ಗ್ರಾಮದ ದೊಡ್ಡಮ್ಮ ತಾಯಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥವು ಶಿಥಿಲಗೊಂದಡಿದ್ದ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಜಾತ್ರಾಮಹೋತ್ಸವವು ಸ್ಥಗಿತಗೊಂಡಿತ್ತು. ಗ್ರಾಮಸ್ಥರು, ದಾನಿಗಳ ನೆರವಿನಿಂದ ರಥವನ್ನು ನೂತನವಾಗಿ ನಿರ್ಮಿಸಿದ್ದಾರೆ.
ಹೀಗಾಗಿ ಶ್ರೀ ದೊಡ್ಡಮ್ಮತಾಯಿ ಜಾತ್ರಾ ಮಹೋತ್ಸವನ್ನು ಹೋಮ-ಹವನಗಳಿಂದ ನೂತನ ರಥಕ್ಕೆ ಪೂಜೆ ಸಲ್ಲಿಸಿ ಶುಕ್ರವಾರ ಸಂಜೆ ನಂತರ ದೇವರ ಉತ್ಸವ ಮೂರ್ತಿಯನ್ನು ನೂತನ ರಥದ ಮೇಲೆ ಪ್ರತಿಷ್ಠಾಪಿಸಿ ರಥ ಎಳೆಯುವ ಮೂಲಕ ಭಕ್ತಾದಿಗಳು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಜಾತ್ರಾ ಮಹೋತ್ಸವಕ್ಕೆ ಕೊತ್ತವಳ್ಳಿಕೊಪ್ಪಲು, ವಡ್ಡರಹಳ್ಳಿ, ಮಾಳೆಗೌಡನಕೊಪ್ಪಲು, ಹುಚ್ಚೇಗೌಡನಕೊಪ್ಪಲು, ಕಗ್ಲಿಕೊಪ್ಪಲು, ಕಳ್ಳಿಕೊಪ್ಪಲು ಸೇರಿದಂತೆ ತಾಲ್ಲೂಕಿನ ನಾನಾ ಭಾಗಗಳಿಂದ ಭಕ್ತರು ಆಗಮಿಸಿದರು.
ಗ್ರಾಮದ ಯಜಮಾನ ಹಾಗೂ ಜಿ.ಪಂ.ಮಾಜಿ ಉಪಾಧ್ಯಕ್ಷ ವಿ.ಜಿ.ಅಪ್ಪಾಜಿಗೌಡ, ಯಜಮಾನರಾದ ಹೊಲದಪ್ಪ, ಅಶೋಕ, ಕುಂಡೇಗೌಡ, ಕಾಳೇಗೌಡ, ಜವರೇಗೌಡ, ಕಾಗ್ರೆಸ್ ಮುಖಂಡ ನಿತಿನ್ ವೆಂಕಟೇಶ್ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದರು.