ಹಾವೇರಿ: ದೇಶ ನಿರ್ಮಾಣದಲ್ಲಿ ನಮ್ಮದೂ ಪಾತ್ರವಿದೆ ಎಂಬ ಅರಿವು ಮೂಡಿದಾಗ ಮಾತ್ರ ನಮ್ಮ ಹಿರಿಯರ ಸ್ವಾತಂತ್ರ್ಯ ಹೋರಾಟಕ್ಕೆ ಸಾರ್ಥಕ ಉಂಟಾಗುತ್ತದೆ ಎಂದು ಕೆರಿಮತ್ತಿಹಳ್ಳಿಯ ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಪ್ರಭಾರಿ ಆಡಳಿತಾಧಿಕಾರಿ ಡಾ. ಪ್ರಶಾಂತ ಎಚ್.ವಾಯ್ ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಭಾರತ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರತಿ ಜೀವಿಗೆ ಸ್ವಾತಂತ್ರ್ಯವಿಲ್ಲದೆ ಜೀವನವಿಲ್ಲ, ನಮ್ಮ ದೇಶಕ್ಕೆ ಸ್ವಾತಂತ್ರ ಸುಮ್ಮನೆ ಬಂದುದಲ್ಲ. ನಮ್ಮಲ್ಲಿ ಜಾಗೃತಿ ಆದಾಗ ನಾವು ಆಚರಿಸುವ ಅಮೃತ ಮಹೋತ್ಸವಕ್ಕೆ ಹೊಸ ಹೊಳಪು ಬರುತ್ತದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಕಾರಾಗೃಹದ ಅಧೀಕ್ಷಕರಾದ ಲೋಕೇಶ ಟಿ.ಕೆ. ಅವರು ಮಾತನಾಡಿ, ಹಿರಿಯ ಶ್ರಮದಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಕಾರಣ ಸ್ವತಂತ್ರ ಭಾರತ ಮತ್ತು ನಮ್ಮನ್ನು ರಕ್ಷಿಸುವ ಸಂವಿಧಾನ ನಮಗೆ ಸಿಕ್ಕಿದೆ.
ದೇಶಭಕ್ತರ ತ್ಯಾಗದಿಂದಾಗಿ. ಅಂತಹ ಸ್ವಾತಂತ್ರ್ಯವನ್ನು ನಾವು ಅನುಭವಿಸುವುದು ಮಾತ್ರವಲ್ಲ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಜವಾಬ್ದಾರಿಯುತ ಪ್ರಜೆಯಾಗಿ ಬದುಕುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಂಕರ ತುಮ್ಮಣ್ಣನವರ ಅವರು ದಾರಿಯಾವುದಯ್ಯ ಎಂಬ ಏಕವ್ಯಕ್ತಿ ಕಿರು ನಾಟಕ ಪ್ರದರ್ಶಿಸಿದರು. ಹನುಮಂತಪ್ಪ ಕರವಾಳಿ ನಾಟಕದ ಸಂಗೀತ ಸಂಯೋಜಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಶಶಿಕಲಾ ವೀ ಹುಡೇದ, ಮೈಲಾರ ಮಹದೇವ ಟ್ರಸ್ಟಿನ ಸದಸ್ಯ ಸತೀಶ ಕುಲಕರ್ಣಿ, ಕಾರಾಗೃಹದ ಅಧಿಕಾರಿ ಕುಮಾರಿ ಯಲ್ಲಮ್ಮ ಹರವಿ, ಉಪಸ್ಥಿತರಿದ್ದರು. ಸಿದ್ಧಾರೂಢ ಸಾವಿ ಸ್ವಾಗತಿಸಿದರು. ಶ್ರೀಮತಿ ರಾಜೇಶ್ವರಿ ರವಿ ಸಾರಂಗಮಠ ಕಾರ್ಯಕ್ರಮ ನಿರೂಪಿಸಿದರು.