Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

ಮುಖ್ಯಮಂತ್ರಿಗಳೇ ನಿಮ್ಮ ದಮನಕಾರಿ ನೀತಿಯಿಂದ ಸಾರಿಗೆ ನೌಕರರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಮೋಹನ್ ದಾಸರಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿಗಳೇ ನಿಮ್ಮ ದಮನಕಾರಿ ನೀತಿಯಿಂದ ಸಾರಿಗೆ ನೌಕರರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಮೊದಲು ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಇಂದು ಮೂರನೇ ದಿನಕ್ಕೆ ಕಾಲಿಟ್ಟರೂ ಇವರ ನ್ಯಾಯಯುತ ಬೇಡಿಕೆಗಳನ್ನು ಅಲಿಸದೆ ಮುಖ್ಯಮಂತ್ರಿಗಳು ಕಣ್ಣು ಕಿವಿಗಳನ್ನು ಮುಚ್ಚಿಕೊಂಡು ಕುಳಿತಿದ್ದಾರೆ. ತಮ್ಮ ದಮನಕಾರಿ ನೀತಿಯಿಂದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಜನತೆಯ ಕಷ್ಟಗಳನ್ನು ಕೇಳದ ಸರಕಾರ ರಾಜ್ಯದಲ್ಲಿ ಇದ್ದೂ ಪ್ರಯೋಜನವೇನು ಎಂದು ಕಿಡಿಕಾರಿದರು.

ಇಪ್ಪತ್ತೆರಡು ದಿನಗಳ ಹಿಂದೆಯೇ ಮುಷ್ಕರದ ಎಚ್ಚರಿಕೆಯನ್ನು ಸಾರಿಗೆ ನೌಕರರು ರಾಜ್ಯ ಸರಕಾರಕ್ಕೆ ನೀಡಿದ್ದರು. ಆದರೆ ಅವರ ನಾಯಕರನ್ನು ಕರೆದು ಮಾತನಾಡಿಸಿ ಸಮಸ್ಯೆ ಬಗೆಹರಿಸುವ ಆಸಕ್ತಿಯನ್ನು ಮುಖ್ಯಮಂತ್ರಿ ತೋರಿಸಿರಲಿಲ್ಲ. ಇದರ ಪರಿಣಾಮ ಇಂದು ಕೇವಲ ಸಾರಿಗೆ ನೌಕರರ ಮೇಲೆ ಮಾತ್ರವಾಗದೆ ಇಡೀ ರಾಜ್ಯದ ಜನತೆ ಮತ್ತು ರಾಜ್ಯದ ಆರ್ಥಿಕತೆಯ ಮೇಲೆ ಆಗುತ್ತಿದೆ. ಸಾರಿಗೆ ಸಂಪರ್ಕ ಇಲ್ಲದೆ ಜನತೆ ತತ್ತರಿಸಿ ಹೋಗಿದ್ದಾರೆ ಎಂದರು.

ಕಳೆದ ಮೂರು ದಿನಗಳಿಂದ ಪ್ರತಿಭಟನೆ ಗಂಭೀರವಾಗಿ ನಡೆಯುತ್ತಿದೆ. ನೌಕರರ ಬೇಡಿಕೆಗಳು ನಿಲ್ಲುವ ತನಕ ಈ ಹೋರಾಟ ನಿಲ್ಲುವುದಿಲ್ಲ. ಅಲ್ಲಿಯ ವರೆಗೆ ಮುಖ್ಯಮಂತ್ರಿಗಳು ಸುಮ್ಮನೆ ಕುಳಿತು ಆಟ ನೋಡುತ್ತಾರೆಯೇ? ನೌಕರರ ಮುಖಂಡರನ್ನು ಕರೆದು ಅವರ ಮನವಿಗಳನ್ನು ಆಲಿಸುವ ಜವಾಬ್ದಾರಿಯನ್ನು ನಡೆದುಕೊಳ್ಳದ ಸರಕಾರ ರಾಜ್ಯದಲ್ಲಿ ಇದ್ದು ಪ್ರಯೋಜನವೇನು? ಮುಖ್ಯಮಂತ್ರಿಗಳು ಈ ಮುಷ್ಕರದಿಂದ ಆಗಿರುವ ನಷ್ಟದ ಹೊಣೆ ಹೊರಲು ಸಿದ್ದರಿದ್ದಾರೆಯೇ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳೇ, ಈಗಾಗಲೇ ರಾಜ್ಯದಲ್ಲಿ ನಡೆಯುತ್ತಿರುವ ರೈತ ಹೋರಾಟ ನಿಮ್ಮ ಸರಕಾರದ ಅಹಂಕಾರವನ್ನು ಮುರಿದಿದೆ. ರೈತರು ಸರಕಾರವನ್ನು ಪ್ರಶ್ನಿಸುವ ಮೂಲಕ ನಿಮಗೆ ಬಿಸಿ ಮುಟ್ಟಿಸಿದ್ದಾರೆ. ಈಗ ಸಾರಿಗೆ ನೌಕರರ ಹೋರಾಟವೂ ಅದೇ ಹಾದಿಯನ್ನು ಹಿಡಿಯುತ್ತಿದೆ. ಅಲ್ಲದೇ, ರೈತ ಮುಖಂಡರು ಸಾರಿಗೆ ನೌಕರರ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ. ಇದು ರೈತ ನಾಯಕರೆಂದು ಕರೆಸಿಕೊಂಡಿರುವ ತಮ್ಮ ಕಣ್ಣುಗಳನ್ನು ಕೆಂಪಗಾಗಿಸಿದೆ. ತಕ್ಷಣ ರೈತ ನಾಯಕರನ್ನು ಕರೆದು ಅವರ ಮನವಿಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ತಾಕೀತು ಮಾಡಿದರು.

ಆಮ್ ಆದ್ಮಿ ಪಕ್ಷ ಈಗಾಗಲೇ ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ನೀಡಿದೆ. ಹೋರಾಟದ ಆರಂಭದ ದಿನಗಳಿಂದಲೂ ಅವರ ಜೊತೆಗೆ ಕೈಜೋಡಿಸಿದೆ. ಇವರ ಹೋರಾಟದ ಒತ್ತಾಯಗಳು ಈಡೇರುವ ತನಕ ಪಕ್ಷ ಅವರಿಗೆ ಬೆಂಬಲವಾಗಿ ನಿಲ್ಲಲಿದೆ. ರಾಜ್ಯ ಸರಕಾರ ತಕ್ಷಣವೇ ಸಾರಿಗೆ ನೌಕರರ ನಾಯಕರನ್ನು ಕರೆದು ಅವರ ಬೇಡಿಕೆಗಳನ್ನು ಸ್ವೀಕರಿಸಿ ಈಡೇರಿಸಬೇಕಾಗಿ ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ ಎಂದರು.

ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಹಾಗೂ ಡಾ. ಸತೀಶ್ ಕುಮಾರ್, ಸಾರಿಗೆ ನೌಕರರ ಮುಖಂಡರಾದ ರಾಮು ಮತ್ತು ಸತೀಶ್ ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್