ಪಿರಿಯಾಪಟ್ಟಣ : ಚಲನ ಚಿತ್ರನಟ ತೂಗುದೀಪ್ ದರ್ಶನ್ಗೆ ತೇಜೋವಧೆ ಮಾಡಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಯುವಸೇನೆ ತಹಸೀಲ್ದಾರ್ ಚಂದ್ರಮೌಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಯಾವುದೆ ಅಧಾರವಿಲ್ಲದೆ ಚಲನಚಿತ್ರ ನಟ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ದಲಿತ ಸಪ್ಲೆಯರ್ ಮೇಲೆ ಹಲ್ಲೆ ಮಾಡಿದ್ಧಾರೆ ಎಂದು ಸುಳ್ಳು ಆರೋಪಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸಕ್ಕೆ ಮುಂದಾಗಿದ್ಧಾರೆ.
ಹಲ್ಲೆಗೆ ಒಳಗಾದವರಾಗಲ್ಲಿ ಯಾರು ಕೂಡ ಪೊಲೀಸ್ಠಾಣೆಯಲ್ಲಿ ಮೊಕ್ಕದಮೆ ದಾಖಲಿಸಿಲ್ಲ ದರ್ಶನ್ಗೆ ಕೆಟ್ಟಹೆಸರು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮಾಧ್ಯಮಗಳ ಮುಂದೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ಸಂಘ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಲೋಕೇಶ್, ಪದಾಧಿಕಾರಿಗಳಾದ ಶಶಿ, ಅಭಿ, ಧನು, ಮಹದೇವ್ ಸೇರಿದಂತೆ ಮತ್ತಿತರರು ಇದ್ದರು.