ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಶೀತಲ ಸಮರ ತೀವ್ರಗೊಂಡಿದೆ.
ಇತ್ತ ಆಡಳಿರೂಢ ಬಿಜೆಪಿ ಕಾಂಗ್ರೆಸ್ ಕಿಚ್ಚಾಯಿಸಿದರೆ ಅತ್ತ ಕಾಂಗ್ರೆಸ್ ಬಿಜೆಪಿಯ ಕಾಲು ಎಳೆಯುವುದರಲ್ಲಿ ಪೈಪೋಟಿಗೆ ಬಿದ್ದಂತೆ ನಡೆದುಕೊಳ್ಳುತ್ತಿದೆ. ಒಟ್ಟಾರೆ ಈ ಎರಡು ಪಕ್ಷಗಳ ಮಧ್ಯ ನಡೆಯುತ್ತಿರುವ ಈ ಟ್ವೀಟ್‌ವಾರ ರಾಜ್ಯದ ಜನರಿಗೆ ಒಂದು ರೀತಿಯ ಮನರಂಜನೆಯನ್ನು ನೀಡುತ್ತಿದೆ ಎಂದು ಹೇಳಬಹುದು.
ಸೋಶಿಯಲ್ ಮೀಡಿಯಾದಲ್ಲಿ ಗಂಟೆಗೊಮ್ಮೆಯಂತೆ ಟೀಕೆ, ಆರೋಪ, ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದ್ದು, ಬಿಜೆಪಿ ಸರ್ಕಾರ ಈಗ ”ಹರಿದ ಬನಿಯನ್” ಅತ್ತ ಎಳೆದರೆ ಇತ್ತ ತೋರುತ್ತದೆ. ಇತ್ತ ಎಳೆದರೆ ಅತ್ತ ತೋರುತ್ತದೆ ಎಂದು ಕಾಂಗ್ರೆಸ್ ಟ್ವಿಟರ್ ನಲ್ಲೇ ಟೀಕಾಪ್ರಹಾರ ನಡೆಸಿದೆ.
ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ, ಇಂದಿನ ರಾಜ್ಯ ಕಾಂಗ್ರೆಸ್ ಒಂದು ಕುಡುಕರ ಬಾರ್ ಇದ್ದಂಗೆ, ಇಲ್ಲಿ ನಡೆಯುವುದು ಸಿಡಿ ಅವ್ಯವಹಾರ. ನಾಯಕರ ನಡುವೆ ಕಚ್ಚಾಟ ಹಾಗೂ ಹೊಡೆದಾಟ ಮಾತ್ರ ಎಂದು ಕುಟುಕಿದೆ.
ಈ ಕುಟುಕು ಮತ್ತು ಗುಟುರು ನಡುವೆ ಜನರು ಒಂದು ರೀತಿಯಲ್ಲಿ ಈ ಪಕ್ಷಗಳ ಗಾಂಭೀರ್ಯತೆ ಏನು ಎಂಬುದರ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಚಡ್ಡಿಹಾಕಲು ಬಾರದ ಮಕ್ಕಳಮತೆ ಇವು ನಡೆದುಕೊಳ್ಳುತ್ತಿರುವುದನು ನೋಡಿದರೆ ದೇಶವನ್ನು ಎತ್ತ ಎಳೆದೊಯ್ಯುತ್ತವೋ ಎಂಬ ಆತಂಕವು ವ್ಯಕ್ತವಾಗುತ್ತಿದೆ.