ಬೆಂಗಳೂರು: ಕೊರೊನಾ ಸೋಂಕು ತನ್ನ ರೌದ್ರತೆಯನ್ನು ಮುಂದುವರಿಸಿದೆ. ಈ ನಡುವೆಯೇ ಶಾಲೆ ಆರಂಭ ಮಾಡಲು ಸರ್ಕಾರ ಮುಂದಾಗುತ್ತಿರುವುದಕ್ಕೆ ಪೋಷಕರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಇಂತಹ ಕೊರೊನಾ ಅಬ್ಬರದಲ್ಲಿ ಪುಟ್ಟ ಮಕ್ಕಳ ಶಾಲೆಗಳನ್ನು ಬೇರೆ ತೆರೆಯುತ್ತಾರಂತೆ. ಯಾವ ವಾದ ಏನೇ ಇರಲಿ ಒಂದೇ ಒಂದು ಪುಟ್ಟ ಮಗುವಿಗೆ ಏನಾದರೂ ಕೊರೊನಾ ಸಂಬಂಧಿತ ಅಪಾಯವಾದರೆ ಇಡೀ ರಾಜ್ಯದ ತಂದೆ-ತಾಯಿಗಳು ಆತಂಕ, ಹಿಂಸೆ ಪಡಲು ಶುರು ಮಾಡುತ್ತಾರೆ. ಹೆಚ್ಚು ಆದರಂತೂ ರಾಜ್ಯದ ಅಂತಃಕಳೆ ಮಂಕಾಗಿ ಎಲ್ಲರೂ ಪಾಪ ಪ್ರಜ್ಞೆ ಅನುಭವಿಸ ಬೇಕಾಗುತ್ತದೆ.
ಬೇಕಾ ಇದೆಲ್ಲಾ… ಒಂದು ವರ್ಷ ಮಕ್ಕಳಿಗೆ ಸುಮ್ಮನೆ ಪ್ರಮೋಷನ್ ಕೊಟ್ಟರೆ ನಷ್ಟ ವೇನಿಲ್ಲ. ಮುಂದೆ ಅದನ್ನು ಸರಿ ಮಾಡಿಕೊಳ್ಳಬಲ್ಲ ಬುದ್ಧ, ಚಾಣಾಕ್ಷತೆ ಮಕ್ಕಳಿಗಿರುತ್ತದೆ. ಸದ್ಯಕ್ಕೆ ಶಾಲೆ ಶುರುಮಾಡುವುದು ಬೇಡ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಶಾಲೆ ತೆರೆಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರವಾಗುವ ನಿರೀಕ್ಷೆ ಇದೆ. ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳ ಜತೆ ಸಭೆ ನಡೆಸಲಿದ್ದು, ಶಾಲೆ ತೆರೆದರೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
Samajika kalakali illada raajakeeya