ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಆಗುತ್ತಿರುವ ಕಲಬೆರೆಕೆ ರಾಗಿಯ ಕುರಿತಾಗಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರು ಬೆಂಗಳೂರಿನ ನ್ಯಾಯಬೆಲೆ ಅಂಗಡಿಯೊಂದರ ಮುಂದೆ ಭಾನುವಾರ ರಿಯಾಲಿಟಿ ಚೆಕ್ ಮಾಡುವ ಮೂಲಕ ಅಕ್ರಮವನ್ನು ಬಯಲಿಗೆಳೆದಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ರಾಜ್ಯದ ಬಡವರಿಗೆ ವಿತರಿಸುತ್ತಿರುವ ಪಡಿತರದಲ್ಲಿ ರಾಗಿಯಲ್ಲಿ ಕಲ್ಲಲ್ಲ, ಕಲ್ಲಲ್ಲಿ ರಾಗಿ ಇರುವುದರ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಮುಗ್ಗಲು ರಾಗಿಯಿಂದ ನಾವು ಆಯ್ಕೆ ಮಾಡಿ ಕಳಿಸಿರುವ ಜನಪ್ರತಿನಿಧಿಗಳಿಗೆ ಮುದ್ದೆ ಮಾಡಿ ಉಣಬಡಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳುತ್ತೇವೆ. ಅವರು ಈ ರಾಗಿಯಿಂದ ಮಾಡಿದ ಮುದ್ದೆ ತಿನ್ನಲಿ ಎಂದು ಕಳಪೆ ರಾಗಿ ವಿತರಣೆ ಮಾಡುತ್ತಿರುವುದರ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಪಡಿತರದಾರರು ಪೃಥ್ವಿ ರೆಡ್ಡಿ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದು, ಈ ರಾಗಿ ದನಗಳು ತಿನ್ನುವುದಕ್ಕೂ ಆಗುವುದಿಲ್ಲ ಇನ್ನು ನಾವು ಹೇಗೆ ತಿನ್ನುವುದು. ಮುಗ್ಗಲು ರಾಗಿ, ಜತೆಗೆ ಕಲಲ್ಲುಗಳೇ ಹೆಚ್ಚಾಗಿದೆ ತೂಕ ಬರಲಿ ಎಂದು ರಾಗಿಯಲ್ಲಿ ಕಲ್ಲನ್ನು ಬೆರೆಸಿ ಕೊಡುತ್ತಿದ್ದಾರೆ. ಬಡವರ ಅನ್ನ ಕಸಿದು ಯಾರ ಹೊಟ್ಟೆ ತುಂಬಿಸಲು ಹೊರಟಿದ್ದಾರೆ ಎಂದು ಸರ್ಕಾರಕ್ಕೆ ಮತ್ತು ಜನ ಪ್ರತಿನಿಧಿಗಳಿ ಹಿಡಿ ಶಾಪ ಹಾಕಿದರು.
ಬಿಜೆಪಿ ಸರ್ಕಾರ ಕೊಟ್ಟದ್ದು ರಾಗಿಯಲ್ಲಿ ಕಲ್ಲಲ್ಲ, ಕಲ್ಲಲ್ಲಿ ರಾಗಿ!!@aapkaprithvi #JCBsaakuAAPbeku #KarnatakaDeservesBetter #AAP4Karnataka #AAP4Bangalore pic.twitter.com/a45XVuR08X
— AAP Bengaluru (@AAPBangalore) June 13, 2021