Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

“ಸೌದೆಗಾದ್ರೂ ಸಬ್ಸಿಡಿ ಕೊಡು ಗುರು” : ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಆಪ್‌ ಮಹಿಳಾ ಘಟಕ ಕಿಡಿ

ಕೇಂದ್ರ ಸರ್ಕಾರದ ವಿರುದ್ಧ ಸೌದೆ ಒಲೆಯಲ್ಲಿ ಟೀ ಮಾಡಿ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ಬೆಂಗಳೂರು: “ಸೌದೆಗಾದ್ರೂ ಸಬ್ಸಿಡಿ ಕೊಡು ಗುರು” ಎನ್ನುವ ಘೋಷವಾಕ್ಯಗಳನ್ನು ಕೂಗುತ್ತಾ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಕಾರ್ಯಕರ್ತರು ಶನಿವಾರ ಬೆಳಗ್ಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸೌದೆ ಒಲೆಯಲ್ಲಿ ಟೀ ಮಾಡಿ ಹಂಚುವ ಮೂಲಕ ಪ್ರತಿಭಟನೆ ನಡೆಸಿದರು.

ವಿಜಯಪಥ ಹೊಸ ಆಪ್ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/details?id=manyathy.vijayapatha.app

ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ, ಡಿಸೆಂಬರ್ ತಿಂಗಳೊಂದರಲ್ಲೇ ಎರಡು ಬಾರಿ ಎಲ್‌ಪಿಜಿ ಸಿಲಿಂಡರ್ ದರವನ್ನು 100 ರೂಪಾಯಿಯಷ್ಟು ಹೆಚ್ಚಳ ಮಾಡಿ ಜನರ ಸುಲಿಗೆ ಮಾಡುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ದೋಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಾಕ್‌ಡೌನ್ ನೆಪ ಮಾಡಿಕೊಂಡು ಸಬ್ಸಿಡಿ ನೀಡುವುದನ್ನು ನಿಲ್ಲಿಸಿರುವ ಸರ್ಕಾರ ನೇರವಾಗಿ 20 ಸಾವಿರ ಕೋಟಿ ರೂ. ಉಳಿತಾಯ ಮಾಡಿದೆ ಆದರೂ ಬೆಲೆ ಹೆಚ್ಚಳ ಏಕೆ. ಮಾರುಕಟ್ಟೆಯಲ್ಲಿ ಸೌದೆಯ ಬೆಲೆಯೂ ಗಗನಕ್ಕೆ ಏರಿದೆ ಆದ ಕಾರಣ “ಸೌದೆಗಾದರೂ ಸಬ್ಸಿಡಿ ಕೊಡಿ” ಕನಿಷ್ಠ ಪಕ್ಷ ಎರಡು ಹೊತ್ತು ಊಟ ಮಾಡಿ ಜೀವ ಉಳಿಸಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದರು.

ಒಲೆಯಲ್ಲಿ ಅಡುಗೆ ಮಾಡುವುದರಿಂದ ಪರಿಸರ ಮಾಲಿನ್ಯ ತಪ್ಪಿಸಬಹುದು ಎಂದು ಹೇಳಿ ಗ್ಯಾಸ್ ವಿತರಿಸಿದ ಮೋದಿಯವರು ಈಗ ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ. ರೈತ, ಕಾರ್ಮಿಕ, ಮಹಿಳಾ ವಿರೋಧಿಯಾದ ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಹೆಚ್ಚಳ ನಿರ್ಧಾರವನ್ನು ಹಿಂಪಡೆಯದಿದ್ದರೆ ಸೌದೆಯನ್ನು ಪ್ರಧಾನಿ ಕಚೇರಿಗೆ ಪಾರ್ಸಲ್ ಮಾಡಲಾಗುವುದು ಎಂದು ಹೇಳಿದರು.

