ಸಾರಿಗೆ ನೌಕರರ ವರ್ಗಾವಣೆಗೆ ಇಂದಿನಿಂದ ಕೌನ್ಸೆಲಿಂಗ್ ಆರಂಭ
ಇಂದು ನೌಕರರ ಸರ್ವ ಸಂಘಟನೆಗಳ ಸಭೆ ಆಯೋಜನೆ
ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ಕೆಎಸ್ ಆರ್ ಟಿಸಿ ನೌಕರರಿಗೆ ಇಂದಿನಿಂದ ಕೌನ್ಸೆಲಿಂಗ್ ನಡೆಯಲಿದೆ ಎಂದು ಕೆಎಸ್ಆರ್ ಟಿಸಿ ಸಂಸ್ಥೆ ತಿಳಿಸಿದೆ.
ಅಂತರ್ ನಿಗಮ ವರ್ಗಾವಣೆಗೆ ಅರ್ಹತೆ ಹೊಂದಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಇಂದಿನಿಂದ ಸೆಪ್ಟೆಂಬರ್ 13 ರವರೆಗೆ ಆನ್ ಲೈನ್ ನಲ್ಲಿ ಕೌನ್ಸೆಲಿಂಗ್ ನಡೆಯಲಿದೆ.
ಹಂತಹಂತವಾಗಿ ಕೌನ್ಸೆಲಿಂಗ್ ನಡೆಯಲಿದ್ದು ಈಗಾಗಲೇ ತಿಳಿಸಿರುವ ನೌಕರರು ಕೌನ್ಸೆಲಿಂಗ್ ಹಾಜರಾಗಲಿದ್ದಾರೆ.
ಕೆಎಸ್ಆರ್ ಟಿಸಿ, ಬಿಎಂಟಿಸಿ, ಎನ್ ಇಕೆಆರ್ ಟಿಸಿ ಮತ್ತು ಕೆಕೆಆರ್ ಟಿಸಿ ನಿಗಮಗಳಲ್ಲಿ ಈಗಾಗಲೇ ವರ್ಗಾವಣೆ ಬಯಸಿ ಅರ್ಜಿಸಲ್ಲಿಸಿರುವ ಸಿಬ್ಬಂದಿ ವರ್ಗಾವಣೆಗೆ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಸೂಚಿಸಿದೆ.
ಇಂದು ನೌಕರರ ಸರ್ವ ಸಂಘಟನೆಗಳ ಸಭೆ: ಈ ನಡುವೆ ಮಷ್ಕರದ ವೇಳೆ ವರ್ಗಾವಾಣೆ ಮಾಡಲಾಗಿರುವ ನೌಕರರನ್ನು ಮತ್ತೆ ಅವರ ಮೂಲ ಸ್ಥಳಕ್ಕೆ ನಿಯೋಜಿಸಬೇಕು ಎಂಬುದರ ಕುರಿತು ಇಂದು ನೌಕರರ ಸರ್ವ ಸಂಘಟನೆಗಳ ಸಭೆ ಕರೆದಿದ್ದು, ಆ ಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಗೆ ಬರಲಿವೆ.
ಒಂದು ವೇಳೆ ಎಲ್ಲ ಸಂಘಟನೆಗಳ ಪ್ರಮುಖರು ಒಂದು ಅಂತಿಮ ನಿರ್ಧಾರ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ನೌಕರರಿಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.