CrimeNEWSನಮ್ಮರಾಜ್ಯ

ಲವ್ವಿ ಡವ್ವಿಗೆ ಪತಿ ಅಡ್ಡಿ ಎಂದು ಕೊಲೆ ಮಾಡಿದ್ದ ಐನಾತಿ ಪತ್ನಿ ಸೇರಿ ಮೂವರು ಅರೆಸ್ಟ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಲವ್ವಿ ಡವ್ವಿಗೆ ಪತಿ ಅಡ್ಡಿ ಆಗುತ್ತಿದ್ದಾನೆಂದು ಪ್ರಿಯಕರನಿಗೆ ಹೇಳಿ ಕೊಲೆ ಮಾಡಿಸಿ ನವರಂಗಿ ಆಟವಾಡಿ ಏನು ಕಾಣದಂತೆ ಇದ್ದ ಐನಾತಿ ಸುಂದರಿ ಸೇರಿ ಮೂವರನ್ನು ಕೆ.ಜಿ. ನಗರ ಪೊಲೀಸರು ಬಂಧಿಸಿದ್ದಾರೆ.

ಆಟೋ ಚಾಲಕನ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಹತ್ಯೆಯಾದ ಆಟೋ ಚಾಲಕ ಕಾರ್ತಿಕ್‌ ಪತ್ನಿ ರಂಜಿತಾ ಸೇರಿ ಮಂಡ್ಯದ ಕೆಆರ್ ಪೇಟೆ ಮೂಲದ ಸಂಜು ಮತ್ತು ಆತನ ಸಂಬಂಧಿ ಹಾಸನ ಜಿಲ್ಲೆ ಅರಕಲಗೂಡು ನಿವಾಸಿ ಸುಬ್ರಮಣ್ಯ ಬಂಧಿತ ಆರೋಪಿಗಳು.

ರಂಜಿತಾ ಐದು ವರ್ಷದ ಹಿಂದೆ ಆಟೋ ಚಾಲಕ ಕಾರ್ತಿಕ್ ಎಂಬತಾನನ್ನು ಪ್ರೀತಿಸಿ ಮದುವೆ ಆಗಿದ್ದಳು. ಇಬ್ಬರ ಮದುವೆಗೆ ಸಾಕ್ಷಿ ಎಂಬಂತೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಕೊಲೆಯಾದ ಕಾರ್ತಿಕ್ ಸ್ನೇಹಿತ ಸಂಜೀವ್ ಗೆ ತನ್ನದೇ ಮನೆಯಲ್ಲಿ ಆಸರೆ ನೀಡಿದ್ದ. ಆರೋಪಿ ಸಂಜೀವ್ ಸ್ನೇಹ ಮರೆತು ಗೆಳೆಯನ ಪತ್ನಿ ರಂಜಿತಾ ಜೊತೆಯಲ್ಲಿ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದನು.

ಕಾರ್ತಿಕ್ ಮದ್ದೂರು ತಾಲೂಕಿನವರಾಗಿದ್ದು, ಶ್ರೀನಗರ ಸಮೀಪದ ಬೃಂದಾವನ ನಗರದಲ್ಲಿ ವಾಸವಿದ್ದರು. ಕಾರ್ತಿಕ್ ಮತ್ತು ರಂಜಿತಾ 2016 ರಲ್ಲಿ ಮದುವೆಯಾಗಿದ್ದರು. ಆತನ ಆಪ್ತ ಸ್ನೇಹಿತನಾಗಿದ್ದ ಸಂಜು ಕೂಡ ಆಟೋ ಚಾಲಕನಾಗಿದ್ದು ದಂಪತಿ ಜೊತೆಯಲ್ಲಿಯೇ ಇದ್ದ. ಕಾರ್ತಿಕ್ ಮತ್ತು ಸಂಜು ಒಂದೇ ಆಟೋವನ್ನು ಓಡಿಸುತ್ತಿದ್ದರು.

ಈ ನಡುವೆ ಕದ್ದುಮುಚ್ಚಿ ಆಡುತ್ತಿದ್ದ ರಂಜಿತಾ ಮತ್ತು ಸಂಜೀವ್ ಕಾಮದಾಟ ಪ್ರೀತಿಯಾಗಿ ತಿರುಗಿ ಮದುವೆ ಹಂತಕ್ಕೆ ಹೊಗುತ್ತಿದ್ದಂತೆ ಕಾರ್ತಿಕ್ ತಮಗೆ ಅಡ್ಡಿ ಆಗಬಹುದೆಂದು ತಿಳಿದು ಕೊಲೆಗೆ ಸ್ಕೆಚ್ ಹಾಕುತ್ತಾರೆ. ಜುಲೈ 29 ರಂದು ಕಾರ್ತಿಕ್ ನನ್ನ ಆರೋಪಿ ಸಂಜೀವ್, ಸುಬ್ರಮಣ್ಯ ಇಬ್ಬರು ಸೇರಿ ಚನ್ನಪಟ್ಟಣ ಕಡೆ ಕರೆದುಕೊಂಡು ಹೋಗಿದ್ದಾರೆ. ದಾರಿ ಮಧ್ಯೆ ಪಾರ್ಟಿ ಹೆಸರಲ್ಲಿ ಕಾರ್ತಿಕ್‍ಗೆ ಕಂಠ ಪೂರ್ತಿ ಮದ್ಯ ಕುಡಿಸಿ, ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿ ವೃಷಭವತಿ ನದಿಗೆ ಮೂಟೆ ಕಟ್ಟಿ ಎಸೆದು ಬಂದಿದ್ದರು.

ಕೊಲೆ ಬಳಿಕ ಪತ್ನಿ ರಂಜಿತಾ ನನ್ನ ಪತಿ ಕಾರ್ತಿಕ್ ಮಿಸ್ಸಿಂಗ್ ಆಗಿದ್ದಾರೆಂದು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ರಂಜಿತಾಳ ಬಗ್ಗೆ ಅನುಮಾನ ಬಂದು ತನಿಖೆಗೆ ಒಳಪಡಿಸಿದ್ದಾರೆ. ಆಗ ಕೊಲೆಯ ರಹಸ್ಯ ಬಯಲಾಗಿದೆ. ಸದ್ಯ ಘಟನೆ ಸಂಬಂಧ ಕೊಲೆಯಾದ ಕಾರ್ತಿಕ್ ಪತ್ನಿ ರಂಜಿತಾ, ಪ್ರಿಯಕರ ಸಂಜೀವ್, ಸುಬ್ರಮಣ್ಯ ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