ವಿಜಯಪಥ ಹೊಸ ಆಪ್ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/details?id=manyathy.vijayapatha.app

ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ ಏನು ಎಂಬುದೇ ಅರ್ಥವಾಗುತ್ತಿಲ್ಲ, ಈ ದೇಶವನ್ನು ಸೂಪರ್ ಪವರ್ ಮಾಡುತ್ತೇವೆ ಎಂದು ಹೇಳುತ್ತಲೇ ಬಿಕಾರಿಗಳನ್ನಾಗಿ ಮಾಡುತ್ತಿದೆ, ಕಿಂಚಿತ್ತೂ ದೇಶ ಭಕ್ತಿ, ದೇಶದ ಜನ ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಜನರಿಂದ ಪ್ರಗತಿ ನಿರೀಕ್ಷಿಸಲು ಸಾಧ್ಯವೇ ಎಂದರು.

ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಹಿಳಾ ಘಟಕದ ಉಪಾಧ್ಯಕ್ಷರಾದ ಡಾ.‌ಮಾಯಾ ಪ್ರದೀಪ್, ವೈದ್ಯೆ ಪೂರ್ಣಿಮಾ ನಾಯ್ಡು, ಪ್ರತಿಮಾ ಮಲಾನಿ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಎಸ್. ವಿ. ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

error: Content is protected !!
LATEST
KSRTC: ಅಧಿಕಾರಿಗಳು ಬೀದಿಗಿಳಿಯದ ಹೊರತು ನಾವು ಮುಷ್ಕರ ಬೆಂಬಲಿಸಲ್ಲ- ಸಮಸ್ತ ಚಾಲನಾ ಸಿಬ್ಬಂದಿಗಳು KSRTC: ಸಾರಿಗೆ ಕಾರ್ಮಿಕರ ವೇತನ ಹೆಚ್ಚಳ ಸಂಬಂಧ ಡಿ.31ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡೇಮಾಡುತ್ತೇವೆ- ಕ್ರಿಯಾ ಸಮಿತ... ಪಂಚಭೂತಗಳಲ್ಲಿ ಲೀನವಾದ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಕಟಾವುಮಾಡಿ ಕಣದಲ್ಲೇ ಬಿಟ್ಟಿದ್ದ 60 ಕ್ವಿಂಟಲ್‌ ಭತ್ತ ತಿಂದು ನಾಶ ಮಾಡಿದ ಆನೆಗಳು: ತಲೆಮೇಲೆ ಕೈಹೊತ್ತು ಕುಳಿತ ರೈತರು ಕ್ರಿಸ್ಮಸ್ ಸಂಭ್ರಮಾಚರಣೆ ವೇಳೆ ಕ್ರಿಶ್ಚಿಯನ್ ಸಮುದಾಯದ 19 ಮನೆಗಳಿಗೆ ಬೆಂಕಿ ಹಚ್ಚಿದ ಪಾಪಿಗಳು ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ: 5 ಸಾವಿರ ಪ್ರವಾಸಿಗರ ರಕ್ಷಿಸಿದ ಪೊಲೀಸರು ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್‌ಗೆ ಗ್ರಾನೈಟ್ ತುಂಬಿದ ಲಾರಿ ಡಿಕ್ಕಿ: ಹೊತ್ತಿ ಉರಿದ ಕ್ಯಾಂಟರ್‌- ಚಾಲಕರಿ... KSRTC: ನಾಲ್ಕೂ ನಿಗಮಗಳ ಸಾರಿಗೆ ನೌಕರರು ಜ.1ರಿಂದ 6 ತಿಂಗಳುಗಳ ಕಾಲ ಮುಷ್ಕರ ಮಾಡುವಂತಿಲ್ಲ- ಸರ್ಕಾರ ಆದೇಶ ಟೀ ಕುಡಿದು ಹೋಗುವಿರಂತೆ ಮನೆಗೆ ಬನ್ನಿ ಎಂದು ಕರೆದ ಸುಂದರಿಯ ಮಾತು ನಂಬಿ ಹನಿ ಟ್ರ್ಯಾಪ್‌ಗೆ ಬಿದ್ದ ಕಂಟ್ರ್ಯಾಕ್ಟರ್ 4 ವರ್ಷಕ್ಕೊಮ್ಮೆ ಚೌಕಾಸಿ ನಡೆಸುವ ಬದಲು 7ನೇ ವೇತನ ಆಯೋಗ ಜಾರಿಮಾಡಿ: ನೌಕರರ ಸೇನೆ ಆಗ್ರಹ