Wednesday, October 30, 2024
NEWSಕೃಷಿವಿಜ್ಞಾನ

ಚಾಮುಂಡಿ ಬೆಟ್ಟ ಹಸಿರೀಕರಣಕ್ಕೆ ಒತ್ತು

ಹಸಿರೀಕರಣದಲ್ಲಿ ಮೈಸೂರು ಮಾದರಿಯಾಗಲಿ l  ಸಚಿವ ಸೋಮಶೇಖರ್ ಆಶಯ

ವಿಜಯಪಥ ಸಮಗ್ರ ಸುದ್ದಿ

ಮೈಸೂರು:  ಹಸಿರೀಕರಣ ವಿಷಯದಲ್ಲಿ ಮೈಸೂರು ಮಾದರಿಯಾಗಬೇಕು. ಹೀಗಾಗಿ ಜಿಲ್ಲೆಯಲ್ಲಿ ಗಿಡ ನೆಡಬೇಕೆಂದರೆ ನಿಮ್ಮ ಬಳಿ ಎಷ್ಟು ಗಿಡಗಳಿವೆ? ಜಿಲ್ಲೆಯಲ್ಲಿರುವ 11  ಕ್ಷೇತ್ರಗಳಲ್ಲಿ ಎಷ್ಟು ಗಿಡಗಳನ್ನು ಬೆಳೆಸಬಹುದು? ಆ ಎಲ್ಲಾ ಕಡೆ ನೆಡುವಷ್ಟು ಗಿಡಗಳಿವೆಯೇ? ಒಂದು ಲಕ್ಷ ಸಸಿಗಳನ್ನು ಬೆಳೆಸಬೇಕೆಂದರೆ ಇರುವ ವ್ಯವಸ್ಥೆ ಏನು? ಇವುಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಕೊಡಿ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಜೂನ್  5ರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಈಗ ಗಿಡ ನೆಡುವುದಕ್ಕೆ ಮುಂಚೆ ನೆಟ್ಟ ಮೇಲಿನ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಅಂದರೆ ರಸ್ತೆ ವಿಸ್ತರಣೆ ಮಾಡಿದರೆ, ವಿದ್ಯುತ್ ಲೈನ್‍ಗಳ ಕೆಳಗೆ ಗಿಡ ನೆಟ್ಟರೆ ವರ್ಷಗಳ ಬಳಿಕ ಇನ್ನೊಂದು ಇಲಾಖೆಯವರು ಅಭಿವೃದ್ಧಿ ಕಾಮಗಾರಿ ದೃಷ್ಟಿಯಿಂದ ಕಡಿದುಹಾಕುವಂತಾಗಬಾರದು. ಈ ನಿಟ್ಟಿನಲ್ಲಿ ಮುಂದಿನ ಅಭಿವೃದ್ಧಿ ಯೋಜನೆಗಳನ್ನೂ ಗಮನದಲ್ಲಿಟ್ಟುಕೊಂಡು, ಮುಂದಾಗುವ ಪರಿಣಾಮಗಳನ್ನು ಗಮನಿಸಿ ಗಿಡ ನೆಡಬೇಕು. ಇನ್ನೂ ಸಮಯಾವಕಾಶವಿದ್ದು, ಅಧ್ಯಯನ ಮಾಡಿ ವರದಿ ಕೊಡಿ ಎಂದು ಸೂಚಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

ಚಾಮುಂಡಿಬೆಟ್ಟದಲ್ಲಿ ದಿನೇ ದಿನೆ ಗಿಡಗಳು ನಾಶವಾಗುತ್ತಿವೆ ಎಂಬ ಮಾಹಿತಿ ಬಂದ  ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಹಸಿರೀಕರಣ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಸಹಕಾರವನ್ನು ಪಡೆದು ನೀರು ಇಂಗಿಸುವ ಕಾರ್ಯವನ್ನು ಮಾಡೋಣ. ಗಿಡವನ್ನು ಬೆಳೆಸಿ ಚಾಮುಂಡಿಬೆಟ್ಟ ಸಹಿತ ಮೈಸೂರನ್ನು ಹಸಿರೀಕರಣ ಮಾಡೋಣ ಎಂದು ಸಚಿವರು ತಿಳಿಸಿದರು.

