ಬೆಂಗಳೂರು: ನಮ್ಮ ಮೆಟ್ರೋ ಹಂತ-2ರ ಕಾಳೇನ ಅಗ್ರಹಾರ-ನಾಗವಾರ ಮಾರ್ಗದ ಯೋಜನೆಯಲ್ಲಿ, ಕಂಟೋನ್ ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ಕೊರೆದು ಹೊರಬಂದ ಸುರಂಗ ಯಂತ್ರ ‘ಊರ್ಜಾ’ವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಜನಪ್ರತಿನಿಧಿಗಳು, ಸುರಂಗ ಕೊರೆಯುವ ಊರ್ಜಾ ಯಂತ್ರವು ಬೆಂಗಳೂರಿನ ಕಂಟೋನ್ಮೆಂಟ್ ನಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹೊರಬರುವುದನ್ನು ಬುಧವಾರ ಬೆಳಗ್ಗೆ ವೀಕ್ಷಿಸಿದರು.
ಕಳೆದ ವರ್ಷ ಜುಲೈ 30ರಂದು ಶಿವಾಜಿನಗರ ಕಂಟೋನ್ಮೆಂಟ್ ನಿಲ್ದಾಣದಿಂದ ಸುರಂಗ ಕೊರೆಯಲು ಆರಂಭಿಸಿ 850 ಮೀಟರ್ ಸುರಂಗ ಕೊರೆತು 13 ತಿಂಗಳ ನಂತರ ಇಂದು ಬೆಳಗ್ಗೆ 10.15ಕ್ಕೆ ಶಿವಾಜಿನಗರ ಮೆಟ್ರೊ ನಿಲ್ದಾಣಕ್ಕೆ ಆಗಮಿಸಿತು.
ಊರ್ಜಾ ಸುರಂಗ ಯಂತ್ರ ಇಷ್ಟು ಸಮಯ ಸುರಂಗ ಕೊರೆದು ಇಂದು ಹೊರಬಂದ ವೇಳೆ ಮೆಟ್ರೋ ಕಾಮಗಾರಿ ಕಾರ್ಮಿಕರು ಹರ್ಷದಿಂದ ಕುಣಿದು ಸಂತಸ ಹಂಚಿಕೊಂಡರು.
ಯಂತ್ರ ಹೊರಬರುವ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು, ಊರ್ಜಾ ಬ್ರೇಕ್ ಥ್ರೂ ವೀಕ್ಷಿಸಿದರು. ಊರ್ಜಾ ಯಂತ್ರ ಕಂಟೋನ್ಮೆಂಟ್ನಿಂದ ಶಿವಾಜಿನಗರ ಮಾರ್ಗವಾಗಿ ಸುರಂಗ ಕೊರೆದಿದೆ.
855 ಮೀಟರ್ ಸುರಂಗ ಕೊರೆದು ಟಿಬಿಎಂ ಹೊರ ಬಂದಿದೆ. ಎರಡನೇ ಹಂತದಲ್ಲಿ ಒಟ್ಟು 9 ಟಿಬಿಎಂ ಮಿಷನ್ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಸುರಂಗ ಮಾರ್ಗ ಕೆಲಸ ಪೂರ್ಣಗೊಳಿಸಿ ಮೊದಲ ಟಿಬಿಎಂ ಉರ್ಜಾ ಹೊರಬಂದಿದೆ.
ಸುರಂಗ ಮಾರ್ಗ ಕೊರೆಯುವುದು ದೊಡ್ಡ ಸವಾಲಾಗಿತ್ತು. ಸಡಿಲ ಮಣ್ಣು ಹಾಗೂ ಸಾಕಷ್ಟು ಬೋರ್ವೆಲ್ಗಳು ಸಿಕ್ಕಿದ್ದವು. ಇದನ್ನೆಲ್ಲಾ ಬೇಧಿಸಿ ಊರ್ಜಾ ಯಶಸ್ವಿಯಾಗಿ ತನ್ನ ಕೆಲಸ ಮುಗಿಸಿ ಸುರಂಗ ಮಾರ್ಗದಿಂದ ಹೊರಬಂದಿದೆ.
ಮೆಟ್ರೋ ಫೇಸ್ 2 ನಲ್ಲಿ, ಗೊಟ್ಟಿಗೆರೆಯಿಂದ ನಾಗಾವರವರೆಗೆ 21 ಕಿ.ಮೀ ಉದ್ದ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಸುಮಾರು 13 ಕಿ.ಮೀ ನಷ್ಟು ಸುರಂಗ ಮಾರ್ಗ ಕಾಮಗಾರಿ ಮಾಡಲಾಗುತ್ತಿದೆ.
ಇದಕ್ಕಾಗಿ 9 ಟಿಬಿಎಂ (ಟನಲ್ ಬೋರಿಂಗ್ ಮಿಷನ್)ಗಳು ಕೆಲಸ ನಿರ್ವಹಿಸುತ್ತಿವೆ. ಈ 9 ಮಿಷನ್ ಗಳ ಪೈಕಿ ಊರ್ಜಾ ಸುರಂಗ ಮಾರ್ಗ ಕೆಲಸ ಮುಗಿಸಿ ಹೊರ ಬರುತ್ತಿರುವ ಮೊದಲ ಯಂತ್ರವಾಗಿದೆ.
ಸುರಂಗ ಕೊರೆಯುವ ಊರ್ಜ ಯಂತ್ರವು ಬೆಂಗಳೂರಿನ ಕಂಟೋನ್ಮೆಂಟ್ ನಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಇಂದು ಹೊರಬರುವುದನ್ನು ಮುಖ್ಯಮಂತ್ರಿ @BSBommai ಅವರು ವೀಕ್ಷಿಸಿದ ದೃಶ್ಯಾವಳಿಗಳು;#NammaMetro @cpronammametro pic.twitter.com/6R3AIn1KXo
— CM of Karnataka (@CMofKarnataka) September 22, 2021