CrimeNEWS

ಕುಡಿದ ಮತ್ತಿನಲ್ಲಿ ಜೀವಂತ ಹಾವನ್ನೇ ಕಚ್ಚಿ ಕಚ್ಚಿ ಸಾಯಿಸಿದ ಪಾಪಿ

ವಿಜಯಪಥ ಸಮಗ್ರ ಸುದ್ದಿ

ಮುಳಬಾಗಿಲು: ಕುಡಿದ ಅಮಲಿನಲ್ಲಿ ಜೀವಂತ ಹಾವನ್ನೇ ಕಚ್ಚಿ ಸಾಯಿಸುವ ಮೂಲಕ ವಿಕೃತಿ ಮೆರೆದ ಘಟನೆ ಮಂಗಳವಾರ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕುಮಾರ್‌ ಎಂಬಾತನೆ ಕುಡಿದ ಅಮಲಿನಲ್ಲಿ ಹಾವನ್ನು ಭೀಕರವಾಗಿ ಕಚ್ಚಿ ಸಾಯಿಸಿದ ಕಿಡಿಗೇಡಿ. ಸೆಂಟ್ರಿಂಗ್‌ ಕೆಲಸ ಮಾಡುವ ಈತ ಸೋಮವಾರ ನಂಗಲಿ ಗ್ರಾಮದ ಬಾರ್‌ ಒಂದರಲ್ಲಿ ವೈನ್‌ಖರೀದಿಸಿ ಅಲ್ಲೇ ಅರ್ಧ ಕುಡಿದಿದ್ದ ಇನ್ನು ಉಳಿದ ಮದ್ಯವನ್ನು ಮಂಗಳವಾರ ಬೆಳಗ್ಗೆ ತೋಟಕ್ಕೆ ಹೋಗಿ ಕುಡಿದಿದ್ದಾನೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

ಈ ವೇಳೆ ತೋಟದಲ್ಲಿ ಹೋಗುತ್ತಿದ್ದ ಹಾವನ್ನು ಕಂಡು ಅದನ್ನು ಹಿಡಿದುಕೊಂಡು ಬಂದ ಈ ಕುಡುಕ ಅದನ್ನು ಕಚ್ಚಿ ಅರ್ಧಂಬರ್ಧ ಸಾಯಿಸಿದ್ದಾನೆ. ಅಷ್ಟೇ ಅಲ್ಲದೆ ಅದನ್ನು ಕುತ್ತಿಗೆಗೆ ಹಾಕಿಕೊಂಡು ಬೈಕ್‌ನಲ್ಲಿ ಗ್ರಾಮಕ್ಕೆ ಬಂದಿದ್ದಾನೆ. ಅದನ್ನು ಕಂಡ ಗ್ರಾಮಸ್ಥರು ಹೌಹಾರಿದ್ದಲ್ಲದೇ ಹಾವನ್ನು ತೆಗೆದುಹಾಕುವಂತೆ ಹೇಳಿದ್ದಾರೆ. ಆದರೆ ಅಮಲು ನೆತ್ತಿಗೇರಿದ್ದರಿಂದ  ಆತ ಬೈಕ್‌ನಲ್ಲಿ ಕುಳಿತುಕೊಂಡೇ ಇನ್ನು ಉಳಿದಿದ್ದ ಚಿಟುಕಿಯಷ್ಟು ಮದ್ಯವನ್ನು ಸೇವಿಸುತ್ತ ಮತ್ತೆ ಆ ಹಾವನ್ನು ಕಚ್ಚಿದ್ದಾನೆ ಮೊದಲ ಅರ್ಧಂಬರ್ಧ ಸಾತ್ತಿದ್ದ ಹಾವು ಈತ ಮತ್ತೆ ನೀಡಿದ ಹಿಂಸೆಗೆ  ಸತ್ತುಹೋಗಿದೆ. ಆದರೂ  ಆತನಿಗೆ ಯಾವುದೇ ತೊಂದರೆ ಆಗಿಲ್ಲ ಎಂದು  ಗ್ರಾಮಸ್ಥರು ಹೇಳಿದ್ದಾರೆ.

ಅದು ಏನೆ ಇರಲಿ ಕುಡಿದ ಮತ್ತಿನಲ್ಲಿದ್ದೇನೆ ಎಂದು ಹಾವನ್ನು ಹಿಡಿದು ಕಚ್ಚಿ ಚಿತ್ರಹಿಂಸೆ ನೀಡಿ ಸಾಯಿಸಿರುವುದು ಅಪರಾಧವಾಗುತ್ತದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಇಂಥ ಕೃತ್ಯ ಎಸಗಿರುವ ಪಾಪಿಗೆ ಶಿಕ್ಷೆ ಕೊಡಿಸಲು ಮುಂದಾಗಬೇಕಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ: https://play.google.com/store/apps/detail

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...