ಎಲ್ಲರೂ ಸೇರಿ ಪರಿಸರ ದಿನ ಆಚರಿಸೋಣ: ಪ್ರತಿ ದಿನ ಕೋವಿಡ್ ಕೋವಿಡ್ ಎಂಬ ಭಯದ ವಾತಾವರಣದಿಂದ ಹೊರಬರೋಣ. ಜಿಲ್ಲೆಯಲ್ಲಿ ಎಲ್ಲರನ್ನೂ ಹೇಗೆ ಬಳಸಿಕೊಂಡು ಪರಿಸರ ದಿನವನ್ನಾಗಿ ಆಚರಿಸಿಕೊಂಡು ಹೋಗಬಹುದು ಎಂಬ ನಿಟ್ಟಿನಲ್ಲಿ ಮುಂದಿನ ಶುಕ್ರವಾರ ಪುನಃ ಸಭೆ ನಡೆಸಲಿದ್ದು, ಅಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಆ ಸಮಯದಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಬರುವುದು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜಿಲ್ಲೆಯಲ್ಲಿ ದಾಖಲೆಯ ಗಿಡಗಳನ್ನು ಬೆಳೆದು ಹಸಿರು ಮೈಸೂರು ಮಾಡಲು ನಾವು ಪಣತೊಡೋಣ ಎಂದು ಹೇಳಿದರು.

ಶಾಸಕ  ಎಸ್.ಎ.ರಾಮದಾಸ್ ಮಾತನಾಡಿ, ಒಮ್ಮೆಲೆಗೆ ಲಕ್ಷ ಗಿಡಗಳನ್ನು ಬೆಳೆಸಲು ನೀಡುವುದಕ್ಕಿಂತ ವ್ಯಾಪ್ತಿಯನ್ನು ಗಮನಿಸಿ, ಇರುವ ಸೌಲಭ್ಯ ನೋಡಿಕೊಂಡು ಬೆಳೆಸುವುದು ಉತ್ತಮ. ಈ ನಿಟ್ಟಿನಲ್ಲಿ ಸರಿಯಾಗಿ ಅಧ್ಯಯನ ಮಾಡಿ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ಹೇಮಂತಕುಮಾರ್ ಮಾತನಾಡಿ, ವಿವಿ ವತಿಯಿಂದ ವಿದ್ಯಾರ್ಥಿಗಳಿಗೆ ಗಿಡಗಳನ್ನು ಬೆಳೆಯುವ ಜವಾಬ್ದಾರಿಯನ್ನು ಕೊಡಲಾಗಿದೆ. ಅವರಿಗೂ ಸಹ ಪರಿಸರ ಬೆಳೆಸುವ ಅರಿವು ಮೂಡುತ್ತದೆ. ಜೊತೆಗೆ ಅವರು ಅಭ್ಯಾಸ ಮಾಡುವಷ್ಟು ದಿನಗಳ ಕಾಲ ಆ ಗಿಡದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಇದಕ್ಕೆ ಅರಣ್ಯ ಇಲಾಖೆಯ ಸಹಕಾರವೂ ಬೇಕು ಎಂದು ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

ಮುಕ್ತ ವಿವಿ ಕುಲಪತಿ ಪ್ರೊ. ವಿದ್ಯಾಶಂಕರ್ ಮಾತನಾಡಿ, ಪ್ರತಿ ಸಿಬ್ಬಂದಿಗೆ ತಲಾ 4 ಗಿಡಗಳನ್ನು ವಿತರಣೆ ಮಾಡುತ್ತಿದ್ದು, 2 ಗಿಡವನ್ನು ವಿವಿ ವ್ಯಾಪ್ತಿಯಲ್ಲಿ ಹಾಗೂ 2 ಗಿಡಗಳನ್ನು ಅವರ ಮನೆಯಲ್ಲಿ ನೆಡಲು ವ್ಯವಸ್ಥೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿ.ಪಂ. ಸಿಇಒ  ಪ್ರಶಾಂತ್ ಕುಮಾರ್ ಮಿಶ್ರ  ತಾವು ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಕೆಲವು ಕಡೆ ವಿದ್ಯುತ್ ತಂತಿಗಳ ಕೆಳಗೆ ಬೆಳೆಯುವ ಪರಿಪಾಠ ಬಿಡಬೇಕು. ಆ ಗಿಡಗಳು ಬೆಳೆದ ಬಳಿಕ ಲೈನ್‍ಗಳಿಗೆ ತಾಗುವುದರಿಂದ ವಿದ್ಯುತ್ ಇಲಾಖೆ ಸಿಬ್ಬಂದಿ ಅವುಗಳನ್ನು ಕಡಿಯಬೇಕಾಗುತ್ತದೆ. ಜೊತೆಗೆ ನಗರಗಳಲ್ಲಿ ಗಟ್ಟಿ ಇರುವ ಮರಗಳ ತಳಿಗಳನ್ನು ಬೆಳೆಸಿದರೆ ಉತ್ತಮ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೈಟ್‍ಗಳಿಗೆ ಅನುಮೋದನೆ ಕೊಡುವಾಗ ಒಂದು ಸೈಟಿಗೆ 2 ಗಿಡ ಎಂಬಂತೆ ಮಾಡಬೇಕು. ಗಿಡ ಬೆಳೆಯದಿದ್ದರೆ ಪರವಾನಗಿಯನ್ನು ಕೊಡದಂತೆ ಕಾನೂನು ಬಿಗಿಗೊಳಿಸಲು ಮುಡಾ ಆಯುಕ್ತರಿಗೆ ಸಚಿವರು ಸಹಿತ ಶಾಸಕರು ಸೂಚಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

Leave a Reply

error: Content is protected !!
LATEST
ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ... KSRTC ಬಸ್‌ ಫುಟ್‌ಬೋರ್ಡ್‌ ಮೇಲೆ ಪ್ರಯಾಣಿಸಿದ್ದು ಜನರು - ಆದರೆ 500 ರೂ. ದಂಡ ಕಟ್ಟಿದ್ದು ಮಾತ್ರ ನೌಕರ!! BMTC ಚಾಲಕರ ಮೇಲೆ ಹಲ್ಲೆ ಖಂಡಿಸಿ ಎಲೆಕ್ಟ್ರಿಕ್‌ ಡಿಪೋ 30ರಲ್ಲಿ ಪ್ರತಿಭಟನೆ - ಸಂಸ್ಥೆ ಬಸ್‌ಗಳ ಕಾರ್ಯಾಚರಣೆ  ಬಿಎಂಟಿಸಿಯ ಉತ್ತಮ ಸೇವೆಗೆ ಸಂದ Award of Excellence ರಾಷ್ಟ್ರೀಯ ಪ್ರಶಸ್ತಿ: ನೌಕರರಿಗೆ ಅರ್ಪಿಸಿದ ಎಂಡಿ ರಾಮಚಂದ್ರನ್ BMTC ಚಾಲನಾ ಸಿಬ್ಬಂದಿಗಳ ಮೇಲೆ ಹಲ್ಲೆ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಡಿಪೋ 30ರಲ್ಲಿ ಬಸ್‌ ತೆಗೆಯದೇ ಚಾಲಕರ ಪ್ರತಿ... BMTC: ಸೈಡ್‌ಗಾಗಿ ಹಾರನ್‌ ಮಾಡಿದಕ್ಕೇ ಚಾಲಕ, ನಿರ್ವಾಹಕರಿಗೆ ಹೊಡೆದು ಕಿಡಿಗೇಡಿಗಳು ಪರಾರಿ