ನ್ಯೂಡೆಲ್ಲಿ: ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ವ್ಯಾಪಕ ಹಾನಿ ಮಾಡಿದ ದುರಂತ ಮಾಸುವ ಮುನ್ನವೇ ಮತ್ತೊಂದು ಚಂಡಮಾರುತದ ಭಯ ದೇಶವನ್ನು ಕಾಡುತ್ತಿದೆ.
ಬರುವ ಎರಡು ಮೂರು ದಿನದಲ್ಲಿ ಉತ್ತರ ಮಹಾರಾಷ್ಟ್ರ ಗುಜರಾತ್ ಕರಾವಳಿ ಪ್ರದೇಶಗಳಲ್ಲಿ ಹೊಸ ಚಂಡ ಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಆಗ್ನೇಯ, ಪೂರ್ವ ಕೇಂದ್ರ ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಜೂನ್ 3ರಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಿದ್ದು, ಮುಂಜಾಗ್ರತೆ ಕ್ರಮವಾಗಿ ಮುಂಬೈ ಮೂಲದ ಪ್ರಾದೇಶಿಕ ಹವಾಮಾನ ಕೇಂದ್ರ ಭಾನುವಾರ ಚಂಡಮಾರುತದ ಬೆಳವಣಿಗೆ ಮತ್ತು ತೀವ್ರತೆ ಮೇಲೆ ನಿಗಾ ಇರಿಸಿದೆ. ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಈಗಾಗಲೇ ಕೊರೊನಾ ಮಹಾಮಾರಿ, ಮಿಡತೆ ಹಾವಳಿ ಜತೆಗೆ ಹೋಗಿದ್ದ ಚಂಡಮಾರುತ ಮತ್ತೆ ವಕ್ಕರಿಸುತ್ತಿರುವುದು ದೇಶದ ಆರ್ಥ ವ್ಯವಸ್ಥೆ ಮೇಲೆ ಏನು ಪರಿಣಾಮ ಬೀರುವುದೋ ಎಂಬ ಭಯದಲ್ಲಿ ಕೇಂದ್ರ ಸರ್ಕಾರದ ನೋಟ ನೆಟ್ಟಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail