ವಾಷಿಂಗ್ಟನ್: ಕ್ರೂರಮೃಗದ ಸ್ವಭಾವದ ತಂದೆಯೊಬ್ಬ ತನ್ನ 10 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿ ಬಳಿಕ ಗೂಗಲ್ ಸರ್ಚ್ ಮಾಡಿರುವ ಆಘಾತಕಾರಿ ಘಟನೆ ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ನಡೆದಿದೆ.
ತನ್ನ ಮಗುವನ್ನು ಆರೈಕೆ ಮಾಡುತ್ತಿದ್ದ ವೇಳೆ 29 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಪರಿಣಾಮ ಮಗುವಿನ ಗುಪ್ತಾಂಗದಲ್ಲಿ ಗಾಯ, ರಕ್ತಸ್ರಾವವಾಗಿದೆ. ಅಲ್ಲದೆ ಶಿಶು ಉಸಿರಾಟವನ್ನೂ ನಿಲ್ಲಿದೆ. ಇದರಿಂದ ಗಾಬರಿಗೊಂಡ ವ್ಯಕ್ತಿ ಕೂಡಲೇ ಗೂಗಲ್ ಮೊರೆ ಹೋಗಿದ್ದಾನೆ. ಮಗು ಉಸಿರಾಟ ನಿಂತರೆ ಏನು ಮಾಡುವುದು..?. ಮಗುವಿನ ಹೃದಯ ಬಡಿತ ಕೇಳಿಸದಿದ್ದರೆ ಏನು ಮಾಡುವುದು? ಎಂದೆಲ್ಲ ಗೂಗಲ್ ನಲ್ಲಿ ಹುಡುಕಾಡಿದ್ದಾನೆ.
ಸದ್ಯ ಪೊಲೀಸರು ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಈ ವೇಳೆ ಆತ ಗೂಗಲ್ ಸರ್ಚ್ ಮಾಡಿರುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮಹಿಳೆಯರೊಂದಿಗೆ ಮಾತನಾಡಿರುವುದು ಬೆಳಕಿಗೆ ಬಂದಿದೆ. ಆದರೆ ಈತ ಮಹಿಳೆಯರ ಜೊತೆಯೂ ತನ್ನ ಮಗಳ ಸ್ಥಿತಿಯ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟೆಲ್ಲ ಆದ ಬಳಿಕ ಬೇರೆ ದಾರಿ ಕಾಣದೆ ತುರ್ತು ಸೇವೆಗೆ ಕರೆ ಮಾಡಿದ್ದಾನೆ. ಆದರೆ ಶಿಶು ಅದಾಗಲೇ ಮೃತಪಟ್ಟಿತ್ತು. ಆತನ ಅಪಾರ್ಟ್ ಮೆಂಟ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದಾಗ, ರಕ್ತಸಿಕ್ತವಾದ ಡೈಪರ್ ಸಿಕ್ಕಿದೆ. ಇತ್ತ ಮಗುವಿನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಗುಪ್ತಾಂಗಕ್ಕೆ ಗಂಭೀರ ಗಾಯಗಳಾಗಿದ್ದು, ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಅಲ್ಲದೆ ಶಿಶುವಿನ ತಲೆಯಲ್ಲೂ ಗಾಯಗಳಾಗಿರುವುದು ಬೆಳಕಿಗೆ ಬಂದಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗೆ ಕಳುಹಿಸಿದ್ದಾರೆ.