ನ್ಯೂಡೆಲ್ಲಿ: ನಮ್ಮ ಒಂದಿಂಚು ಭೂಮಿಯನ್ನು ಯಾರು ಆಕ್ರಮಿಸಿಕೊಳ್ಳಲು ಆಗುವುದಿಲ್ಲ. ಆ ರೀತಿ ಏನಾದರು ಅಂದುಕೊಂಡಿದ್ದರೆ ಹುಷಾರ್ ಎಂದು ಚೀನಾಕ್ಕೆ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ನ್ಯೂಡೆಲ್ಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಎದ್ದುನಿಂತ್ತು ಮಾಡಿದ ಮೋದಿ, ಗಡಿಯಲ್ಲಿ ನಮ್ಮ ಸೈನಿಕರನ್ನು ಹೆಚ್ಚಿಸಲಾಗಿದೆ. ಗಡಿಯಲ್ಲಿ ಭೂಮಿ ಒತ್ತುವರಿ ಮಾಡಿಕೊಳ್ಳಲು ಚೀನಾ ಕ್ಯಾತೆ ತೆಗೆದರೆ ಅದನ್ನು ದಮನಮಾಡುವ ಸಂಪೂರ್ಣ ಅಧಿಕಾರವನ್ನು ನಮ್ಮ ಸೇನೆಗೆ ನೀಡಿದ್ದೇವೆ. ಅಲ್ಲದೇ ಭೂ ಸೇನೆ, ಜಲ ಮತ್ತು ವಾಯು ಸೇನೆಯನ್ನು ಬಲಗೊಳಿಸಿದ್ದೇವೆ. ಇದನ್ನು ಮೀರಿ ನೀವು ಬಂದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ವಾರ್ನಿಂಗ್ ಮಾಡಿದ್ದಾರೆ.
ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿಪಕ್ಷಗಳು ಮೋದಿ ಹೇಳಿಕೆಯನ್ನು ಬೆಂಬಲಿಸಿದ್ದು, ಚೀನಾ ವಿರುದ್ಧ ಸಮರಕ್ಕೆ ನಾವು ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನು ನೀಡಿವೆ.
ಗಡಿಯಲ್ಲಿ ನಮ್ಮ ದೇಶರಕ್ಷಣೆಗೆ ನಮ್ಮ ಯೋಧರು ಸದಾ ಸಿದ್ಧರಿದ್ದು, ಈ ನಿಟ್ಟಿನಲ್ಲಿ ಸೇನೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಡಲು ನಮ್ಮ ಸರ್ಕಾರವೂ ಎಲ್ಲಾ ರೀತಿಯಲ್ಲು ಸಜ್ಜಾಗಿ ಎಂದು ತಿಳಿಸಿದರು.